ದಾವಣಗೆರೆ:ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ. ಚಂದ್ರಶೇಖರ್‌ ಮೊಬೈಲ್‌ಗೆ ನಿರಂತರವಾಗಿ ಒಂದೇ ನಂಬರ್​​​​​ನಿಂದ ಹತ್ತಕ್ಕೂ ಹೆಚ್ಚು ಬಾರಿ ಕರೆ ಹಾಗೂ ಮೆಸೇಜ್ ಬಂದಿದೆ. ಚಂದ್ರು ಕಾಣೆಯಾದ ದಿನ, ಅದೂ ರಾತ್ರಿ ಹತ್ತು ಗಂಟೆಯಿಂದ ಹೀಗೆ ಕರೆ ಮತ್ತು ಮೆಸೇಜ್​ ಬಂದಿರುವುದಕ್ಕೆ ಕಾರಣ ಏನಿರಬಹುದೆಂಬ ಪ್ರಶ್ನೆ ಎದುರಾಗಿದೆ. ಆ ಮೊಬೈಲ್​​​ ನಂಬರ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದ್ರು ನಾಪತ್ತೆಯಾದ ಐದನೇ ದಿನಕ್ಕೆ ತುಂಗಾ ಮೇಲ್ದಂಡೆ ಚಾನಲ್​​​​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಾಲ್ ಡೀಟೇಲ್ಸ್ ರೆಕಾರ್ಡ್ (ಸಿಡಿಆರ್) ತೆಗೆಸಿ ನೋಡಿದಾಗ ಅಂದು ರಾತ್ರಿ 10 ಗಂಟೆಯಿಂದ ಒಂದೇ ನಂಬರ್​​​​​ನಿಂದ ಕರೆ‌ ಬಂದಿರುವುದು ಬಹಿರಂಗವಾಗಿದೆ.
ರಾತ್ರಿ ಹತ್ತು ಗಂಟೆವರೆಗೂ ಗೌರಿ ಗದ್ದೆಯ ವಿನಯ್ ಗುರೂಜಿ ಆಶ್ರಮದಲ್ಲೇ ಚಂದ್ರು ಇದ್ದರು. ಚಿಕ್ಕಮಗಳೂರಿನ ಕೊಪ್ಪದ ವ್ಯಕ್ತಿಯ ಜೊತೆ ಸಂಭಾಷಣೆ ಮಾಡಿದ್ದರು ಎಂಬ ಮಾಹಿತಿಗಳು ಪೊಲೀಸರಿಗೆ ಸಿಕ್ಕಿವೆ. ಈಗ ಆ ಕರೆ ಮಾಡಿದವರು ಯಾರು, ಆತನಿಗೂ ಚಂದ್ರುಗೆ ಏನು ವ್ಯವಹಾರ ಎಂಬ ನಿಗೂಢ ಸಂಗತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
