ಹುಬ್ಬಳ್ಳಿ:ಮದುಮಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಶ್ರೀರಾಮ ಬಗಾಡೆ ಪಾಲ್ಗೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮುಖೇನ ಶೈಲಜಾ ಹುಬ್ಬಳ್ಳಿಯ ಹಿರಿಮೆ-ಗರಿಮೆ ಹೆಚ್ಚಿಸಿದ್ದಾರೆ.
ಬ್ರಾಹ್ಮಣಿ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್ ಪ್ರೈ. ಲಿ., ಬೀಸಾ ಇಂಟರ್‌ನ್ಯಾಶನಲ್ ಬ್ಯೂಟಿ ಸಲೂನ್ ಟ್ರೇಡ್ ಶೋ ಹಾಗೂ ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 45 ನಿಮಿಷದಲ್ಲಿ ಮದುಮಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆ 20 ಡಿಸೆಂಬರ್ 2020ರಂದು ಆಯೋಜಿಸಲಾಗಿತ್ತು. ಈ ಸ್ಪರ್ಧೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿತ್ತು. ದೇಶಾದ್ಯಂತ 1146 ಸ್ಪರ್ಧಾಳುಗಳಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಈ ಪೈಕಿ ಹುಬ್ಬಳ್ಳಿಯಿಂದ ಶೈಲಜಾ ಅವರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ವಿಶೇಷ. ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಕ್ಕೆ ಶೈಲಜಾ ಅವರಿಗೆ ಪ್ರಶಂಸೆ ಪತ್ರ ರವಾನಿಸಲಾಗಿದೆ.
26 ವರ್ಷದಿಂದ ಬ್ಯೂಟಿಷಿಯನ್ ಆಗಿ ಕಾರ್ಯ ಮಾಡುತ್ತಿರುವ ಮೂಲತಃ ರಾಣೆಬೆನ್ನೂರಿನವರಾದ ಹಾಲಿ ಹುಬ್ಬಳ್ಳಿ ನಿವಾಸಿಯಾಗಿರುವ ಶೈಲಜಾ ಶ್ರೀರಾಮ ಬಗಾಡೆ, ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಅಕ್ಷಯ ಎನ್‌ಕ್ಲೆವ್‌ನಲ್ಲಿ ಶೈಲಾ ಬ್ಯೂಟಿಕೇರ್ ನಡೆಸುತ್ತಿದ್ದಾರೆ. ವಿಜಯವಾಣಿಯೊಂದಿಗೆ ಮಾತನಾಡಿದ ಶೈಲಜಾ ‘ಫೇಸ್ ಕೊಂಟರಿಂಗ್, ಐಲ್ಯಾಶ್, ಹೈಲೈಟ್ಸ್‌ನಂತಹ ಕಠಿಣ ಸವಾಲಿನ ಸ್ಪರ್ಧೆ ಇದಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರಶಂಸಾ ಪತ್ರ ನೀಡಲಾಗಿದೆ. ಗಿನ್ನೆಸ್ ದಾಖಲೆ ಬರೆಯುತ್ತೇನೆ ಎನ್ನುವ ವಿಶ್ವಾಸವಿದೆ’ ಎಂದರು.

ಈ ಸಲ ಶಾಲೆಗೆ ಡೊನೇಷನ್​ ನೀಡಬೇಡಿ, ಫೀಸು ಕೂಡ ಪೂರ್ತಿ ಕೊಡಬೇಡಿ..

ಒಂದೇ ದಿನದಲ್ಲಿ ಹಣ ದುಪ್ಪಟ್ಟು ಮಾಡಲು ಹೋಗಿ ಜೈಲು ಸೇರಿದ ಬ್ಯಾಂಕ್ ಮ್ಯಾನೇಜರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
