ಬೆಳಗಾವಿ:ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ತಂಟೆ ತಕರಾರನ್ನು ಪಕ್ಷಭೇದ ಮರೆತು ವಿಧಾನ ಮಂಡಲದ ಉಭಯ ಸದನಗಳಲ್ಲಿ ಏಕಕಂಠದಲ್ಲಿ ಖಂಡಿಸಲಾಗಿದ್ದು, ‘ಬೆಳಗಾವಿ ನಮ್ಮದು, ಮಹಾಜನ ವರದಿಯೇ ಅಂತಿಮ, ಯಾವುದೇ ಕಾರಣಕ್ಕೂ ಹೆಜ್ಜೆ ಹಿಂದಿಡುವುದಿಲ್ಲ’ ಎಂದು ಒಮ್ಮತದ ಸ್ಪಷ್ಟ ಸಂದೇಶ ರವಾನಿಸುವ ನಿರ್ಧಾರಕ್ಕೆ ಬರಲಾಗಿದೆ.
ಒಂದೆಡೆ ಮಹಾಮೇಳಾವ, ಮತ್ತೊಂದು ಕಡೆ ಮಹಾರಾಷ್ಟ್ರ ಸರ್ಕಾರದ ಪ್ರಮುಖ ಸ್ಥಾನದಲ್ಲಿರುವವರೇ ಬೆಳಗಾವಿ ಕುರಿತು ಹೇಳಿಕೆ ನೀಡಿದ್ದನ್ನು ವಿಧಾನಸಭೆಯಲ್ಲಿ ಖಂಡಿಸಲಾಯಿತು. ಜತೆಗೆ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಕಾಂಗ್ರೆಸ್​ನ ಎಚ್.ಕೆ. ಪಾಟೀಲ್ ಆದಿಯಾಗಿ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರ ಅಭಿಪ್ರಾಯವೂ ಒಂದೇ ರೀತಿಯಲ್ಲಿದ್ದಿದ್ದು ವಿಶೇಷ. ಹಾಗೆಯೇ, ನಾಡಿನ ವಿಚಾರದಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶವನ್ನೂ ಈ ವೇದಿಕೆಯಿಂದ ಕಳಿಸಿದರು.
‘ರಾಜ್ಯವನ್ನು ಕತ್ತಲಲ್ಲಿಟ್ಟು ಯಾವುದೇ ಮಾಹಿತಿ ನೀಡದೆ ದೆಹಲಿಗೆ ಹೋಗಿ ಮಹಾರಾಷ್ಟ್ರದವರ ಜತೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದೀರಿ. ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಏನು ನಿರ್ಣಯ ಆಗಿದೆ ಎನ್ನುವುದನ್ನು ತಾವು ತಿಳಿಸಿಲ್ಲ. ಪ್ರತಿಪಕ್ಷಗಳಿಗೂ ಮಾಹಿತಿ ನೀಡದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ರೀತಿ ಹೆಜ್ಜೆ ಇಟ್ಟಿದ್ದು ಸರಿಯಲ್ಲ’ ಎಂದು ಮುಖ್ಯಮಂತ್ರಿಯ ನಡೆಯ ಬಗ್ಗೆ ವಿರೋಧ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಆ ಹಂತದಲ್ಲಿ ಮುಖ್ಯಮಂತ್ರಿಗಳು ದೆಹಲಿಯ ಸಭೆಯಲ್ಲಿ ಶಾಂತಿ- ಸುವ್ಯವಸ್ಥೆ ಬಿಟ್ಟು ಬೇರೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಮುನ್ನ ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ 1967ರಲ್ಲಿ ಮಹಾಜನ ಆಯೋಗವು ವರದಿ ನೀಡಿತು. ಅದನ್ನು ಮಹಾರಾಷ್ಟ್ರ ತಿರಸ್ಕರಿಸಿತು, ನಾವು ಅದರಿಂದ ಪೂರ್ಣ ಪ್ರಮಾಣದಲ್ಲಿ ಸಂತೖಪ್ತರಾಗದೆ ಇದ್ದರೂ ವರದಿಯನ್ನು ಸ್ವಾಗತ ಮಾಡಿದ್ದೆವು. ಇದಾದ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ ಆರಂಭವಾಯಿತು. ಮಹಾರಾಷ್ಟ್ರವರು ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರವನ್ನು ವಿವಾದವೆಂಬಂತೆ ಜೀವಂತವಾಗಿಟ್ಟುಕೊಂಡಿದ್ದಾರೆ. ಮಹಾಜನ ವರದಿ ಬಂದ ನಂತರ ಇಲ್ಲಿ ವಿವಾದವೇ ಉಳಿದಿಲ್ಲ ಎಂದರು.
