ಬೆಳಗಾವಿ:ಬದುಕಲು ಊಟ ಅನಿವಾರ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಲ್ಲೊಬ್ಬ ವ್ಯಕ್ತಿ ಕೇವಲ ಚಹಾ ಮತ್ತು ನೀರು ಬಿಟ್ಟರೆ, ಊಟ ಮಾಡದೇ ಜೀವನ ಸಾಗಿಸುವ ಮೂಲಕ ವೈದ್ಯಲೋಕಕ್ಕೆ ಅಚ್ಚರಿಯಾಗಿದ್ದಾರೆ.
ಮೂಡಲಗಿ ತಾಲೂಕಿನ ನಾಗನೂರಿನ ನಿವಾಸಿ ಶ್ರೀಶೈಲ ಬೆಳಕೂಡ ಅವರು ಕಳೆದ 15 ವರ್ಷದಿಂದ ಅನ್ನವನ್ನೇ ಸೇವಿಸಿಲ್ಲವಂತೆ. ಇಡೀ ದಿನವನ್ನು ಟೀ ಕುಡಿದೇ ಕಳೆಯುತ್ತಾರೆ. ವಯಸ್ಸು 36 ಆಗಿದ್ದರೂ ಇಂದಿಗೂ ಬಹಳ ಲವಲವಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ.
ದಿನದಲ್ಲಿ ಎಷ್ಟೇ ಟೀ ಕೊಟ್ಟರು ಶ್ರೀಶೈಲ ಅವರು ಒಲ್ಲೆ ಎನ್ನುವುದಿಲ್ಲ. ವಿಶೇಷವೆಂದರೆ ಎನರ್ಜಿಗಾಗಿಯೇ ಟೀ ಕುಡಿಯುತ್ತಾರಂತೆ. ಆದರೆ, ಟೀನಿಂದ ಅಷ್ಟೊಂದು ಎನರ್ಜಿ ಎಲ್ಲಿಂದ ಬರುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಊಟ ತ್ಯಜಿಸಿರುವ ಶ್ರೀಶೈಲ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಇದನ್ನೂ ಓದಿ:VIDEO| ಹೀಯಾಳಿಸಿದ್ದಕ್ಕೆ ಹುಚ್ಚಾ ವೆಂಕಟ್​ರನ್ನು ಹಿಗ್ಗಾಮುಗ್ಗಾ ಥಳಿಸಿದ ಯುವಕರು
ಇನ್ನು ಶ್ರೀಶೈಲ ಟೀ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲವಂತೆ. ತುಂಬಾ ಆರಾಮಾಗೆ ಇರುವುದರಿಂದ ಕುಟುಂಬಸ್ಥರು ಚಿಕಿತ್ಸೆ ಕೊಡಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಎರಡು ಬಾರಿ ಆಪರೇಷನ್​ ಸಹ ಮಾಡಿಸಿದ್ದಾರಂತೆ ಆದರೂ ಅವರಿಗೆ ಊಟ ಮಾತ್ರ ಸೇರುತ್ತಿಲ್ಲ, ಚಹಾವೇ ಎಲ್ಲ ಎಂಬಂತಾಗಿದೆ. ಕೇವಲ ನೀರು, ಟೀ ಕುಡಿದುಕೊಂಡೇ ಆರೋಗ್ಯವಾಗಿರುವುದೆಂದರೆ ನಿಜಕ್ಕೂ ವೈದ್ಯ ಲೋಕಕ್ಕೆ ಸವಾಲಾಗಿದೆ.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
