ಬೆಂಗಳೂರು:ಗಸ್ತು ತಿರುಗಬೇಕಾದ ವಾಹನಗಳು ಬೇರೆ ಕೆಲಸಕ್ಕೆ ನಿಯೋಜನೆಗೊಂಡರೆ, ಆಂಬುಲೆನ್ಸ್​ಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರುವುದೇ ಇಲ್ಲ. ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯ ನಿರ್ವಹಣೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ನಡೆಸಿ ಈ ಸರಣಿ ಲೋಪಗಳ ಸರಮಾಲೆ ಬಿಚ್ಚಿಟ್ಟಿದ್ದಾರೆ.
2015-16 ಮತ್ತು 2017-18ರ ನಡುವೆ 300 ಅತ್ಯಾಧುನಿಕ ಹೆದ್ದಾರಿ ಗಸ್ತು ವಾಹನಗಳನ್ನು ಹೆದ್ದಾರಿ ಸುರಕ್ಷತಾ ಯೋಜನೆ ಅಡಿ ನಿಯೋಜಿಸಲಾಗಿದೆ. ಸ್ಪಂದಿಸುವ ಘಟಕವಾಗಿ, ಪ್ರಥಮ ಚಿಕಿತ್ಸೆ ನೀಡುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್, ರಕ್ಷಣಾ ಕಾಯಾಚರಣೆ ತಂಡವಾಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲಹಾ ಘಟಕವಾಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಇದು ಆಗಿಲ್ಲ ಎಂಬುದನ್ನು ವರದಿ ಬೊಟ್ಟುಮಾಡಿದೆ.
ಬೆಂಗಳೂರು ರಸ್ತೆ ಅಪಾಯಕಾರಿ:ಪ್ರತಿ ಕಿಲೋಮೀಟರ್​ಗೆ ಸರಾಸರಿ 19ರಿಂದ 20 ಅಪಾಯಕಾರಿ ಸ್ಥಳ ಹೊಂದಿರುವ ಬಿಬಿಎಂಪಿ ರಸ್ತೆಗಳು ರಸ್ತೆ ಬಳಕೆದಾರರಿಗೆ ಅಪಾಯಕಾರಿ ಎಂದು ಸಿಎಜಿ ಹೇಳಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರಮವಾಗಿ ಪ್ರತಿ ಕಿಲೋಮೀಟರ್​ಗೆ ಕ್ರಮವಾಗಿ 8.87, 8.43 ಮತ್ತು 7.39 ಅಪಾಯ ಸಂಗತಿ ಅಥವಾ ಸ್ಥಳ ಹೊಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೇಗಿರಬೇಕು?:ರಾಷ್ಟ್ರೀಯ ಮತ್ತು ರಾಜ್ಯ ರಸ್ತೆ ಸುರಕ್ಷತಾ ನೀತಿ ಪ್ರಕಾರ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಕೊಡುವಂತಿರಬೇಕು ಹಾಗೂ ಸುರಕ್ಷಿತವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಹೆದ್ದಾರಿಯುದ್ದಕ್ಕೂ ಪ್ರತಿ 50 ಕಿ.ಮೀ.ಗೆ ಒಂದರಂತೆ ಬೇಸಿಕ್ ಲೈಫ್ ಸಪೋರ್ಟ್ ಆಂಬುಲೆನ್ಸ್ ಲಭ್ಯವಿರಬೇಕು. ಕರ್ನಾಟಕದಲ್ಲಿ 108 ಆಂಬುಲೆನ್ಸ್ ಗಳನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ.
12 ಜಿಲ್ಲೆ ಪರಿಶೀಲನೆ:ಆಡಿಟ್ ತಂಡವು 12 ಜಿಲ್ಲೆಯ 275 ಆಂಬ್ಯುಲೆನ್ಸ್​ಗಳನ್ನು ಪರಿಶೀಲಿಸಿದೆ. ವೈದ್ಯಕೀಯ ಸಲಕರಣೆಗಳಾದ ಟೂರ್ನಿಕೆಟ್​ಗಳು, ಥರ್ವಮೀಟರ್​ಗಳು, ಆಸ್ಪಿರೇಟರ್, ಆರ್ಟರಿಯಲ್ ಪೋರ್ಸ್ಟ್, ಡಿಜಿಟಲ್ ಉಪಕರಣ, ಅಗ್ನಿಶಾಮಕ, ಡಿಫಿಬ್ರಿಲೇಟರ್, ಪೋರ್ಟಬಲ್ ಆಮ್ಲಜನಕ ಸಿಲಿಂಡರ್, ಸ್ಕೂಪ್ ಸ್ಟ್ರೆಚರ್ ಇರಿಸಲಾಗಿಲ್ಲ ಅಥವಾ ಕಳಪೆ ಸ್ಥಿತಿಯಲ್ಲಿದ್ದವು.
