ಹುಬ್ಬಳ್ಳಿ:ಹೊಟ್ಟೆಗೆ ‘ಎಣ್ಣೆ’ ಇಳಿಸಿ ಮನೆಯಲ್ಲಿ ಗಲಾಟೆ ಮಾಡುವ ಪುರುಷರೇ ಜೋಕೆ! ನಿಮ್ಮ ಸಹೋದರಿಯ ಸಿಟ್ಟು ನೆತ್ತಿಗೇರಿದ್ರೆ ನಿಮ್ಮ ಕತೆ ಅಷ್ಟೇ… ಹೌದು, ತಾಲೂಕಿನಲ್ಲಿ ಗುರುವಾರ ಸಂಭವಿಸಿದ ಘಟನೆಯೊಂದು ಈ ಮಾತನ್ನು ನೆನಪಿಸುತ್ತದೆ.
ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಅಣ್ಣನ ವರ್ತನೆಗೆ ಬೇಸತ್ತ ತಂಗಿಯೊಬ್ಬಳು ಗ್ರಾಮದ ನಡುರಸ್ತೆಯಲ್ಲೇ ಅಣ್ಣನ ತಲೆಗೆ ಬಿಯರ್ ಬಾಟಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಯ್ಯೋ, ಬಿಟ್ಬುಡೇ ಎಂದು ಆತ ಗೋಗರೆಯುತ್ತ ರಕ್ತದ ಮಡುವಲ್ಲೇ ಬಿದ್ದು  ನರಳಾಡುತ್ತಿದ್ದ.ಇದನ್ನೂ ಓದಿರಿಕುಮಾರಸ್ವಾಮಿ ಈಗಲೂ… ಮುಂದೆಯೂ ನನ್ನ ಸ್ನೇಹಿತ ಎಂದ ಡಿಕೆಶಿ
ಇಂತಹ ಘಟನೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯಲ್ಲಿ ಸಂಭವಿಸಿದೆ. ಕುಡಿದ ಅಮಲಿನಲ್ಲಿ ಕಿರುಕುಳ ನೀಡುತ್ತಿದ್ದ ಅಣ್ಣನ ವರ್ತನೆಯನ್ನು ಸಹಿಸಿಕೊಂಡೇ ಇದ್ದ ತಂಗಿಗೆ ಗುರುವಾರ ಬೆಳಗ್ಗೆ ತಾಳ್ಮೆಯ ಕಟ್ಟೆ ಹೊಡೆದಿತ್ತು. ಅವನ ಕೈಯಲ್ಲೇ ಇದ್ದ ಬಿಯರ್​ ಬಾಟಲಿ ಕಿತ್ತುಕೊಂಡ ಆಕೆ ಬುರುಡೆಗೆ ಬೀಸಿದ್ದಾಳೆ. ಅಷ್ಟರಲ್ಲಿ ಸ್ಥಳೀಯರು ಬಂದು ಆಕೆಯನ್ನು ತಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ವೈರಲ್​ ಆಗಿದೆ.
ಗಂಭೀರ ಗಾಯಗೊಂಡ ಕುಡುಕ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವ ವಿವಾಹಿತೆಯನ್ನು ಕೊಂದು ಮನೆಯಲ್ಲೇ ಹೂತಿಟ್ಟ! 15 ದಿನದ ಬಳಿಕ ಬಯಲಾಯ್ತು ರಹಸ್ಯ

ಮನೆ ಪಾಠ ಹೇಳಿಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ, ಬಾಲಕಿ ಗರ್ಭಿಣಿ

ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