1981ರ ಜನಗಣತಿ ಪ್ರಕಾರ ಬೆಳಗಾವಿಯಲ್ಲಿ ಶೇ.64.39 ಜನ ಕನ್ನಡ ಮಾತನಾಡುವವರಿದ್ದಾರೆ, ಶೇ.26.04ರಷ್ಟು ಮರಾಠಿ ಭಾಷಿಗರಿದ್ದಾರೆ. ಶೇ.50ಕ್ಕಿಂತ ಜಾಸ್ತಿ ಇರುವವರು ನಮ್ಮ ರಾಜ್ಯಕ್ಕೆ ಸೇರಬೇಕು ಅಲ್ಲವೇ, ಇದೇ ಕಾರಣಕ್ಕೆ ಮಹಾಜನ ಆಯೋಗ ಬೆಳಗಾವಿಯನ್ನು ರಾಜ್ಯಕ್ಕೆ ಸೇರಿಸಿದೆ. ಈ ವರದಿಯನ್ನು 1970ರಲ್ಲಿ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿತ್ತಾದರೂ ಯಾವ ನಿರ್ಣಯವನ್ನೂ ಕೈಗೊಂಡಿರಲಿಲ್ಲ. ಇದಾದ ನಂತರ ಮಹಾರಾಷ್ಟ್ರ ಸರ್ಕಾರ ಜಗಳ ತೆಗೆಯುತ್ತಲೇ ಬಂದಿದೆ. ಕಳೆದ ನವೆಂಬರ್ 23ರಂದು ಈ ಪ್ರಕರಣ ಕೋರ್ಟ್​ನಲ್ಲಿ ವಿಚಾರಣೆೆಗೆ ಬಂದಿತ್ತು. ಈ ವಿಚಾರ ತಿಳಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಂದು ಹಳ್ಳಿಯನ್ನೂ ಕರ್ನಾಟಕಕ್ಕೆ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬ ಹೇಳಿಕೆಗಳನ್ನು ನೀಡತೊಡಗಿದರು ಎಂದು ಸಿದ್ದರಾಮಯ್ಯ ಹೇಳಿದರು.
ನಷ್ಟವಾದರೂ ಒಪ್ಪಿಕೊಂಡಿದ್ದೇವೆ:ಮಹಾಜನ ವರದಿಯಿಂದ ನಮಗೆ ಕೆಲವೊಂದು ನಷ್ಟಗಳು ಆದರೂ ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಕಾರಣ ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿರುತ್ತದೆ. ಯುರೋಪ್​ನಲ್ಲಿ ಕೂಡ ಭಾಷೆಯ ಆಧಾರದಲ್ಲಿ ದೇಶಗಳ ರಚನೆ ಆಗಿದೆ. ಅಮೆರಿಕ ಮಾತ್ರ ಇದಕ್ಕೆ ಹೊರತಾಗಿದೆ. ಮಹಾರಾಷ್ಟ್ರದವರು ಚುನಾವಣೆ ಬಂದಾಗ ಅನಗತ್ಯ ಹೇಳಿಕೆಗಳನ್ನು ನೀಡುತ್ತಾರೆ. ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಕುತಂತ್ರ ಮಾಡುತ್ತಾರೆ. ಈ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬೊಮ್ಮಾಯಿ ಗಟ್ಟಿ ದನಿ:ಕೇಂದ್ರ ಕರೆದ ಸಭೆಯಲ್ಲಿ ತಾವು ಪಾಲ್ಗೊಂಡಿದ್ದು, ಅಲ್ಲಿ ಯಾವ ಚರ್ಚೆಯಾಯಿತೆಂದು ಹೇಳದೇ ರಾಜ್ಯವನ್ನು ಕತ್ತಲಲ್ಲಿ ಇಟ್ಟಿರಿ ಎಂದು ಎಚ್.ಕೆ. ಪಾಟೀಲ್ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು. ‘ಒಕ್ಕೂಟ ವ್ಯವಸ್ಥೆಯಲ್ಲಿ ಗಡಿ, ಜಲ ವಿವಾದ ಬಂದರೆ ಕೇಂದ್ರ ಮಧ್ಯಪ್ರವೇಶ ಮಾಡá-ತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ತಿಳಿಸá-ತ್ತದೆ. ಗಡಿ ವಿವಾದ ಬಗೆಹರಿಸಲು ಕೇಂದ್ರ ಗೃಹಸಚಿವ ಅಮಿತ್ ಷಾ ಸಭೆ ಕರೆದಿರಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಸಭೆ ಸೇರಿದ್ದೆವು. