ಬೆಳಗಾವಿ:ಸಿಆರ್‌ಪಿಎಫ್​ ಯೋಧ ಸಚಿನ್ ಸಾವಂತ್​ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ.
ಯೋಧನ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಪಿಎಸ್ಐ ಅನಿಲ್​ ಕುಮಾರ್ ಸಸ್ಪೆಂಡ್ ಆಗಿರುವುದಾಗಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದರು. ಪ್ರಕರಣ ಕುರಿತು ತನಿಖೆ ಮುಂದುವರೆದಿದೆ ಎಂದರು.
ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲ್​ಕುಮಾರ್ ಕರ್ತವ್ಯ ಲೋಪ ಕಂಡುಬಂದಿರುವುದರಿಂದ ಅಮಾನತು ಮಾಡಲಾಗಿದೆ ಎಂದು ಸುಹಾಸ್​ ಹೇಳಿದ್ದಾರೆ.
ಘಟನೆ ನಡೆದ ದಿನವೇ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಮಾರನೇ ದಿನ ಪತ್ರ ಬರೆದು ಸಿಆರ್​ಪಿಎಫ್​ ಅಧಿಕಾರಿಗಳಿಗೆ ರವಾನಿಸಲಾಗಿತ್ತು. ತನಿಖೆ ಮುಂದುವರೆದಿದ್ದು, ಪೇದೆಗಳ ತಪ್ಪು ಮಾಡಿರುವ ಕುರಿತು ವಿಚಾರಣೆ ನಡೆದಿದೆ ಎಂದು ಸುಹಾಸ್ ವಿವರಣೆ ನೀಡಿದರು.(ದಿಗ್ವಿಜಯ ನ್ಯೂಸ್​)
ಬೆಳಗಾವಿ ಯೋಧನ ವಿರುದ್ಧದ ಕೇಸ್ ಹಿಂತೆಗೆದುಕೊಳ್ಳುತ್ತಾ ರಾಜ್ಯ ಪೊಲೀಸ್ ಇಲಾಖೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 14 =
Remember me
