ಬೆಳಗಾವಿ:ಜನರ ಸೇವೆಗಾಗಿಯೇ ಮೀಸಲಾಗಿರುವ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಇಂದು ಸಾಮಾನ್ಯವಾಗಿದೆ. ಸರ್ಕಾರಿ ಕಚೇರಿಗೆ ಮದ್ಯ ಕುಡಿದು ಬರುವುದು, ಧೂಮಪಾನ ಮಾಡುವುದು ಹಾಗೂ ಶಾಲೆಗಳಲ್ಲೇ ಎಣ್ಣೆ ಪಾರ್ಟಿ ಮಾಡಿದಂತಹ ಎಷ್ಟೋ ಉದಾಹರಣೆಗಳು ನಮ್ಮ ಮುಂದು ಬಂದು ಹೋಗಿವೆ.
ಇದಕ್ಕೆ ಹೊಸದಾಗಿ ಸೇರ್ಪಡೆ ಎಂಬಂತೆ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಹಿಳಾ ಸಿಬ್ಬಂದಿ ಇಬ್ಬರು ಧೂಮಪಾನ ಮತ್ತು ಮದ್ಯಪಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಡಿ ಗ್ರೂಪ್ ಸಿಬ್ಬಂದಿ ಸಾರಿಕಾ ಮತ್ತು ಗುತ್ತಿಗೆ ಆಧಾರದ ಸ್ಟಾಫ್ ನರ್ಸ್ ಶೈಲಾ ಪ್ರಾಥಮಿಕ ಕೇಂದ್ರದಲ್ಲೇ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆಸ್ಪತ್ರೆಯಲ್ಲೇ ಸಿಗರೇಟ್ ಸೇದಿ, ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಫೋಟೋಗಳು ಹರಿದಾಡುತ್ತಿದೆ.
ಇದನ್ನೂ ಓದಿರಿ:ಕೆಲಸಕ್ಕೆ ರಾಜೀನಾಮೆ ನೀಡಿ ‘ಅಡಲ್ಟ್​ ಸ್ಟಾರ್’​ ಆದ ಮಾಜಿ ಪೊಲೀಸ್​ ಅಧಿಕಾರಿ: ಕಾರಣ ಕೇಳಿದ್ರೆ ಬೆರಗಾಗ್ತಿರಾ!
ಈ ಪ್ರಾಥಮಿಕ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಮದ್ಯದ ನಶೆಯಲ್ಲಿಯೇ ಸ್ಟಾಫ್ ನರ್ಸ್ ಚಿಕಿತ್ಸೆ ನೀಡುತ್ತಾರೆ ಎಂಬ ಆರೋಪವು ಇದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸ್ಥಳದಲ್ಲೇ ಧೂಮಪಾನ ಹಾಗೂ ಮದ್ಯಪಾನದಂತಹ ಅಕ್ರಮ ಚಟುವಟಿಕೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಿಳಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮದ್ಯಪಾನ ಮತ್ತು ಧೂಮಪಾನ ತಪ್ಪು. ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಕರ ಎಂದು ಆಸ್ಪತ್ರೆಗೆ ಬರುವವರಿಗೆ ಬುದ್ಧಿ ಹೇಳಬೇಕಾದ ಸಿಬ್ಬಂದಿಯೇ ಇಂತಹ ಕೆಲಸ ಮಾಡುವುದು ಎಷ್ಟು ಸರಿ. ಇಂಥವರನ್ನು ಕೆಲಸದಲ್ಲಿ ಮುಂದುವರಿಸುವುಸು ಸರಿಯೇ? ತಮ್ಮ ಚಟಗಳನ್ನು ತಮ್ಮ ಮನೆಯಲ್ಲಿಟ್ಟುಕೊಳ್ಳಲಿ ದೇವಸ್ಥಾನ ಸ್ವರೂಪವಾದ ಆಸ್ಪತ್ರೆಯಲ್ಲಿ ಇಂತಹ ಕೃತ್ಯ ಎಸಗುವುದು ಅಕ್ಷಮ್ಯ ಅಪರಾಧ.(ದಿಗ್ವಿಜಯ ನ್ಯೂಸ್​)
ಹಳೇ ವಾಹನಕ್ಕೆ ಕೇಂದ್ರದ ಹೊಸ ಕೊಡುಗೆ

ಬೆಳಗಿನ ಉಪಾಹಾರದ ವೇಳೆ ಈ 5 ಪದಾರ್ಥಗಳನ್ನು ಸೇವಿಸಲೇಬಾರದು: ಆರೋಗ್ಯ ಕೆಡಲಿದೆ ಹುಷಾರ್​!

ಮತ್ತೆ ಭಾರತದತ್ತ ಸಹಾಯಹಸ್ತ ಚಾಚಿದ ಪಾಕಿಸ್ತಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
