|ಪ್ರಕಾಶ ಎಸ್. ಶೇಟ್ಹುಬ್ಬಳ್ಳಿ
ಈತನೊಬ್ಬ ವಿಕೃತ ಕಿಲ್ಲರ್. ಹುಬ್ಬಳ್ಳಿಯ ರಸ್ತೆಯಲ್ಲೇ ಓಡಾಡಿಕೊಂಡಿದ್ದ. ನೂರು ಇನ್ನೂರು ರೂಪಾಯಿಗೂ ಕೊಲೆ ಮಾಡಲು ಹೇಸುತ್ತಿರಲಿಲ್ಲ. ಈತ ಟಾರ್ಗೆಟ್ ಮಾಡುತ್ತಿದ್ದುದು ಭಿಕ್ಷುಕರನ್ನು. ಏಕೆಂದರೆ, ಭಿಕ್ಷುಕರ ಕೊಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ, ತಾನೂ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ಈತ ಎಣಿಸಿದ್ದ. ಆದರೀಗ ಆತನ ಯೋಜನೆ ಉಲ್ಟಾ ಆಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ಬೆಚ್ಚಿಬೀಳಿಸುವ ಸಂಗತಿ ಎಂದರೆ, ಈತ ಮಾಡಿರುವ ಕೊಲೆ ಪ್ರಕರಣಗಳು ಇದೀಗ ಸಾಲುಸಾಲಾಗಿ ಹೊರಬರಲಾರಂಭಿಸಿವೆ.
‘ಕಲ್ಲು ರಫೀಕ್’ ಎಂದೇ ಕುಖ್ಯಾತಿ ಪಡೆದಿರುವ ಈತನಿಗೆ ನಡೆಯಲಿಕ್ಕೂ ಆಗದು. ವಾಕಿಂಗ್ ಸ್ಟಿಕ್ ಸಹಾಯ ಬೇಕೇ ಬೇಕು. ಹೀಗಿರುವ ವ್ಯಕ್ತಿ ಹೇಗೆ ತಾನೆ ಕೊಲೆ ಮಾಡಲು ಸಾಧ್ಯ? ಎಂದುಕೊಂಡು ಪೊಲೀಸರೂ ಈತನ ಬಗ್ಗೆ ಸಂಶಯಪಟ್ಟಿರಲಿಲ್ಲ. ಆದರೆ, ಮಾರ್ಚ್ 12ರಂದು ಲ್ಯಾಮಿಂಗ್ಟನ್ ರಸ್ತೆಯಲ್ಲಿ ದಾವಣಗೆರೆ ಮೂಲದ ಸುಮಾ ಎನ್ನುವ ಚಿಂದಿ ಆಯುವ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. ಪ್ರಸ್ತುತ ಘಟನೆಯಿಂದ ಈ ಹಿಂದೆ ಮಾಡಿದ ಕೊಲೆ ಪ್ರಕರಣಗಳೂ ಒಂದೊಂದಾಗಿ ಹೊರಬರಲಾರಂಭಿಸಿವೆ.
ಕೊಲೆ-1:ಮಾರ್ಚ್ 12ರಂದು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸುಮಾಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆಕೆಯ ಬಳಿ ಇದ್ದ ಬಿಡಿಗಾಸು ಕಿತ್ತುಕೊಂಡು ಪರಾರಿಯಾಗಿದ್ದ. ನಶೆಯಲ್ಲಿದ್ದ ಸುಮಾಳ ಗಂಡನನ್ನೂ ಹೊಡೆದಿದ್ದ. ಸಿಸಿ ಟಿವಿ ಈತ ಮಾಡಿದ ಕೊಲೆಗೆ ಸಾಕ್ಷ್ಯ ನುಡಿದಿತ್ತು. ಪೊಲೀಸರ ಕಣ್ಣು ತಪ್ಪಿಸಲು ಗೋವಾ ಗಡಿಯವರೆಗೂ ಹೋಗಿ, ಅಲ್ಲಿಂದ ಧಾರವಾಡಕ್ಕೆ ಮರಳಿ ತನ್ನ ಮನೆಯಲ್ಲಿ ಅವಿತುಕುಳಿತಿದ್ದ. ಈತನ ಬೆನ್ನಟ್ಟಿದ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಬಂಧಿಸಿದರು. ವಿಚಾರಣೆಗೆ ಒಳಪಡಿಸಿದಾಗ 2020ರಲ್ಲಿ ಮಾಡಿದ ಕೊಲೆಯ ಬಗ್ಗೆಯೂ ಬಾಯಿಬಿಟ್ಟಿದ್ದಾನೆ.
