| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಪ್ರತಿಧ್ವನಿಸುತ್ತಿದ್ದ ಜಾತಿ ಮೀಸಲಾತಿ ಬೇಡಿಕೆಯ ಕೂಗು ಈಗ ಉಪಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಬಲಪಡೆದಿರುವುದು ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಇಕ್ಕಟ್ಟು ತಂದಿದೆ.
‘ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಿದ್ಧವಿದ್ದೇವೆ’ ಎಂಬ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೇಳಿಕೆ ಮತ್ತು ‘ಜಾತಿಗಣತಿ ವರದಿ ಸ್ವೀಕರಿಸಿ ಅದರಂತೆ ನಡೆದುಕೊಳ್ಳಲು ನಾವು ತಯಾರಿದ್ದೇವೆ’ ಎಂಬ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಭರವಸೆ ಸಂಚಲನಕ್ಕೆ ಕಾರಣವಾಗಿದೆ. ಸಂಪುಟದ ಹಿರಿಯ ಸಹೋದ್ಯೋಗಿಗಳ ಹೇಳಿಕೆಗಳಿಂದ ಸರ್ಕಾರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಪಾದಯಾತ್ರೆ ಜತೆಗೆ ತೀವ್ರ ಹೋರಾಟ ಕೈಕೊಳ್ಳುವಂತಹ ತೀರ್ವನಗಳೂ ಹೊರಬಿದ್ದಿವೆ. ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಮನವಿಕೊಟ್ಟು ಸುಮ್ಮನಾಗಿದ್ದ ಸಣ್ಣಪುಟ್ಟ ಜಾತಿಗಳೂ ಈ ಬೆಳವಣಿಗೆ ಬಳಿಕ ಇದೇ ಸರಿಯಾದ ಸಮಯವೆಂದು ಅಖಾಡಕ್ಕಿಳಿಯಲು ಸಿದ್ಧತೆ ಆರಂಭಿಸಿವೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಈ ಜಾತಿ ಹೋರಾಟದ ಪರಿಣಾಮವನ್ನು ಸರಿಯಾಗಿ ಗ್ರಹಿಸಿರುವ ರಾಜಕೀಯ ನಾಯಕರು ತಮ್ಮ ಗಮನವನ್ನು ಅತ್ತ ಚಿತೆôಸಿದ್ದಾರೆ.
ವಾಲ್ಮೀಕಿಗಳ ಬೇಡಿಕೆ:ಮೀಸಲು ವಿಚಾರವಾಗಿ ವಾಲ್ಮೀಕಿ ಸಮಾಜ ಆಗ್ರಹಿಸುತ್ತಲೇ ಇದೆ. ಸಮುದಾಯದ ಜನಪ್ರತಿನಿಧಿಗಳೆಲ್ಲ ರಾಜೀನಾಮೆ ಕೊಟ್ಟಾದರೂ ಸರಿ ಸರ್ಕಾರದ ಮೇಲೆ ಒತ್ತಡ ತರಬೇಕೆಂಬ ನಿರ್ಣಯ ಮಾಡಿಕೊಂಡಿದೆ. ಇತ್ತ ಕುರುಬ ಸಮಾಜ ಕೂಡ ಸರಣಿ ಸಭೆಗಳನ್ನು ನಡೆಸಿದ್ದು, ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ರೀತಿ ವಿವಿಧ ಜಾತಿ ಪಂಗಡಗಳಿಂದ ವಿಷಯವನ್ನು ಹಸಿರಾಗಿಡುವ ಪ್ರಯತ್ನ ನಡೆಯುತ್ತಿದೆ.
