ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಪಿಕ್​ ಅಪ್​ ವಾಹನ ಮರಕ್ಕೆ ಡಿಕ್ಕಿಯಾದ ಪರಿಣಾಮ 6 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ಸಂಭವಿಸಿದೆ.
ಸವದತ್ತಿ ಯಲ್ಲಮ್ಮ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಪಿಕ್​ ಅಪ್​ ವಾಹನ ಅಪಘಾತಕ್ಕೀಡಾಗಿದೆ. ಐದು ಜನ ಸ್ಥಳದಲ್ಲಿ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಹನಮ್ಮವ್ವ(24), ದೀಪಾ (31), ಸವಿತಾ(12), ಸುಪ್ರೀತಾ(11), ಮಾರುತಿ(42) ಹಾಗೂ ಇಂದ್ರವ್ವಾ(24) ಮೃತರು. ಗಾಯಾಳುಗಳನ್ನು ಗೋಕಾಕ್ ಸೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನದಲ್ಲಿದ್ದವರು ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ಯಾತ್ರಾರ್ಥಿಗಳು. ಎಲ್ಲರು ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ‌ ದೇವಸ್ಥಾನಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪದವಿ ವಿದ್ಯಾರ್ಥಿಗಳಿಗೆ ಇನ್ನೂ ಸಿಗದ ಟ್ಯಾಬ್…

ಮಿತವ್ಯಯಕ್ಕೆ ಪಾಕ್ ಮೊರೆ; ಇಂಧನ ಉಳಿತಾಯಕ್ಕಾಗಿ ಮಾಲ್-ಮದುವೆ ಹಾಲ್​ಗಳು ಬೇಗ ಬಂದ್

ನಟಿ ತಮನ್ನಾ ಡೇಟಿಂಗ್​ ಸೀಕ್ರೆಟ್​ ರಿವೀಲ್​! ಬಾಯ್​ಫ್ರೆಂಡ್​ ಜೊತೆ ಮಿಲ್ಕಿ ಬ್ಯೂಟಿ ಲಿಪ್​ಲಾಕ್​, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − three =
Remember me
