ದಾವಣಗೆರೆ:ದೀಪಾವಳಿ ಹಬ್ಬದ ಹಿನ್ನೆಲೆ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡೋದು ಸಾಮಾನ್ಯ. ಪೂಜೆಯ ಸಂಭ್ರಮದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವಾಗ ತಮ್ಮ ಅಂಗಡಿಗೆ ಮಾತ್ರವಲ್ಲ, ಅಕ್ಕಪಕ್ಕದವರ ಅಂಗಡಿಗಳಿಗೂ ಕಿಡಿ ಹೊತ್ತಿ ಉರಿದಿದೆ.
ದಾವಣಗೆರೆ ನಗರದ ಎಂವಿಕೆ ರಸ್ತೆಯಲ್ಲಿನ ಎಂಸಿಬಿ ಫಾರ್ಮಾದಲ್ಲಿ ಸೋಮವಾರ ಬಹಳ ಸಂಭ್ರಮದಿಂದ ಲಕ್ಷ್ಮೀ ಪೂಜೆ ಮಾಡಲಾಗಿತ್ತು. ಇದಾದ ಕೆಲ ಸಮಯದಲ್ಲೇ ಪಟಾಕಿ ಕಿಡಿ ಭಾರೀ ಅನಾಹುತ ಉಂಟು ಮಾಡಿದೆ. ಪೂಜೆ ಬಳಿಕ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಮೊದಲ ಮಹಡಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಬಯೋ ಕೆಮಿಕಲ್ಸ್​ಗೆ ಪಟಾಕಿ ಕಿಡಿ ಸಿಡಿದು, ಗೋದಾಮು ಹೊತ್ತಿ ಉರಿದಿದೆ. ಬೆಂಕಿ ಅವಘಡದಿಂದ ಸ್ಥಳೀಯರಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಕ್ಷಾಂತರ ರೂ. ಮೌಲ್ಯದ ಬಯೋಕೆಮಿಕಲ್ ಬೆಂಕಿಗಾಹುತಿಯಾಗಿದೆ.
ಬೆಳಗಾವಿಯಲ್ಲಿ ಪಕ್ಕದ ಅಂಗಡಿಗೆ ಬೆಂಕಿ:ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿ ಸೋಪಾ, ಗಾದಿ ತಯಾರಿಕಾ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ. ಪಕ್ಕದ ಅಂಗಡಿಯವರು ಲಕ್ಷ್ಮೀ ಪೂಜೆ ಮಾಡಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಪಕ್ಕದ ಸೋಪಾ ಅಂಗಡಿಗೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಹೋದ ಅಂಗಡಿ ಮಾಲೀಕನಿಗೂ ಸುಟ್ಟ ಗಾಯವಾಗಿದೆ.
ಬೆಂಗ್ಳೂರಲ್ಲಿ ಪಟಾಕಿ ಅವಘಡ: ರಾಕೆಟ್​ ಸ್ಫೋಟಕ್ಕೆ ಬಾಲಕನ ಮುಖ ಸುಟ್ಟೋಯ್ತು, ದಾರಿಯಲ್ಲಿ ಹೋಗುತ್ತಿದ್ದವನ ಕಣ್ಣಿಗೂ ಹಾನಿ…

ಕಂಚುಗಲ್ಲು ಬಂಡೇಮಠದ ಶ್ರೀಗಳ ಡೆತ್​ನೋಟ್​ನಲ್ಲಿ ಪ್ರಭಾವಿಗಳ ಹೆಸರು? ಸಾವಿಗೂ ಮುನ್ನ ಮಠಕ್ಕೆ ಬಂದಿದ್ದರಂತೆ ಸಚಿವರ ಆಪ್ತರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 13 =
Remember me
