ಬೆಂಗಳೂರು:ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯೊಬ್ಬಳ ಜತೆ ಮದ್ವೆ ಆಗುವ ಕನುಸು ಕಂಡಿದ್ದ ಬಳ್ಳಾರಿ ಜಿಲ್ಲೆಯ ಶಿಕ್ಷಕರೊಬ್ಬರಿಗೆ ಸಂಕಷ್ಟ ಎದುರಾಗಿದೆ. ನೀನಂದ್ರೆ ನನಗಿಷ್ಟ, ನಾನು ನಿನ್ನನ್ನೇ ಮದ್ವೆ ಆಗ್ತೀನಿ ಎಂದು ಹೇಳುತ್ತಿದ್ದಾಕೆಯ ಅಸಲಿ ಮುಖ ನಾಲ್ಕು ವರ್ಷದ ಬಳಿಕ ಬಯಲಾಗಿದ್ದು, ಶಿಕ್ಷಕನೀಗ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ.
ದೇವೆಂದ್ರಪ್ಪ ಮೋಸ ಹೋದವರು. ಇವರಿಗೆ ಈಗಾಗಲೇ ಬೇರೊಬ್ಬರೊಂದಿಗೆ ಮದುವೆ ಆಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ದೇವೇಂದ್ರಪ್ಪ, 2ನೇ ಮದುವೆ ಆಗಲು ಮ್ಯಾಟ್ರಿಮೋನಿಯಲ್ಲಿ ಪ್ರೊಪೈಲ್​ ಹಾಕಿದ್ದರು. ಯುವತಿಯೊಬ್ಬಳು ತನಗೆ ಒಪ್ಪಿಗೆ ಇದೆ ಎಂದು ಫೋಟೋ ಹಾಗೂ ಪ್ರೊಪೈಲ್ ಕಳಿಸಿದ್ದಳು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ನನ್ನ ಹೆಸರು ಹರಿತಾ, ಕೇರಳ ಮೂಲದವಳು. ನಾನೀನಗ ಎಂಬಿಬಿಎಸ್​ ಓದುತ್ತಿರುವೆ ಎಂದು ಪರಿಚಯ ಹೇಳಿಕೊಂಡಿದ್ದಳು. ನಿಮ್ಮನ್ನು ಮದುವೆ ಆಗೋಕೆ ನಾನು ರೆಡಿ ಎಂದೂ ಹೇಳಿದ್ದಳು. ಚೆಂದ ಚೆಂದ ಫೋಟೋ ಕಳಿಸಿ ಶಿಕ್ಷಕನನ್ನು ಬಲೆಗೆ ಬೀಳಿಸಿಕೊಂಡಿದ್ದಳು. ಅಷ್ಟೇ ಅಲ್ಲ, ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್​ ಕಳುಹಿಸಿ ಪುಸಲಾಯಿಸಿದ್ದಳು. ನಂತರ ತನ್ನ ಸ್ನೇಹಿತೆಯರನ್ನೂ ಫೋನ್​ ಮೂಲಕ ಪರಿಚಯಿಸಿದ್ದಳು.
ನಂತರ ಕಷ್ಟ ಅಂತೇಳಿ ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಿದಳು. ನಿನ್ನನ್ನು ನೋಡಬೇಕು ಎಂದು ದೇವೇಂದ್ರಪ್ಪ ಹೇಳಿದರೆ ನೆಪ ಹೇಳುತ್ತಲೇ ವರ್ಷಗಟ್ಟಲೇ ತಳ್ಳಿಹಾಕಿದ್ದಳು. ನಾಲ್ಕೈದು ವರ್ಷದಲ್ಲಿ ಒಮ್ಮೆಯೂ ದೇವೆಂದ್ರಪ್ಪರನ್ನ ಭೇಟಿಯಾಗಿಲ್ಲ. ಮಾದಕ ನೋಟದ ಫೋಟೋಗಳು, ಉದ್ರೇಕಕಾರಿ ಮೆಸೇಜ್​ಗೆ ಬೋಲ್ಡ್ ಆಗಿದ್ದ ದೇವೆಂದ್ರಪ್ಪ, ಯುವತಿ ಜಾಲದಲ್ಲಿ ಬಿದ್ದು ಯಾಮಾರಿದ್ದಾರೆ. ಇದೀಗ ಆಕೆ ಪ್ರೇಯಸಿಯಲ್ಲ, ಹಣ ಪೀಕುವ ವಂಚಕಿ. ತಾನು ಇಷ್ಟು ದಿನ ಬಿದ್ದದ್ದು ಮೋಸದ ಬಲೆಗೆ ಎಂದು ದೇವೇಂದ್ರಪ್ಪಗೆ ಜ್ಞಾನೋದಯ ಆಗಿದೆ.
ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್​ಗೆ ಬಾರದ ಅಪ್ಪ-ಅಮ್ಮ… ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್​ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ

ನಿನ್ನೆ ರಾತ್ರಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡ ಮಹಿಳಾ ಟೆಕ್ಕಿ: ಬೆಂಗಳೂರಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 17 =
Remember me
