ಬೆಳಗಾವಿ:ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿಕೊಂಡ ಮಹಿಳೆಯೊಬ್ಬಳು ಗಂಡನ ಶವವನ್ನು ಹೂಳಿರುವ ಘಟನೆ ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್.ಗ್ರಾಮದಲ್ಲಿ ನಡೆದಿದೆ.
ಸಚಿನ್ ಸದಾಶಿವ ಭೋಪಳೆ (35) ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಅನಿತಾ ಸಚಿನ್ ಭೋಪಳೆ(35) ಕೊಲೆ ಆರೋಪಿ. ಜೆಸಿಬಿ ತರಿಸಿ ರಾತ್ರೋರಾತ್ರಿ ಗಂಡನ ಶವವನ್ನು ಹೂತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಆಂಧ್ರದ ಮಾಜಿ ಸಿಎಂ ಎನ್​. ಚಂದ್ರಬಾಬು ನಾಯ್ಡು ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಗಂಡನ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದ್ದು, ಎಮ್ಮೆ ಸತ್ತಿದೆ ಎಂದು ನಾಟಕವಾಡಿ ಜೆಸಿಬಿ ತರಿಸಿಕೊಂಡು ಯಾರಿಗೂ ತಿಳಿಯದಂತೆ ಶವವನ್ನು ಹೂಳಲು ಪ್ರಯತ್ನಿಸಿದ್ದಾಳೆ. ತನ್ನ ಸಹೋದರರ ಜತೆ ಸೇರಿ ಕೃತ್ಯ ಎಸಗಿದ್ದಾಳೆನ್ನಲಾಗಿದೆ.
ಇದೀಗ ಆರೋಪಿಯ ಅಸಲಿಯತ್ತು ಬಯಲಾಗಿದ್ದು, ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹೂತಿದ್ದ ಶವ ಮತ್ತೆ ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಿಪ್ಪಾಣಿ ಠಾಣಾ ಪೊಲೀಸರು ತಲೆ ಮರೆಸಿಕೊಂಡಿರುವ ಪತ್ನಿ ಹಾಗೂ ಆಕೆಯ ಸಹೋದರರಿಗಾಗಿ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮಿಲನ ಬಯಸಿದಾಗ ಬಗೆಬಗೆ ಹಾಡು ಹೇಳುವ ಲಕ್ಷ ಕೆ.ಜಿ ತೂಕದ ನೀಲಿ ತಿಮಿಂಗಲ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − six =
Remember me
