
ಬೆಂಗಳೂರು:ರಾಜ್ಯ ಬಿಜೆಪಿ ನಾಯಕತ್ವದ ಗೊಂದಲಗಳಿಗೆ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪಂಚ ರಾಜ್ಯಗಳ ಚುನಾವಣೆ ೋಷಣೆ ಆಗಿರುವುದರಿಂದ ರಾಜ್ಯ ಬಿಜೆಪಿ ನಾಯಕತ್ವದ ಡೋಲಾಯಮಾನ ಸ್ಥಿತಿ ಡಿಸೆಂಬರ್ ತನಕ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ.ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎನ್ನುವುದು ಬಹಿರಂಗವಾಗಿ ಗೊತ್ತಿರುವ ಸಂಗತಿ. ಎತ್ತು ಏರಿಗೆ ಎಳೆದರೆ, ಎಮ್ಮೆ ನೀರಿಗೆ ಎನ್ನುವ ಸ್ಥಿತಿಯಲ್ಲಿರುವ ರಾಜ್ಯ ಬಿಜೆಪಿಯ ಬಗ್ಗೆ ಕೇಂದ್ರ ಬಿಜೆಪಿ ನಾಯಕರಿಗೂ ಮೊದಲಿದ್ದಷ್ಟು ಆಸಕ್ತಿಯೂ ಕಾಣುತ್ತಿಲ್ಲ. ಭಾರಿ ಭರವಸೆ ಇಟ್ಟುಕೊಂಡಿದ್ದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಹೊಡೆತವನ್ನು ಕೇಂದ್ರ ಬಿಜೆಪಿ ನಾಯಕತ್ವ ಇನ್ನೂ ಅರಗಿಸಿಕೊಂಡಿಲ್ಲ. ಇದರ ಪರಿಣಾಮಗಳನ್ನು ರಾಜ್ಯ ನಾಯಕರು ನಿತ್ಯವೂ ಎದುರಿಸುವಂತಾಗಿದೆ.ಲಭ್ಯವಿರುವ ವಿಶ್ವಾಸರ್ಹತೆಯುಳ್ಳ ಮಾಹಿತಿಯ ಪ್ರಕಾರ, ಪಂಚ ರಾಜ್ಯಗಳ ಚುನಾವಣೆ ಲಿತಾಂಶ ಬಂದ ಮೇಲೆ ಸಾಧಕ ಮತ್ತು ಬಾದಕ ನೋಡಿಕೊಂಡು ರಾಜ್ಯ ಬಿಜೆಪಿ ನಾಯಕತ್ವದ ತೀರ್ಮಾನಕ್ಕೆ ಬರಬಹುದು ಎನ್ನುವುದು ಬಹುತೇಕ ಮುಖಂಡರ ಅಭಿಮತವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ತಿಂಗಳಾಗಿದ್ದು, ಜನರ ಮುಂದೆ ವಿರೋಧಪಕ್ಷ್ವಆಗಿ ಹೋಗಲು ಸಾಕಷ್ಟು ವಿಷಯಗಳಿದ್ದವು. ಆದರೆ, ಅದಕ್ಕೂ ಬಿಜೆಪಿ ನಾಯಕರು ಮನಸ್ಸು ಮಾಡದೆ ಇರುವುದನ್ನು ನೋಡಿದರೆ, ಮೊದಲು ಪಂಚರಾಜ್ಯ ಚುನಾವಣೆ ಆಗಲಿ ಎನ್ನುವ ಅಭಿಪ್ರಾಯವೇ ಕೇಂದ್ರದಲ್ಲಿದೆ ಎನ್ನುವುದು ಖಚಿತವಾಗಿದೆ.ಡಿಸೆಂಬರ್ ಒಳಗೆ ನಡೆಯಲಿರುವ ಚಳಿಗಾಲದ ವಿಧಾನಭೆ ಅಧಿವೇಶನಕ್ಕೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಲಿದೆ ಎನ್ನುವ ವಿಶ್ವಾಸವೂ ಬಿಜೆಪಿಯಲ್ಲಿಲ್ಲ. ಎಲ್ಲವೂ ಕೇಂದ್ರದಿಂದಲೇ ತೀರ್ಮಾನ ಆಗಬೇಕಾಗಿರುವುದರಿಂದ ರಾಜ್ಯ ಬಿಜೆಪಿಯ ನಾಯಕರು ಅಸಹಾಯಕತೆಯಿಂದ ಕೈ ಚಲ್ಲಿದ್ದಾರೆ. ಶರವೇಗದಲ್ಲಿ ಮಾಧ್ಯಮದ ಎದುರು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಬಿಜೆಪಿ ನಾಯಕರಲ್ಲಿ ಹಲವರು ಇಲ್ಲದ ಉಸಾಬರಿ ನಮಗ್ಯಾಕೆ ಎಂದು ತೆರೆ ಮರೆಗೆ ಸರಿಯುತ್ತಿದ್ದಾರೆ.ಜೆಡಿಎಸ್ ಜೊತೆಗಿನ ಮೈತ್ರಿಯೂ ಬಿಜೆಪಿಯಲ್ಲಿ ಹಲವರಿಗೆ ನುಂಗಲಾರದ ತುತ್ತಾಗಿದೆ. ಆದರೆ ಯಾವುದನ್ನು ಮುಕ್ತವಾಗಿ ಹೇಳುವಂತಿಲ್ಲ, ಬಿಡುವಂತಿಲ್ಲ ಎನ್ನುವ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.
*ಪಂಚರಾಜ್ಯಗಳ ಚುನಾವಣೆಗೆ ಬಿಜೆಪಿ ಕೇಂದ್ರ ಹೈಕಮಾಂಡ್ ಸಹಜವಾಗಿಯೇ ಆದ್ಯತೆ ನೀಡಿದೆ. ಚುನಾವಣೆ ಮುಗಿದ ಮೇಲೆ ರಾಜ್ಯ ಬಿಜೆಪಿ ವಿಷಯಗಳ ಬಗ್ಗೆ ಗಮನಹರಿಸಲಿದೆ. ಹಾಗೆಯೇ ಇಲ್ಲಿನಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದೆ.-ಸಿ.ಟಿ.ರವಿ, ಕೇಂದ್ರ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
