ಬೆಳಗಾವಿ:ಕರೊನಾ ನಿಯಂತ್ರಿಸಲು ಹೇರಲಾಗಿರುವ ವೀಕೆಂಡ್ ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೋವಿಡ್​-19 ಭೀತಿಯ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ಪತಿಯ ಆರೋಗ್ಯಕ್ಕಾಗಿ ಬೆಳಗಾವಿ ಮಹಿಳೆ ವಹಿಸಿದ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ರಾಜ್ಯದ ಜನತೆಗೆ ಆತಂಕ ಬೇಡ, ಮತ್ತೆ ಲಾಕ್ ಡೌನ್ ಇಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ​ಲಾಕ್​ಡೌನ್​ ಹಿನ್ನೆಲೆಯಲ್ಲಿ ಹೊಟೆಲ್, ಶಾಪ್ ಎಲ್ಲವೂ ಬಂದ್​ ಆಗಿರುವ ಹಿನ್ನಲೆಯಲ್ಲಿ ಪತಿ ಊಟಕ್ಕಾಗಿ ಪರದಾಡಬಾರದೆಂದು ಸುಮಾರು 6 ಕಿ.ಮೀ ನಡೆದುಕೊಂಡು ಬಂದು ಪತಿಗೆ ಟಿಫನ್​ ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ ಅಲ್ಲಿಖಾನ್ ಬೆಳಗಾವಿಯ ಎಂಡಿಕೂಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ ಭೀತಿಯ ನಡುವೆ ಪತಿ ಹಸಿವಿನಿಂದ ಬಳಲಬಾರದೆಂಬ ಕಾಳಜಿಯಿಂದ ಪತ್ನಿ ನೂರ್​ಜಹನ್, ತಿಂಡಿ ತಯಾರಿಸಿಕೊಂಡು ಬೆಳಗಾವಿಯ ಎಪಿಎಂಸಿ ಮಾರ್ಕೆಟ್ ಯಾರ್ಡ್​ನಿಂದ 6 ಕಿ.ಮೀ ದೂರವಿರುವ ಎಂಡಿಕೂಟ್​ವರೆಗೆ ನಡೆದುಕೊಂಡ ಬಂದು ಪತಿಗೆ ತಿಂಡಿ ನೀಡಿದ್ದಾರೆ.
ಇದನ್ನೂ ಓದಿ:VIDEO| ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ: ಬದುಕು ಇಷ್ಟೇನಾ ಎನಿಸುವಂತಹ ದೃಶ್ಯವಿದು
ಪತ್ನಿ ನೀಡಿದ ತಿಂಡಿಯನ್ನು ತಿಂದು ಟ್ರಾಫಿಕ್​ ಪೊಲೀಸ್​ ಅಲಿಖಾನ್​ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಕುಟುಂಬದಿಂದ ದೂರವಿದ್ದು, ಕರೊನಾ ನಿಯಂತ್ರಣದಲ್ಲಿ ಹೋರಾಡುತ್ತಿರುವ ಪೊಲೀಸರ ಶ್ರಮಕ್ಕೆ ಒಂದು ಸಲಾಂ ಹೇಳಲೇಬೇಕು.(ದಿಗ್ವಿಜಯ ನ್ಯೂಸ್​)
ದಿನಕ್ಕೆ 24 ಕಿ.ಮೀ. ಸೈಕಲ್​ ತುಳಿದು ಶೇ.98.5 ಅಂಕಗಳ ಗುರಿ ಸಾಧಿಸಿದಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
