ಬೆಳಗಾವಿ:ಕುಂದಾ ನಗರಿ ಬೆಳಗಾವಿ ರಾಜಕೀಯಕ್ಕೆ ಹೊಸ ರಾಜಕೀಯ ಕುಡಿ ಎಂಟ್ರಿಯಾಗಿದೆ. ದಿವಂಗತ ಸುರೇಶ್ ಅಂಗಡಿ ಉತ್ತರಾಧಿಕಾರಿಯಾಗಿ ಶ್ರದ್ಧಾ ಶೆಟ್ಟರ್ ಹೆಸರು ಫೈನಲ್ ಆಗಿದೆ.

ಶ್ರದ್ಧಾ ಶೆಟ್ಟರ್ ಅವರನ್ನೇ ರಾಜಕೀಯ ಅಖಾಡಕ್ಕಿಳಿಸಲು ಕುಟುಂಬ ತೀರ್ಮಾನ ಮಾಡಿದೆ. ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ, ಹಿರಿಯ ಪುತ್ರಿ ಸ್ಪೂರ್ತಿ ಅಂಗಡಿ ರಾಜಕೀಯ ಪ್ರವೇಶದ ಬಗ್ಗೆ‌ ನಿರಾಶಕ್ತಿ ಹೊಂದಿರುವುದರಿಂದ ಶ್ರದ್ಧಾ ಶೆಟ್ಟರ್​ಗೆ ಟಿಕೆಟ್ ನೀಡುವಂತೆ ಕುಟುಂಬಸ್ಥರಿಂದ ವರಿಷ್ಠರಿಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿರಿ:ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿ ಈಗ ಮದುವೆಯಾಗಲಾಗದೇ ಧರ್ಮಸಂಕಟದಲ್ಲಿದ್ದೇನೆ- ಏನು ಮಾಡಲಿ?
ಇದೇ ಕಾರಣದಿಂದ ಕಳೆದ ಒಂದು ತಿಂಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶ್ರದ್ಧಾ ಶೆಟ್ಟರ್​ ತುಂಬಾ ಸಕ್ರಿಯರಾಗಿದ್ದಾರೆ. ಬಿಜೆಪಿ ಮುಖಂಡರು, ಕಾರ್ಯಕರ್ತರ ಭೇಟಿ, ಬಿಜೆಪಿ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ನಿನ್ನೆ ಗ್ರಾಮೀಣ ಮತಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಗ್ರಾಮಸ್ಥರ ಭೇಟಿ ಮಾಡಿ ಮಾತನಾಡಿದ್ದಾರೆ.

ಶ್ರದ್ಧಾ ಶೆಟ್ಟರ್​ ಸುರೇಶ್​ ಅಂಗಡಿ ಮಗಳು ಮಾತ್ರವಲ್ಲದೆ, ಜಗದೀಶ್​ ಶೆಟ್ಟರ್ ಸೊಸೆಯು ಹೌದು. ಹೀಗಾಗಿ​ ಸೊಸೆಗೆ ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್​ ಟಿಕೆಟ್ ಕೊಡಿಸಲು ಸಚಿವ ಜಗದೀಶ್ ಶೆಟ್ಟರ್ ತೀವ್ರ ಲಾಬಿ ನಡೆಸುತ್ತಿದ್ದಾರೆ. ಜಗದೀಶ್ ಶೆಟ್ಟರ್ ಜೊತೆಗೆ ಜಿಲ್ಲಾ ಉಸ್ತುವಾರಿ ರಮೇಶ್ ಜಾರಕಿಹೋಳಿ ಕೂಡಾ ಶ್ರದ್ಧಾಗೆ ಟಿಕೇಟ್ ಕೊಡಿಸಲು ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಶೃದ್ದಾ ಶೆಟ್ಟರ್ ರಾಜಕೀಯ ಎಂಟ್ರಿ ಬಹುತೇಕ ಫೈನಲ್ ಆಗಿದ್ದು, ರಾಜಕೀಯ ಚಟುವಟಿಕೆಯಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ
ಹುಟ್ಟುವಾಗಲೇ ಮಗುವಿಗೆ ಬಿಳಿಕೂದಲು: ಹೆತ್ತ ತಾಯಿ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…

ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!

VIDEO| ಮೈಕಲ್​ ಜಾಕ್ಸನ್​ ಮೂನ್​ ವಾಕ್​ ಮೂಲಕ ಸಂಚಾರ ನಿರ್ವಹಿಸೋ ಪೇದೆಯ ಹಿಂದಿದೆ ಕಣ್ಣೀರ ಕತೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