ಆಂಬುಲೆನ್ಸ್ ವಿಳಂಬ:2 ಜಿಲ್ಲೆಗಳಲ್ಲಿ ಆಂಬುಲೆನ್ಸ್ ಕೆಲಸ ಮಾಡದ ಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿರಲಿಲ್ಲ. ಆಂಬುಲೆನ್ಸ್​ಗಳ ಮೂಲ ಸ್ಥಳವು ದೂರದಲ್ಲಿ ಇದ್ದುದರಿಂದ ಅಥವಾ ವಿಳಂಬವು 30 ನಿಮಿಷಕ್ಕಿಂತ ಹೆಚ್ಚಾಗಿದ್ದುದರಿಂದ ಸಂತ್ರಸ್ತರಿಗೆ ಸುಮಾರು 90 ಸಾವಿರ ನಿದರ್ಶನಗಳಲ್ಲಿ ಸಮಯೋಚಿತ ವೈದ್ಯಕೀಯ ಆರೈಕೆ ಸಾಧ್ಯವಾಗಿಲ್ಲ.
ನಿರ್ಲಕ್ಷ್ಯ ಮಾತ್ರ ಕಾರಣವಲ್ಲ:ಅಪಘಾತದ ಪ್ರಾಥಮಿಕ ಕಾರಣ, ಸಮಯ, ಗೋಚರತೆ, ಅಪಘಾತಕ್ಕೀಡಾಗಿರುವ ವಾಹನಗಳ ಪ್ರಕಾರ, ರಸ್ತೆಯಲ್ಲಿನ ಅಪಾಯಗಳು ಮುಂತಾದ ಅಂಶ ದಾಖಲಿಸದೆ ಕೇವಲ ಅತಿ ವೇಗ ನಿರ್ಲಕ್ಷ್ಯ ಚಾಲನೆ ಎಂದು ದಾಖಲಿಸಲಾಗುತ್ತಿದೆೆ. ಅಪಘಾತದ ಕಾರಣವನ್ನು ನಿರ್ಧರಿಸುವಲ್ಲಿ ಅವುಗಳನ್ನು ಪರಿಗಣಿಸಿದರೆ ರಸ್ತೆ ಸುರಕ್ಷತಾ ಕ್ರಮಗಳ ಉತ್ತಮ ನಿರ್ವಹಣೆಗಾಗಿ ಸಕ್ಷಮ ಅಧಿಕಾರಿಗಳು ಈ ಅಂಶ ಬಳಸಬಹುದು ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.
ಶಾಕಿಂಗ್…!:ಆರ್​ಟಿಒ ಇನ್​ಸ್ಪೆಕ್ಟರ್​ಗಳಂತಹ ನಿರ್ಣಾಯಕ ಶ್ರೇಣಿಗಳಲ್ಲಿ ಗಮನಾರ್ಹವಾದ ಖಾಲಿ ಹುದ್ದೆಗಳಿರುವ ಕಾರಣದಿಂದ ಚಾಲನಾ ಪರವಾನಗಿಗಳು ಮತ್ತು ವಾಹನಗಳಿಗೆ ಅರ್ಹತಾ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ನಡೆಸುವ ಪರೀಕ್ಷೆಗಳ ಒಟ್ಟಾರೆ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಸಾರಿಗೆ ಮತ್ತು ಸಾರಿಗೆ ಏತರ ವಾಹನಗಳಿಗೆ ಸಂಬಂಧಿಸಿದಂತೆ ನವೀಕರಣ ಬಾಕಿ ಇರುವ ಚಾಲನಾ ಪರವಾನಗಿಗಳ ದತ್ತಾಂಶದ ವಿಶ್ಲೇಷಣೆಯಿಂದ ತಿಳಿದುಬಂದಿದ್ದೇನೆಂದರೆ ಚಾಲನಾ ಪರವಾನಗಿಗಳನ್ನು ನವೀಕರಿಸದೆಯೇ ಚಾಲನೆ ಮಾಡುತ್ತಿರುವ ಘಟನೆಗಳು ವರ್ಷದಿಂದ ವರ್ಷಕ್ಕೆ ತೀವ್ರತರ ಹೆಚ್ಚಳ ತೋರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
