ಬೆಳಗಾವಿ:ಕುಂದಾನಗರಿಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿ ಮೇಲೆ ಹಲ್ಲೆ, ಪೊಲೀಸರಿಂದ ನಡೆದ ದೌರ್ಜನ್ಯ ಖಂಡಿಸಿ ಹಾಗೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಮಂಗಳವಾರ ಆಕ್ರೋಶ ಹೊರಹಾಕುತ್ತಲೇ ಕನ್ನಡ ಕಹಳೆ ಮೊಳಗಿಸಿದರು.
ಧಾರವಾಡದಿಂದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ “ನೂರು ವಾಹನ ಸಾವಿರ ಕನ್ನಡ ಧ್ವಜ” ಘೋಷ ವಾಕ್ಯದೊಂದಿಗೆ ಬೆಳಗಾವಿಗೆ ಮಂಗಳವಾರ ಹೊರಟಿದ್ದ ಕಾರ್ಯಕರ್ತರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್​ನಲ್ಲಿ ಪೊಲೀಸರು ತಡೆದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕರವೇ ಕಾರ್ಯಕರ್ತರು ಲಾರಿ, ಬಸ್ಸುಗಳ ಮೇಲೇರಿ ಬೃಹತ್​ ಕನ್ನಡ ಬಾವುಟ ಪ್ರದರ್ಶಿಸಿದರು. ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಕರವೇ ಕಾರ್ಯಕರ್ತರು ನಡುರಸ್ತೆಯಲ್ಲಿ ವಾಹನಗಳ ಕೆಳಗೆ ಮಲಗಿ ವಾಹನ ಸಂಚಾರ ತಡೆದರು. ಪರಿಣಾಮ ಎರಡು ಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್​ಗೆ ಮಹಾಮೇಳಾವ್​ ನಡೆಸಲು ಅವಕಾಶ ಕೊಡುವ ಸರ್ಕಾರವು ನಾಡು-ನುಡಿ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಬೆಳಗಾವಿಗೆ ಹೋಗಲು ಅವಕಾಶ ನೀಡದಿರುವುದು ದುರಂತ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣಗೌಡ ಆಕ್ರೋಶ ಹೊರ ಹಾಕಿದರು.
ಅತ್ತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಭೇಟಿಗೆ ನಿರ್ಧರಿಸಿದ್ದ ಮಹಾ ಸಚಿವರ ಪ್ರವೇಶ ರ್ನಿಬಂಧಿಸಿದ್ದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಎಂಇಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರನ್ನ ಪೊಲೀಸರು ವಶಕ್ಕೆ ಪಡೆದು, ಬಿಟ್ಟು ಕಳುಹಿಸಿದ್ದಾರೆ.ಬೆಳಗಾವಿ ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಡಿಸಿಪಿಗಳಾದ ಡಿಸಿಪಿ ರವೀಂದ್ರ ಗಡಾದೆ, ಪಿ.ವಿ.ಸ್ನೇಹಾ ನೇತೃತ್ವದಲ್ಲಿ 11 ಕೆಎಸ್​ಆರ್​ಪಿ ತುಕಡಿ ಸೇರಿ 300 ಅಧಿಕ ಪೊಲೀಸ್​ ಬಂದೋಬಸ್ತ್​ ಕಲ್ಪಿಸಿದ್ದರು.
ಅತ್ತ ಕರವೇ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ, ಮಹಾರಾಷ್ಟ್ರ ಮುಖಂಡರು ಬೆಳಗಾವಿಗೆ ಭೇಟಿ ನೀಡುವ ನಿರ್ಧಾರವನ್ನ ಕೈಬಿಟ್ಟರು. ಮಹಾರಾಷ್ಟ್ರದಲ್ಲಿ ಮಾತನಾಡಿದ ಮಹಾರಾಷ್ಟ್ರ ಸಚಿವ ಶಂಭುರಾಜೆ ದೇಸಾಯಿ ಮಾತನಾಡಿ, ನಮ್ಮ ಮಹಾರಾಷ್ಟ್ರ ನಾಯಕರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಸೂಚನೆ ನೀಡಿದರೆ ಮಾತ್ರ ಬೆಳಗಾವಿಗೆ ಹೋಗುತ್ತೇವೆ. ಮಂಗಳವಾರ ಡಾ.ಅಂಬೇಡ್ಕರ್​ ಮಹಾಪರಿನಿರ್ವಾಣ ದಿನ ಇದೆ. ಹೀಗಾಗಿ ನಾವು ಬೆಳಗಾವಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

ಜೂಜಾಟಕ್ಕೆ ತನ್ನನ್ನೇ ಪಣಕ್ಕಿಟ್ಟು ಸೋತು ಪರ ಪುರುಷನ ಪಾಲಾದ 2 ಮಕ್ಕಳ ತಾಯಿ! ಗಂಡನ ಗೋಳು ನೋಡಲಾಗ್ತಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 17 =
Remember me
