ಬಳ್ಳಾರಿ:ಕೆಲ ದಿನಗಳಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಆಯ್ಕೆ ವಿಚಾರವಾಗಿ ಗೊಂದಲ ಉಂಟಾಗಿದ್ದು ಇದೀಗ ನೂತನ ಡಿ.ಸಿ ಆಗಿ ಪ್ರಶಾಂತ್ ಕುಮಾರ್ ಮಿಶ್ರ ನೇಮಕವಾಗಿದ್ದಾರೆ.
ಪ್ರಶಾಂತ್ ಕುಮಾರ್ ಮಿಶ್ರ 2014ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿದ್ದು ಈ ಹಿಂದೆ ಕೆಎಸ್ಆರ್​ಟಿಸಿ ನಿರ್ದೇಶಕರಾಗಿದ್ದರು. ಅವರು ಇಂದಿನಿಂದ ಬಳ್ಳಾರಿ ನೂತನ ಡಿಸಿಯಾಗಿ ನೇಮಕವಾಗಿದ್ದು ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಪವನ್ ಕುಮಾರ್ ಮಾಲಪಾಟಿ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದರು.
ಇದನ್ನೂ ಓದಿ:ಮೂಲಸೌಲಭ್ಯ ಕೊರತೆಯಿಂದ ಕಲಿಕೆಗೆ ಹಿನ್ನಡೆ: ಜಿಲ್ಲಾಧಿಕಾರಿಗೆ ಮನವಿ
ಕಳೆದ ಸೋಮವಾರ ಪವನ್ ಕುಮಾರ್ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಸರ್ಕಾರ ವಿಜಯನಗರ ಜಿಲ್ಲೆಯ ಮಾಜಿ ಡಿಸಿ ಟಿ.ವೆಂಕಟೇಶ್ ನೇಮಕ ಮಾಡಿತ್ತು. ಆದರೆ ವೆಂಕಟೇಶ್ ನೇಮಕದ ಬಗ್ಗೆ ಸಚಿವ ನಾಗೇಂದ್ರ ಹಾಗೂ ಸಂಡೂರು ಶಾಸಕರ ನಡುವೆ ಹಗ್ಗ ಜಗ್ಗಾಟ ನಡೆದಿತ್ತು. ಈ ಕಾರಣದಿಂದಾಗಿ ಬಳ್ಳಾರಿಯ ಡಿ.ಸಿ ಯಾರಾಗುತ್ತಾರೆ ಎನ್ನುವ ಗೊಂದಲ ಉಂಟಾಗಿತ್ತು.
ಈ ಸಂದರ್ಭ, ವೆಂಕಟೇಶ್ ಪರ ನಾಗೇಂದ್ರ ಹಾಗೂ ವಿರುದ್ಧವಾಗಿ ಸಂಡೂರು ಶಾಸಕ ತುಕಾರಾಂ ಪಟ್ಟು ಹಿಡಿದಿದ್ದರು. ಕೊನೆಗೆ ಅಳೆದು ತೂಗಿ ವೆಂಕಟೇಶ್ ಬದಲಿಗೆ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಬಳ್ಳಾರಿ ಡಿಸಿ ಆಗಿ ಸರ್ಕಾರ ನೇಮಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