ಸರ್ಕಾರಕ್ಕೆ ಸಲೀಸಲ್ಲ:ಈ ಬೆಳವಣಿಗೆ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಕೆಲವು ಬೇಡಿಕೆಗಳ ಬಗ್ಗೆ ಸ್ಪಷ್ಟವಾದ ಸಹಮತವಿದೆ. ಆದರೆ, ತೀರ್ಮಾನ ಕೈಗೊಂಡರೆ ರಾಜಕೀಯ ಜಾತಿ ಸಮೀಕರಣದಲ್ಲಿ ಪಕ್ಷಕ್ಕೆ ಪೆಟ್ಟು ಬೀಳುವ ಆತಂಕ ಸರ್ಕಾರ ನಡೆಸುವವರಲ್ಲಿದೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಬೆಂಬಲ ವ್ಯಕ್ತಪಡಿಸಿದರೂ ಈಗ ಅದನ್ನು ಜಾರಿ ಮಾಡುವುದು ಸುಲಭವಲ್ಲ. ಏಕೆಂದರೆ ಪ್ರತಿ ಹೆಜ್ಜೆಯೂ ರಾಜಕೀಯ ಪರಿಣಾಮಕ್ಕೆ ದಾರಿಯಾಗುವುದು ಸ್ಪಷ್ಟ. ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವಷ್ಟು ಬೆಳವಣಿಗೆ ನಡೆದರೂ ಅಚ್ಚರಿಪಡಬೇಕಿಲ್ಲ. ಹೀಗಿರುವಾಗ ಒಮ್ಮತದಿಂದ ಕರೆದೊಯ್ಯುವ ಅನಿವಾರ್ಯತೆ ಎದುರಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೋಳ, ಕೆ.ಎಚ್.ಮುನಿಯಪ್ಪ ಹೀಗೆ ಹತ್ತು ಹಲವು ನಾಯಕರು ಮೀಸಲು ವಿಚಾರದಲ್ಲಿ ವಾದ ಮುಂದಿಟ್ಟು ಆಯಾ ಸಮುದಾಯದ ಕಿವಿ ನೆಟ್ಟಗಾಗುವಂತೆ ಮಾಡಿದ್ದಾರೆ. ಈ ಒತ್ತಡಕ್ಕೆ ಸರ್ಕಾರ ಮಣಿದದ್ದೇ ಆದರೆ ಜೀವಮಾನದಲ್ಲಿ ತಂತಮ್ಮ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ ಗರಿ ತಮ್ಮಮುಡಿಗೇರುತ್ತದೆ ಎಂಬ ಅರಿವು ಅವರಿಗಿದೆ.
1.ಹಿಂದುಳಿದ ವರ್ಗದ ಮೀಸಲು ಪ್ರಮಾಣ ಹೆಚ್ಚಿಸಿ ವರ್ಗೀಕರಣದ ಉದ್ದೇಶದಿಂದಲೇ ಸಿದ್ಧಪಡಿಸಿದ ಸಾಮಾಜಿಕ ಆರ್ಥಿಕ ಗಣತಿ ಸಿದ್ಧವಿದೆ
2.ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಪ್ರಸ್ತಾಪಿಸುವ ಎ.ಜೆ.ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 7 ವರ್ಷ ಕಳೆದಿದೆ
3.ಶಿಕ್ಷಣ, ಉದ್ಯೋಗದಲ್ಲಿ ಎಸ್ಸಿ/ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವ ಶಿಫಾರಸು ಮಾಡಿರುವ ನ್ಯಾ.ನಾಗಮೋಹನದಾಸ್ ವರದಿ ಈಗಷ್ಟೇ ಸರ್ಕಾರದ ಕೈಸೇರಿದೆ.
ಎಸ್ಸಿ/ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವುದೇ ದೊಡ್ಡ ಸವಾಲು. ಹಿಂದುಳಿದ ವರ್ಗದವರೂ ತಮ್ಮ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎನ್ನುತ್ತಾರೆ. ಆದರೆ, ಒಟ್ಟಾರೆ ಮೀಸಲು ಪ್ರಮಾಣ ಶೇ.50 ಮೀರಬಾರದೆಂದು ಸುಪ್ರೀಂಕೋರ್ಟ್ ತೀರ್ಪೆಂದರಲ್ಲಿ ಅಭಿಪ್ರಾಯಪಟ್ಟಿದೆ. ಹೀಗಾಗಿ ಸಮತೋಲನ ಸಾಧಿಸುವುದು ಹೇಗೆಂಬುದೇ ಸರ್ಕಾರದ ಮುಂದಿರುವ ಪ್ರಶ್ನೆಯಾಗಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸ್ಪೃ್ಯರಲ್ಲದವರೂ, ಹಿಂದುಳಿದ ವರ್ಗಗಳ ಗುಣಲಕ್ಷಣ ಇಲ್ಲದವರೂ ಇದ್ದಾರೆ. ಇಷ್ಟು ದಿನ ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದವರು ಈ ಅನ್ಯಾಯ ಸರಿಪಡಿಸಿಲ್ಲ. ಈಗ ಪ್ರಯತ್ನ ನಡೆಸಿದರೆ ಟೀಕಿಸುತ್ತಾರೆ.
