ಬೇಗೂರು:ಬೇಗೂರು ಪೊಲೀಸ್ ಠಾಣೆ PSI ಪತ್ನಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬೇಗೂರು ಠಾಣೆ ಪಿಎಸ್ಐ ರಮೇಶ್​ ಬಂಧನಕ್ಕೆ ಒಳಗಾಗಿದ್ದಾರೆ.
ಶನಿವಾರ ಸಬ್ ಇನ್ಸ್ ಪೆಕ್ಟರ್ ಪತ್ನಿ ಅನುಮಾನ್ಪದ ಸಾವನ್ನಪ್ಪಿದ್ದರು. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್​ನಲ್ಲಿ ಘಟನೆ ನಡೆದಿತ್ತು.
ಕಳೆದ ಎರಡು ದಿನಗಳ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಶಿಲ್ಪಾ ಸಾವು ಅನುಮಾನಾಸ್ಪದವಾಗಿದ್ದು, ಅಲ್ಲಿ ನಡೆದದ್ದು ಕೊಲೆ ಎಂಬ ಆರೋಪ ಕೇಳಿ ಬಂದಿತ್ತು. ಪತಿ ರಮೇಶ್ ಕೊಲೆ ಮಾಡಿರುವುದಾಗಿ ಆರೋಪಿಸಿ ಶಿಲ್ಪ ಪೋಷಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್‌ನನ್ನು ಬಂಧಿಸದ್ದಾರೆ.
ಕಾಲೇಜು ಸಮಯದಿಂದಲೂ ರಮೇಶ್​ ಹಾಗೂ ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್‌ ಟುಗೇದರ್ ರಿಲೇಷನ್​ಶಿಪ್​ನಲ್ಲಿದ್ದರು ಎಂದು ತಿಳಿದು ಬಂದಿದ್ದು ರಮೇಶ್​ ಶಿಲ್ಪಾರನ್ನು ಮದುವೆಯಾಗಲು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಹಠಬಿಡದ ಯುವತಿ ಶಿಲ್ಪಾ ಪೊಲೀಸರ ಸಮ್ಮುಖದಲ್ಲಿ ರಮೇಶ್​ರನ್ನು ರಿಜಿಸ್ಟಾರ್​ ವಿವಾಹವಾಗಿದ್ದರು. ವಿವಾಹದ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂಬ ಕಾರನಕ್ಕೆ ಪತ್ನಿಗೆ ಬೇರೊಂದು ಮನೆಯನ್ನು ಮಾಡಿದ್ದರು. ಆದರೆ, ಜೀವನ ನಡೆಸಲು ಯಾವುದೇ ಆರ್ಥಿಕ ಸಹಾಯ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಮದುವೆಯಾದ ಬಳಿಕ ರಮೇಶ್​ ಶಿಲ್ಪಾ ಅವರ ಮೇಲೆ ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದರು. ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯ ಸೆಟಲ್ಮೆಂಟ್ ಮಾಡಿಕೊಂಡು ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ಜೋಡಿ ಕಾಲೇಜು ಸಮಯದಲ್ಲಿ ಪ್ರೀತಿಸಿ, ರಮೇಶ್​ಗೆ ಸಬ್ ಇನ್ಸ್​ಪೆಕ್ಟರ್​ ಹುದ್ದೆ ಸಿಕ್ಕ ಬಳಿಕ ಅವರಿಬ್ಬರೂ ಮದುವೆಯಾಗಿದ್ದರು. ಮದುವೆಯಾದ ಬಳಿಕ ಜೋಡಿಯ ನಡುವೆ ಜಾತಿ ವಿಚಾರಕ್ಕೆ ಕಿತ್ತಾಟ ನಡೆದಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಕುಟುಂಬದವರು ರಾಜಿ ಪಂಚಾಯಿತಿ ಮಾಡಿ ಮದುವೆ ಮಾಡಿಸಿದ್ದರು. ರಮೇಶ್ ಚಿಕ್ಕಬಳ್ಳಾಪುರದವನಾಗಿದ್ದು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಪೋರ್ಶನರಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಇದೀಗ ಪೋಷಕರ ಆರೋಪದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 20 =
Remember me
