ಬೆಳಗಾವಿ ಇನ್​ಸ್ಟಿಟ್ಯೂಟ್​ ಆಫ್​​ ಮೆಡಿಕಲ್​ ಸೈನ್ಸ್​ನಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಇರುವ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗೂ ಒಂದು ಹುದ್ದೆ ಮೀಸಲಿರಿಸಲಾಗಿದೆ.
ಹುದ್ದೆಗಳ ವಿವರ:ಸಹ ಪ್ರಾಧ್ಯಾಪಕ (ಬರ್ನ್​​ ಆ್ಯಂಡ್​ ಪ್ಲಾಸ್ಟಿಕ್​ ಸರ್ಜನ್​)-1, ಕ್ಯಾಸುಲ್ಟಿ ಮೆಡಿಕಲ್​ ಆಫೀಸರ್​-2, ಸಹ ಪ್ರಾಧ್ಯಾಪಕ (ಪೀಡಿಯಾಟ್ರಿಕ್ಸ್​)-1, ಜನರಲ್​ ಮೆಡಿಸಿನ್​-1, ಸೈಕಿಯಾಟ್ರಿ-1, ಒಬಿಜಿ-1, ರೇಡಿಯಾಲಜಿ-1, ಸಹಾಯಕ ಪ್ರಾಧ್ಯಾಪಕ (ರೇಡಿಯಾಲಜಿ)-1, ರೆಫ್ರಾಕ್ಷನಿಸ್ಟ್​-2.
ಶೈಕ್ಷಣಿಕ ಅರ್ಹತೆ:ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಬರ್ನ್​​ ಮತ್ತು ಪ್ಲಾಸ್ಟಿಕ್​ ಸರ್ಜರಿಯಲ್ಲಿ ಎಂಎಸ್​/ಎಂಸಿಎಚ್​, ಜನರಲ್​ ಮೆಡಿಸಿನ್​ನಲ್ಲಿ ಎಂಬಿಬಿಎಸ್​, ಎಂಡಿ/ಎಂಎಸ್​, ಪಿಯುಸಿ ಜತೆಗೆ ರೆಫ್ರಾಕ್ಷನಿಸ್ಟ್​ ವಿಷಯದಲ್ಲಿ ಎರಡು ವರ್ಷ ತರಬೇತಿ ಪಡೆದಿರಬೇಕು. ಒಂದರಿಂದ 2 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ:ಎಲ್ಲ ಹುದ್ದೆಗಳಿಗೆ ಸರ್ಕಾರದ ಮಾನದಂಡದಂತೆ ಆಯಾ ಹುದ್ದೆಗಳಿಗೆ ವಯೋಮಿತಿ ನಿಗದಿ ಪಡಿಸಲಾಗಿದ್ದು, ರೆಫ್ರಾಕ್ಷನಿಸ್ಟ್​ ಹುದ್ದೆಗೆ 22ರಿಂದ 40 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.
ವೇತನ:ರೆಫ್ರಾಕ್ಷನಿಸ್ಟ್​ ಹುದ್ದೆಗೆ ಮಾಸಿಕ ವೇತನ 16,000 ರೂ. ಇದ್ದು, ಉಳಿದ ಹುದ್ದೆಗಳಿಗೆ 60,000 ರೂ.ನಿಂದ 80,000 ರೂ. ಮಾಸಿಕ ವೇತನ ನಿಗದಿಯಾಗಿದೆ.
ಆಯ್ಕೆ ಪ್ರಕ್ರಿಯೆ:ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಮತ್ತು ವೃತ್ತಿ ಅನುಭವ ಆಧರಿಸಿ ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುವುದು. ಆರು ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧಾರದ ಮೇಲೆ ಕೆಲಸ ಅವಧಿ ವಿಸ್ತರಣೆ ಆಗುವ ಸಾಧ್ಯತೆಯೂ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ:25.4.2022ಅರ್ಜಿ ಸಲ್ಲಿಸಬೇಕಾದ ವಿಳಾಸ:ಅಡ್ಮಿನಿಸ್ಟ್ರೇಟಿವ್​ ಆಫೀಸರ್​, ಬಿಐಎಂಎಸ್​, ಡಾ.ಬಿ.ಆರ್​.ಅಂಬೇಡ್ಕರ್​ ರಸ್ತೆ, ಬೆಳಗಾವಿ-590001ಮಾಹಿತಿಗೆ:https://bit.ly/3xFfy3C
ದಾವಣಗೆರೆ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ವಿವಿಧ ಹುದ್ದೆಗೆ ನೇಮಕ: ಅರ್ಜಿ ಸಲ್ಲಿಸಲು ಮೇ 17 ಕೊನೇ ದಿನ

ತಡರಾತ್ರಿ ಪಂಪ್​ಸೆಟ್ ಕದಿಯಲು ಬಂದ ಯುವಕರಿಬ್ಬರನ್ನು ಅಮಾನುಷವಾಗಿ ಕೊಂದ ತೋಟದ ಮಾಲೀಕ!

ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