–ವಾದಿರಾಜ್, ಆರ್​ಎಸ್​ಎಸ್
1. ಹಿಂದುಳಿದ ವರ್ಗಕ್ಕೆ (ಎ2) ಸೇರಿಸಲು ಪಂಚಮಸಾಲಿಗಳ ಪಟ್ಟು
2. ಸದಾಶಿವ ಆಯೋಗದ ವರದಿ ಜಾರಿಮಾಡಿ ಎಸ್ಸಿ ಒಳಮೀಸಲು ನಿಗದಿ ಮಾಡಬೇಕು
3. ಹಿಂದುಳಿದ ವರ್ಗದ ಮೀಸಲು ಪ್ರಮಾಣವನ್ನೇ ಹೆಚ್ಚಿಸಬೇಕು
4. ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ಕೊಡಬೇಕು
5. ಕುರುಬರನ್ನು ಹಿಂದುಳಿದ ವರ್ಗದಿಂದ ಎಸ್ಟಿಗೆ ಸೇರಿಸಬೇಕು
6. ಬೆಸ್ತರು, ಕೋಲಿ, ಗಂಗಾಮತಸ್ತರನ್ನು ಪ.ಪಂಗಡಕ್ಕೆ ಸೇರಿಸಬೇಕು
7. ಸವಿತಾ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು
8. ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು
ಜನಸಂಖ್ಯೆ ಆಧಾರದ ಮೇಲೆ ವಾಲ್ಮೀಕಿ ಸಮುದಾಯದ ಮೀಸಲು ಹೆಚ್ಚಿಸಬೇಕೆಂಬ ಬೇಡಿಕೆ 1991ರಿಂದಲೂ ಇದೆ. ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದೇವೆ. ಈಗಲೂ ಚಾಲನೆಯಲ್ಲಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ.
|ಚಂದ್ರಶೇಖರ್ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ
ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಸ್ಪಷ್ಟತೆ ಇಲ್ಲ. ಈಗಾಗಲೇ ಸಂಘ ಪರಿವಾರ ಸಭೆ ನಡೆಸಿ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿರುವುದರಿಂದ ಪಕ್ಷ ಕೊಂಚ ನೆಮ್ಮದಿಯಲ್ಲಿದೆ. ಆದರೆ, ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟ ಎಂಬ ಸ್ಪಷ್ಟ ಅರಿವು ನಾಯಕರಿಗಿದೆ. ಬೇಡಿಕೆಗೆ ಆಗ್ರಹಿಸಿ ಹೋರಾಟ ತೀವ್ರವಾದರೆ ಏನು ಮಾಡುವುದೆಂಬ ಗೊಂದಲವೂ ಇದೆ.
ಸದಾಶಿವ ಆಯೋಗದ ವಿಚಾರದಲ್ಲಿ ಪರ-ವಿರೋಧದ ತಿಕ್ಕಾಟ ಮುಂಚೆಯಿಂದಲೂ ಇದ್ದು, ಈಗಲೂ ಒಮ್ಮತವಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಏನು ಬೇಕಾದರೂ ಆಗಲಿ. ಸರ್ಕಾರದ ತೀರ್ವನದಿಂದ ಆಗುವ ರಾಜಕೀಯ ಬೆಳವಣಿಗೆ ಮತ್ತು ತಮಗಾಗುವ ಲಾಭದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಒಕ್ಕಲಿಗರ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡ ಜೆಡಿಎಸ್​ಗೆ ಈ ಜಾತಿ ಬೇಡಿಕೆ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವಿಲ್ಲ. ಯಾರೇ ಮನವಿ ನೀಡಿದರೂ ಅವರಿಗೆ ಜೈ ಎನ್ನುವ ಮನಸ್ಥಿತಿ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 8 =
Remember me
