ಬೆಳಗಾವಿ: ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಬೆಳಗಾವಿಯಲ್ಲಿ ಮಾರ್ಚ್ 28ರಂದು ಮಹಿಳೆಯೊರ್ವಳು ದಾಖಲಿಸಿದ್ದ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಎಪಿಎಂಸಿ ಪೊಲೀಸರು ಈ ಪ್ರಕರಣ ಆರೋಪಿಗಳನ್ನು ಸರೆಹಿಡಿದಿದ್ದಾರೆ.
ಬೆಳಗಾವಿಯ ಅಂಬೇಡ್ಕರ್ ನಗರ ನಿವಾಸಿ ರಮೇಶ ಕಾಂಬಳೆ (38) ಕೊಲೆಯಾದ ದುರ್ದೈವಿ. ಪರಪುರುಷನ ಜತೆಗಿನ ಸಂಬಂಧಕ್ಕಾಗಿ ಮಹಿಳೆ ತನ್ನ ಸ್ನೇಹಿತರೊಂದಿಗೆ ಸೇರಿ ಗಂಡನನ್ನೇ ಕೊಂದಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸರಿಂದ ಮೃತನ ಪತ್ನಿ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಮನೆಯಲ್ಲಿ ಮೊಬೈಲ್ ಬಿಟ್ಟು ಮಾರ್ಚ್ 28ರಂದು ರಮೇಶ್ ನಾಪತ್ತೆಯಾಗಿದ್ದ. ಏಪ್ರಿಲ್ 5ರಂದು ಗಂಡ ರಮೇಶ್ ನಾಪತ್ತೆ ಆಗಿದ್ದಾನೆಂದು ಪತ್ನಿ ಸಂಧ್ಯಾ ದೂರು ನೀಡಿದ್ದಳು. ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಕಥೆ ಕಟ್ಟಿದ್ದಳು. ರಮೇಶ ಫೋನ್ ಮನೆಯಲ್ಲೇ ಇದ್ದರೂ ಯಾವುದೇ ಸ್ನೇಹಿತರ ಕರೆ ಬರದಿದ್ದಾಗ ರಮೇಶ್​​​ ಪೋಷಕರಿಗೆ ಸಂದೇಹ ಬಂದು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾಕ್​ ಟು ಬ್ಯಾಕ್​ 5 ಸಿಕ್ಸರ್​ ಸಿಡಿಸಿದ RCB ಆಟಗಾರ: ವಿಲ್​ ಜ್ಯಾಕ್ಸ್​ ಐಪಿಎಲ್​ನಲ್ಲಿ ಏಕೆ ಆಡಲಿಲ್ಲ?
ರಮೇಶ ಪೋಷಕರ ದೂರಿನ ಮೆರೆಗೆ ಎಪಿಎಂಪಿ ಠಾಣೆ ಪೊಲೀಸರು, ಬಳಿಕ ರಮೇಶ್ ಪತ್ನಿ ಸಂಧ್ಯಾ ಹಾಗೂ ರಮೇಶ ಸ್ನೇಹಿತರನ್ನು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಪತ್ನಿ, ಸ್ನೇಹಿತರು ತಾವೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ರಮೇಶ್​​ ಪತ್ನಿ ಸಂಧ್ಯಾ ಹಾಗೂ ಬಾಳು ನಡುವೆ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ಪೇಂಟರ್ ಆಗಿದ್ದ ರಮೇಶ್ ಕಾಂಬಳೆ. ಈತನ ಸ್ನೇಹಿತ ಬಾಳು ಬಿರಂಜೆ ಹಾಗೂ ಪತ್ನಿ ಸಂಧ್ಯಾ ಮಧ್ಯೆ ಅನೈತಿಕ ಸಂಬಂಧ ಇತ್ತು. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ರಮೇಶ್‌ಗೆ ಪತ್ನಿ, ಸ್ನೇಹಿತನಿಂದಲೇ ಖೆಡ್ಡಾ ತೋಡಲಾಗಿತ್ತು. ಸಂಧ್ಯಾಗೆ ಆಕೆಯ ಪ್ರಿಯಕರ ಬಾಳು ಕೃತ್ಯಕ್ಕೆ ಸಹಕರಿಸಿದ್ದನು. ಬಾಳು ಸ್ನೇಹಿತರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರಮೇಶ್​​​ನನ್ನು ಕೊಲೆ ಮಾಡಿ ಗೋವಾದ ಚೋರ್ಲಾ ಘಾಟ್​​​ನಲ್ಲಿ ಶವ ಬಿಸಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಮೇಶ್ ಮೃತದೇಹ ಪತ್ತೆಗಾಗಿ ಮುಂದಾಗಿದ್ದಾರೆ.
ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
