​ಬೆಳಗಾವಿ:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಗದ್ದಲದ ನಡುವೆಯೂ ಕುಂದಾನಗರಿ ಲೋಕಸಭಾ ಉಪಸಮರ ಜೋರಾಗಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಸತೀಶ್​ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್​ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬೆಳಗಾವಿಗೆ ಬರಬೇಡಿ ಎಂದು ಡಿಕೆಶಿ​ಗೆ ಪಕ್ಷದ ಹಿರಿಯ ನಾಯಕರು ಮೂರ್ನಾಲ್ಕು ದಿನದ ಹಿಂದೆ ಸಲಹೆ ನೀಡಿದ್ದರೂ ನಿನ್ನೆಯೇ ಬೆಳಗಾವಿಗೆ ಬಂದ ಡಿಕೆಶಿ ಇಂದು ಸತೀಶ್​ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಸಾಥ್​ ನೀಡಿದರು.ಇದನ್ನೂ ಓದಿರಿಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಸಮ್ಮುಖದಲ್ಲಿ ಹಸಿರು ಶಾಲು ಧರಿಸಿಕೊಂಡು ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್​ನಲ್ಲಿ ರೈತ ಘಟಕ ಇದೆ. ಹೀಗಾಗಿ ರೈತರನ್ನ ಗಮನದಲ್ಲಿಟ್ಟುಕೊಂಡು ನಾಮಪತ್ರ ಸಲ್ಲಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ವಿರೋಧ ನೀತಿ ಅನುಸರಿಸುತ್ತಿದೆ‌. ರೈತರ ಸಮಸ್ಯೆ ಆಲಿಸುತ್ತಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಜನರು ನನ್ನನ್ನು ಕೈ ಹಿಡಿಯುವ ವಿಶ್ವಾಸ ಇದೆ‌ ಎಂದು ಸತೀಶ್​ ಜಾರಕಿಹೊಳಿ ಹೇಳಿದರು.
ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಬಯಲಿಗೆ ಬಂದಾಗಿನಿಂದ ರಮೇಶ್​ ಕ್ಷೇತ್ರದಲ್ಲಿ ಬೆಂಬಲಿಗರು ಮತ್ತು ಕುಟುಂಬಸ್ಥರು ಡಿಕೆಶಿ ವಿರುದ್ಧ ಸಿಟ್ಟಾಗಿದ್ದಾರೆ. ಹಾಗಾಗಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಅಚಾತುರ್ಯ ಮಾಡಬಹುದು ಎನ್ನುವ ಆಂತಕ ವ್ಯಕ್ತಪಡಿಸಿದ್ದ ಉ.ಕ. ಭಾಗದ ಹಿರಿಯ ನಾಯಕರು, ಬೆಳಗಾವಿಗೆ ನಾಮಪತ್ರ ಸಲ್ಲಿಕೆ ವೇಳೆ ಡಿಕೆಶಿ ಉಪಸ್ಥಿತಿ ಬೇಡ ಎಂದಿದ್ದರಂತೆ. ಈ ಎಲ್ಲ ಅಡೆತಡೆಗೂ ಬಗ್ಗದ ಡಿಕೆಶಿ, ಸತೀಶ್​ಗೆ ಸಾಥ್​ ನೀಡಿದ್ದಾರೆ. ಈ ವೇಳೆ ಶಾಸಕರಾದ ಎಂ.ಬಿ.ಪಾಟೀಲ್​, ಆರ್.ವಿ.ದೇಶಪಾಂಡೆ, ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಶಾಸಕ ಪಿರೋಜ್ ಶೇಠ್ ಉಪಸ್ಥಿತರಿದ್ದರು.
ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ
ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