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸತ್ಯ ಹೇಳá-ತ್ತಿದ್ದೇನೆ’ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಕೇಂದ್ರ ಗೃಹ ಸಚಿವರು ಕರೆದಾಗ ಹೋಗಬೇಕಾಗá-ತ್ತದೆ. 10-15 ನಿಮಿಷ ಮಾತ್ರ ಸಭೆ ನಡೆಯಿತು. ಸಣ್ಣ ವಿಚಾರ ದೊಡ್ಡದು ಮಾಡಬಾರದು ಎಂದು ತಿಳಿಸಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣವಿದೆ. ಅಲ್ಲೇ ಬಗೆಹರಿಸಿಕೊಳ್ಳಿ ಎಂದಿದ್ದಾರೆ ಎಂದು ತಿಳಿಸಿದರು. ಮಹಾರಾಷ್ಟ್ರದ ಜನಪ್ರತಿನಿಧಿಗಳಿಗೆ ತೀಕ್ಷ್ಣವಾಗಿ ಉತ್ತರ ನೀಡಿರುವೆ. ಮಂತ್ರಿಗಳು ಬೆಳಗಾವಿಗೆ ಬರುವುದನ್ನು ತಡೆದಿದ್ದೇವೆ. ಮಹಾಮೇಳಾವ ರದ್ದುಗೊಳಿಸಿ, ರಾಜ್ಯಕ್ಕೆ ಬರಲು ಯತ್ನಿಸಿದ ಸಂಸದರನ್ನು ಹಿಂದೆ ಕಳá-ಹಿಸಿದ್ದೇವೆ. ಇನ್ನೊಂದು ರಾಜ್ಯಕ್ಕೆ ನುಗ್ಗಿ ಬರá-ವುದು ಖಂಡನೀಯ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.
ನಾವು ಗಡಿ ವಿವಾದವನ್ನು ಗಂಭೀರವಾಗಿ ತೆಗೆದá-ಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಷಾ ಹಾಗೂ ಸುಪ್ರೀಂಕೋರ್ಟ್ ಮುಂದೆ ನಮ್ಮ ನಿಲುವು ಬದಲಾಗಿಲ್ಲ, ಬದಲಾಗá-ವುದೂ ಇಲ್ಲ್ಲ
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಏಕನಾಥ ಶಿಂಧೆ ಹೇಳಿಕೆ ಅಸತ್ಯ:ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನಾಗ್ಪುರ ಅಧಿವೇಶನದಲ್ಲಿ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆಯಲ್ಲಿ ಕೇವಲ ಶಾಂತಿ-ಸುವ್ಯವಸ್ಥೆ ಕಾಪಾಡಲು ಚರ್ಚೆಯಾಗಿದೆ ಹೊರತು, ಗಡಿಯ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿಜಯವಾಣಿಗೆ ತಿಳಿಸಿದರು. ‘ಸುಪ್ರೀಂಕೋರ್ಟ್ ಮುಂದೆ ವಿಚಾರ ಇರುವುದರಿಂದ ಅದನ್ನು ಅಲ್ಲಿಯೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧಾರವಾಗಿತ್ತು. ಅದನ್ನು ಬಿಟ್ಟು ಬೇರೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ರಾಜ್ಯಕ್ಕೆ ಬರುತ್ತಿದ್ದ ಸಚಿವರನ್ನು ತಡೆದಿರುವುದು ಷಾ ಮಾತುಕತೆಯ ಉಲ್ಲಂಘನೆ ಅಲ’ ಎಂದು ಹೇಳಿದರು.
ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

ಎನ್‌ಪಿಎಸ್ ವಿರೋಧಿ ಹೋರಾಟಕ್ಕೆ ಭಾರಿ ಹಿನ್ನಡೆ; ಇಲ್ಲಿದೆ ಕಾರಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