ಕೊಲೆ-2:2020ರ ಜುಲೈನಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಎದುರಿನ ಹೊಟೇಲ್​ವೊಂದರ ಬಳಿ ಭಿಕ್ಷುಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಕಲ್ಲಿನ ಮೇಲೆ ಬಿದ್ದ ವ್ಯಕ್ತಿ ಸತ್ತಿದ್ದಾನೆಂದು ಅನಿಸಿತ್ತು. ಆದರೆ, ಅಂದಿನ ಶಹರ ಠಾಣೆಯ ಇನ್​ಸ್ಪೆಕ್ಟರ್ ಎಂ.ಎಸ್. ಪಾಟೀಲ ಕೊಲೆ ಎಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಆದರೆ, ಆರೋಪಿ ಸಿಕ್ಕಿರಲಿಲ್ಲ. ಇದೀಗ ವಿಚಾರಣೆ ವೇಳೆ ಆ ಕೊಲೆ ಮಾಡಿದ್ದು ತಾನೇ ಎಂದು ‘ಕಲ್ಲು ರಫೀಕ್’ ಒಪ್ಪಿದ್ದಾನೆ.
ಕೊಲೆ-3:ಈತನ ಕೊಲೆ ವೃತ್ತಾಂತ ಇಷ್ಟಕ್ಕೇ ಮುಗಿದಿಲ್ಲ. ಬೆಳಗಾವಿಯಲ್ಲಿಯೂ ಮೂರು ವರ್ಷದ ಹಿಂದೆ ಭಿಕ್ಷುಕಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಹಣ ಕಸಿದುಕೊಂಡಿದ್ದ. ಈತನನ್ನು ಬಂಧಿಸಿರುವ ಸುದ್ದಿ ತಿಳಿದು ಬೆಳಗಾವಿ ಪೊಲೀಸರು ಹುಬ್ಬಳ್ಳಿಗೆ ಬಂದು ಗುರುತು ಪತ್ತೆ ಮಾಡಿದ್ದಾರೆ. ಕೊಲೆ ಮಾಡಿರುವುದನ್ನು ಆರೋಪಿಯೂ ಒಪ್ಪಿಕೊಂಡಿದ್ದಾನೆ.
ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿಯೂ ವ್ಯಕ್ತಿ ಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು. ರೈಲ್ವೆ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ, ತಾನು ಆ ಕೊಲೆ ಮಾಡಿಲ್ಲ ಎಂದು ಕಲ್ಲು ರಫೀಕ್ ಹೇಳಿಕೊಂಡಿದ್ದಾನೆ. ಆದರೆ, ಏಳೆಂಟು ಕೊಲೆ ಮಾಡಿದ್ದೇನೆಂದು ಪದೇ ಪದೆ ಹೇಳಿಕೊಳ್ಳುವ ಈತ, ಸರಿಯಾದ ಮಾಹಿತಿ ನೀಡುತ್ತಿಲ್ಲ. ಈತ ಕಲ್ಲಿನಿಂದಲೇ ಜಜ್ಜಿ ಕೊಲೆ ಮಾಡಿರುವುದು ಸಾಮಾನ್ಯವಾಗಿರುವುದರಿಂದ ಈ ಹಿಂದೆ ಜರುಗಿದ ಇಂಥ ಪ್ರಕರಣಗಳನ್ನು ಪೊಲೀಸರು ಕೆದಕುತ್ತಿದ್ದಾರೆ.
ಆರೋಪಿಯನ್ನು ಬಂಧಿಸಿರು ವುದಾಗಿ ಹೇಳಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ್ ಈತ 2020ರಲ್ಲಿ ಮಾಡಿದ್ದಾನೆ ಎನ್ನುವ ಕೊಲೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮತ್ತಷ್ಟು ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಪಠ್ಯದಲ್ಲಿ ‌ಭಗವದ್ಗೀತೆ; ನಾವ್ಯಾಕೆ ವಿರೋಧ ಮಾಡ್ಲಿ, ಅದು ನಮ್ಮ ಧರ್ಮ: ಡಿಕೆಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
