ಕಲಬುರಗಿ:ಕೆಟ್ಟು ಹೋಗಿರುವ ಕಾಲದಲ್ಲಿ ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಎಂಬುದು ಒಂದು ಗೊತ್ತಾಗುವುದಿಲ್ಲ. ಕೈಕಾಲು ಗಟ್ಟಿಮುಟ್ಟಾಗಿದ್ರೂ ದುಡಿಯುವ ವಯಸ್ಸಲ್ಲಿ ಕಲಬುರಗಿಯ ಸೋಮಾರಿಯೊಬ್ಬ ಜನರನ್ನು ಯಾಮಾರಿಸಿ ಭಿಕ್ಷೆ ಬೇಡಿ ಪ್ರತಿನಿತ್ಯ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದ, ಇದೀಗ ಆತನ ನಿಜ ಬಯಲಾಗಿದ್ದು, ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಜರ್ಮನಿಯ ಡ್ರೋನ್‌ ಕಂಪೆನಿಯಿಂದಲೂ ಪ್ರತಾಪ್‌ಗೆ ಸುತ್ತಿದೆ ಕಾನೂನು ಕುಣಿಕೆ!
ನೀವು ನಟ ಸಾಧುಕೋಕಿಲ ಅವರ “ಐ ಆ್ಯಮ್ ಎ ಬೆಗ್ಗರ್​ ಬಾಯ್”​ ಕಾಮಿಡಿ ದೃಶ್ಯವನ್ನು ನೋಡಿರುತ್ತಿರಿ. ಅದರಲ್ಲಿ ಸಾಧುಕೋಕಿಲ ಒಂದೇ ಕಾಲಿನಲ್ಲಿ ನಿಂತು ಭಿಕ್ಷೆ ಬೇಡುವಾಗ ವ್ಯಕ್ತಿಯೊಬ್ಬ ಬಂದು ಬೆಳಗ್ಗೆಯಿಂದ ಒಂದೇ ಕಾಲಲ್ಲಿ ನಿಂತಿರುತ್ತೀಯಲ್ಲ ಕಾಲು ನೋಯುವುದಿಲ್ಲವಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಸಾಧು, ನೋವಾಗ್ಲೇಬೇಕಲ್ಲ ದೊಡ್ಡವರೆ ಎನ್ನುತ್ತಾರೆ. ಆವಾಗ ಏನು ಮಾಡುತ್ತೀಯ ಎಂದಾಗ ಕಾಲು ಬದಲಾಯಿಸಿ ನಿಲ್ಲುತ್ತೇನೆ ಎನ್ನುತ್ತಾರೆ. ಆಗ ಸಾಧು ನಿಜ ಬಣ್ಣ ಬಯಲಾಗುತ್ತದೆ. ಇದು ಕಾಮಿಡಿ ಅಷ್ಟೇ. ಆದರೆ ನಿಜ ಜೀವನದಲ್ಲೂ ಇದೇ ರೀತಿ ಯಾಮಾರಿಸಿ ಕಲಬುರಿಗಿಯ ವ್ಯಕ್ತಿಯೊಬ್ಬ ದಿನಕ್ಕೆ ಸಾವಿರಾರು ರೂ. ಸಂಪಾದಿಸುತ್ತಿದ್ದಾನೆ.
ಭಿಕ್ಷೆ ಹೆಸರಲ್ಲಿ ವಂಚಿಸಿದವನ ಹೆಸರು ಆರೀಫ್​. ಈತನ ಕೈಕಾಲೆಲ್ಲ ಸರಿಯಾಗಿದ್ದರೂ ಅಂಗವಿಕಲ ಎಂಬಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ. ಈತನನ್ನು ನೋಡಿ ಮನಕಲಕಿದ ಕಲಬುರಗಿಯ ಪ್ರೊಫೆಸರ್​ ಒಬ್ಬರು ಆಗಾಗ ಹಣ ಕೊಟ್ಟು ಊಟವನ್ನೂ ನೀಡುತ್ತಿದ್ದರು. ಒಂದು ದಿನ ಪ್ರೊಫೆಸರ್​ ಕೆಲಸ ಮುಗಿಸಿ ಮನೆಗೆ ಹೋಗುವಾಗ ಭಿಕ್ಷುಕನನ್ನು ನೋಡಿ ಹೌಹಾರಿದ್ದಾರೆ. ಆರೀಫ್​ ತನ್ನ ಕಾಲಿಗೆ ಕಟ್ಟಿದ್ದ ಬಟ್ಟೆಯನ್ನು ಕಿತ್ತು ಬಿಂದಾಸ್ ಆಗಿ ನಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿದ್ದಾರೆ.
ಇದನ್ನೂ ಓದಿ:ಲಾಕ್​ಡೌನ್ ಸಮಯದಲ್ಲಿ ಹಿತ್ತಲಲ್ಲಿ ಬೆಳೆದ ತರಕಾರಿ ತಿಂದವಳಿಗೆ ಕಾದಿತ್ತು ಬಿಗ್​ ಶಾಕ್​!
ಅದರಲ್ಲೂ ಸಂಜೆ ಸಮಯ ನೋಡಿದಾಗ ಎಣ್ಣೆ ಹಾಕಿಕೊಂಡು, ಸಿಗರೇಟ್​ ಸೇದುಕೊಂಡು ಹೋಗುತ್ತಿದ್ದುದ್ದನ್ನು ನೋಡಿ ಪ್ರೊಫೇಸರ್​ ಶಾಕ್​ ಆಗಿದ್ದಾರೆ. ನಾವು ಅಮಾಯಕರೆಂದು ಹಣ ನೀಡಿದರೆ, ಈ ರೀತಿ ಮಾಡುತ್ತಾರೆ. ಹೀಗಾಗಿ ನಾನು ವಿಡಿಯೋ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದೇನೆ. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎನ್ನುತ್ತಾರೆ ಪ್ರೊಫೆಸರ್​ ವಿಜಯ್​ ಕುಮಾರ್​.(ದಿಗ್ವಿಜಯ ನ್ಯೂಸ್​)
ಕಾಲಿವುಡ್​ ಖ್ಯಾತ ನಟನನ್ನು ವರಿಸಲಿದ್ದಾರೆ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ!

Sign in to your account
Please enter an answer in digits:3 × three =
Remember me
