ಬಳ್ಳಾರಿ:‘‘ಲಾಕ್‌ಡೌನ್ ಇದೆ, ಮನೇಲಿ ಕುಂತು ಕುಂತು ಬೇಜಾರಾಗ್ತಿದೆ… ಏನಪ್ಪಾ ಮಾಡೋದು…’’ ಇದು ಇತ್ತೀಚೆಗೆ ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದೇ ಭಾವನೆಯಲ್ಲಿ ಮನೆಯಿಂದ ಹೊರಹೋದ ಯುವಕರ ಸ್ಥಿತಿ ಏನಾಗಿದೆ ನೋಡಿ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಆರು ಯುವಕರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಟೈಂಪಾಸ್ ಮಾಡಲೆಂದು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದರು. ಆ ಪೈಕಿ ಮೂವರು ಯುವಕರು ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಪಕ್ರುದ್ದೀನ್ (25), ಮಾರುತಿ (23) ಮತ್ತು ಸುರೇಶ (25) ನೀರುಪಾಲಾದವರು. ಉಳಿದವರು ಅದ್ಹೇಗೋ ಪಾರಾಗಿ ಬಂದಿದ್ದಾರೆ.
ಇನ್ನೊಂದೆಡೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಪರಾಪುರ ಗ್ರಾಮದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ವಿದ್ಯಾರ್ಥಿನಿ ಕಾಲುಜಾರಿ ನೀರು ಪಾಲಾಗಿದ್ದಾಳೆ. ಬೆಂಗಳೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಪಾರ್ವತಿ (17), ಲಾಕ್‌ಡೌನ್ ಘೋಷಣೆಯಾದ ಸ್ವಗ್ರಾಮಕ್ಕೆ ಬಂದಿದ್ದಳು. ಬೆಳಗ್ಗೆ ಗೆಳತಿಯೊಂದಿಗೆ ಬಟ್ಟೆ ತೊಳೆಯಲು ಹೋದಾಗ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿ ತಂದೆ ಮೌನೇಶ ಮತ್ತು ತಾಯಿ ನಿಂಗಮ್ಮ ಬೆಂಗಳೂರಿನಲ್ಲಿಯೆ ಇದ್ದಾರೆ. ಕುಟುಂಬದವರ ಮನವಿಯ ಮೇರೆಗೆ ಡಿಸಿ ಸೂಚನೆಯಂತೆ ತಹಸೀಲ್ದಾರ ಬಲರಾಮ ಕಟ್ಟಿಮನಿ, ಮೃತ ವಿದ್ಯಾರ್ಥಿನಿಯ ಪಾಲಕರನ್ನು ಕರೆ ತರಲು ವಾಹನದ ಪರವಾನಗಿ ನೀಡಿದ್ದಾರೆ.
ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
