ಬೆಂಗಳೂರು:ಒಂದು ಹಲ್ಲೆ ಪ್ರಕರಣವನ್ನು ಕೇವಲ ಬಾಟಲಿಯೊಂದರ ಮುಚ್ಚಳದಿಂದ ಬಗೆಹರಿಸಲು ಸಾಧ್ಯವೇ? ಸಿಸಿ ಟಿವಿ ಇರುವ ಕಾಲದಲ್ಲಿ ಮುಚ್ಚಳದ ಸಹಾಯದಿಂದ ಯಾಕೆ ಹುಡುಕಾಟ ನಡೆಸಬೇಕಾಯ್ತು? ಈ ಸುದ್ದಿಯಲ್ಲಿ ಬೆಂಗಳೂರಿನಲ್ಲಿ ನಡೆದ ವಿಚಿತ್ರ ಪ್ರಕರಣದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇದೇ ಜುಲೈನ 16ರ ಮಧ್ಯರಾತ್ರಿ, ಮಿಲೇನಿಯಂ ಬಾರ್ ಬಳಿ ಆಟೋದಲ್ಲಿ ಕುಳಿತಿದ್ದ ಮಿಥುನ್ ರಾಜ್ ಹಾಗೂ ಆತನ ಗೆಳೆಯನ ಮೇಲೆ ಹಲ್ಲೆ ನಡೆದಿತ್ತು. ಈ ಸಂದರ್ಭ ಅವರು ಜೋರಾಗಿ ಹಾಡು ಹಾಕಿಕೊಂಡು ಮಾತನಾಡುತಿದಿದ್ದರು. ಈ ವೇಳೆ ಎರಡು ಬೈಕ್​ನಲ್ಲಿ ಬಂದ ನಾಲ್ವರು ಇವರಿಬ್ಬರ ಮೇಲೆ ದಾಳಿ ನಡೆಸಿದ್ದರು.
ಇದನ್ನೂ ಓದಿ:ಭಾರತದ ಮಾರುಕಟ್ಟೆಗೆ ಮತ್ತೆ ಕಾಲಿಡಲಿದೆ ಕೋಬ್ರಾ ಬಿಯರ್​​..?
ಬಿಯರ್ ಬಾಟಲ್​ನಿಂದ ತಲೆಗೆ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದರು. ರಸ್ತೆ ಮೇಲೆ ರಕ್ತ ಚೆಲ್ಲಿತ್ತು. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಾಗಿ ತನಿಖೆ ಕೈಗೊಂಡ ಚಂದ್ರಲೇಔಟ್ ಪಿಎಸ್ಐ ರವೀಶ್, ಗಾಯಾಳುಗಳನ್ನು ವಿಚಾರಣೆ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಂದವರು ಯಾರು, ಯಾಕೆ ದಾಳಿ ಮಾಡಿದ್ದು, ಎಲ್ಲಿಂದ ಬಂದದ್ದು ಈ ಕುರಿತಾಗಿ ಯಾವ ಮಾಹಿತಿಯೂ ಲಭ್ಯವಾಗಿರಲಿಲ್ಲ. ಸಿಸಿ ಟಿವಿಯಲ್ಲೂ ಬೈಕ್ ಹಾಗೂ ಆರೋಪಿಗಳ ಚಹರೆಯ ಸ್ಪಷ್ಟತೆ ಸಿಕ್ಕಿರಲಿಲ್ಲ.
ಈ ಪ್ರಕರಣಕ್ಕೆ ಅಂತ್ಯವೇ ಇಲ್ಲ ಎನ್ನುವಾಗ ಎದುರಾದದ್ದು ಬಿಯರ್ ಬಾಟಲ್ ಮುಚ್ಚಳ! ಇದರಿಂದಾಗಿ ಮಧ್ಯರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಗ್ಯಾಂಗ್​ನ ನಾಲ್ವರನ್ನೂ ಇದೀಗ ಬಂಧಿಸಲಾಗಿದೆ. ಬಂಧಿತರನ್ನು ಅಫ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳದ ಪರಿಶೀಲನೆ ವೇಳೆ ಸಿಕ್ಕ ಬಿಯರ್ ಬಾಟಲ್​ಗಳು ಸಿಕ್ಕಿದ್ದು, ಬಾಟಲ್ ನ ಕ್ಯಾಪ್ ಮೇಲಿನ ಬ್ಯಾಚ್ ನಂಬರ್ ಪತ್ತೆಯಾಗಿತ್ತು. ಇದನ್ನೇ ಲೀಡ್ ಮಾಹಿತಿಯಾಗಿ ಪರಿಗಣಿಸಿ, ಪಿಎಸ್ಐ ರವೀಶ್ ಬೆನ್ನು ಹತ್ತಿದ್ದಾರೆ. ಆ ಬ್ಯಾಚ್ ನಂಬರ್​ನ ಬಾಟಲಿ ಯಾವ ಬಾರ್​ನಿಂದ ಮಾರಾಟವಾಗಿದೆ ಎನ್ನುವದನ್ನು ಪತ್ತೆ ಮಾಡಿದ್ದಾರೆ.‘
ಇದನ್ನೂ ಓದಿ:ಪಾತ್ರೆ ತೊಳೆಯುವ ವಿಚಾರಕ್ಕೆ ಗಲಾಟೆ; ಬಿಯರ್ ಬಾಟಲ್​​​ನಿಂದ ಸ್ನೇಹಿತನಿಗೆ ಇರಿದ
ನಂತರ ಅದೇ ಬಾರ್​ಗೆ ತೆರಳಿದ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಗಳು ಬಿಯರ್ ಖರೀದಿ ಮಾಡಿ ಬೈಕ್​ನಲ್ಲಿ ತೆರಳುವ ದೃಶ್ಯ ಲಭ್ಯವಾಗಿದೆ. ಹೀಗೆ ಸಿಕ್ಕ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಯಾಗಿದ್ದು ನಾಲ್ವರು ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದು ಬೈಕ್​ನಲ್ಲಿ ತೆರಳುವಾಗ ಸೌಂಡ್ ಕಿರಿಕಿರಿ ಮಾಡಿತ್ತಂತೆ. ಅದೇ ವಿಚಾರವಾಗಿ ಬಂದು ಹಲ್ಲೆ ಮಾಡಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
