ಬೆಂಗಳೂರು:ಮೊದಲನೆಯ ಅಲೆಗಿಂತ ಜೋರಾಗಿ ವ್ಯಾಪಿಸಿರುವ ಕರೊನಾ ಎರಡನೇ ಅಲೆ ಇದೀಗ ಬೆಂಗಳೂರಿಗೆ ಬಂದಿರುವ ಜನರು ಊರು ಬಿಡುವಂತೆ ಮಾಡಿದೆ. ಹೆಚ್ಚಾಗುತ್ತಿರುವ ಸೋಂಕಿನ ಪ್ರಕರಣಗಳು, ಸೋಂಕಿನಿಂದಾದ ಸಾವುಗಳ ಪೈಕಿ ಅತಿದೊಡ್ಡ ಪ್ರಮಾಣ ಬೆಂಗಳೂರಿನದ್ದೇ ಆಗಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜನರು, ಬಾರದೂರಿಗೆ ಹೋಗುವ ಬದಲು ಬಂದೂರಿಗೆ ಹೋಗುವುದೇ ಉತ್ತಮ ಎಂದು ಮರಳಿ ಊರಿಗೆ ಹೊರಟಿದ್ದಾರೆ.
ಹೊಟ್ಟೆಪಾಡಿಗಾಗಿ ರಾಜ್ಯದ ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಜನರಲ್ಲಿ ಹಲವರು ಕರೊನಾ ಹಾವಳಿ ತಗ್ಗದಿರುವುದರಿಂದ ಮತ್ತು ಸೋಮವಾರದಿಂದ ಜಾರಿಗೆ ಬರಲಿರುವ ಕಟ್ಟುನಿಟ್ಟಿನ ಲಾಕ್​ಡೌನ್​ನಿಂದ ಚಿಂತಿತರಾಗಿ, ಇನ್ನಿಲ್ಲಿದ್ದು ಏನು ಮಾಡುವುದು ಎಂದುಕೊಂಡ ತಮ್ಮೂರಿನ ಕಡೆಗೆ ಹೊರಟ ದೃಶ್ಯಗಳು ಬೆಂಗಳೂರಿನಲ್ಲಿ ಇಂದು ಹಲವೆಡೆ ಕಂಡುಬಂದಿವೆ.
ಇದನ್ನೂ ಓದಿ:ಕೆಎಎಸ್ ಅಧಿಕಾರಿ ಚೇಂಬರ್‌ನ ವಾಷ್ ರೂಮ್​ನಲ್ಲಿ ದಂಪತಿಯ ಶವ ಪತ್ತೆ; ಭೀಕರವಾಗಿ ಕೊಲೆ ಮಾಡಿದ ಹಂತಕರು…
ಅದರಲ್ಲೂ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯದಲ್ಲಿ ಬಂದು ನೆಲೆಸಿದ್ದ ರಾಜ್ಯದ ನಾನಾ ಭಾಗದ ಕಾರ್ಮಿಕರು, ಇಂದು ಸಿಕ್ಕವಾಹನಳಲ್ಲಿ ಲಗೇಜುಗಳನ್ನು ತುಂಬಿಸಿಕೊಂಡು, ಅವುಗಳ ಅಕ್ಕಪಕ್ಕದಲ್ಲೇ ಜಾಗ ಮಾಡಿಕೊಂಡು ಕುಳಿತುಕೊಂಡು ಭವಿಷ್ಯದ ಚಿಂತೆಯಲ್ಲಿ ಊರಿನ ಕಡೆಗೆ ಹೊರಟಿರುವ ಹಲವು ದೃಶ್ಯಗಳು ಕಂಡುಬಂದವು.
‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
