ಹೊಸಪೇಟೆ(ಬಳ್ಳಾರಿ):ವಿಜಯನಗರ ಜಿಲ್ಲೆ ರಚನೆಗೆ ಬೆಂಬಲ ಸೂಚಿಸಿ ಇಂಗ್ಲಿಷ್​ನಲ್ಲಿ ಪತ್ರ ಬರೆದ ನಟ, ನಿರ್ಮಾಪಕ ಅಜಯ್ ರಾವ್​ ವಿರುದ್ಧ ಬಳ್ಳಾರಿ ಮಂದಿ ಫುಲ್​ ಗರಂ ಆಗಿದ್ದಾರೆ. ​
ನನ್ನ ಜನ್ಮಭೂಮಿ, ನನ್ನ ಸ್ವಂತ ಊರು ಹೊಸಪೇಟೆ ವಿಜಯನಗರ ಜಿಲ್ಲೆ ಎಂದು ಘೋಷಣೆಯಾಗಿರುವುದು ನನಗೆ ಒಂದು ದೊಡ್ಡ ಸಂಭ್ರಮ. ಹಾಗಾಗಿ ನಮ್ಮ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ, “ವಿಜಯನಗರ ಜಿಲ್ಲಾ ಕಾರಣೀಭೂತ” ಸನ್ಮಾನ್ಯ ಶ್ರೀ ಆನಂದ ಸಿಂಗ್​ರವರಿಗೆ ನನ್ನ ಬೆಂಬಲ ಹಾಗು ಮೆಚ್ಚುಗೆಯ ಪತ್ರವನ್ನು ನೀಡುವುದರ ಮೂಲಕ ಸಂತಸವನ್ನು ಹಂಚಿಕೊಂಡೆ ಎಂದು ಅಜಯ್​ ರಾವ್​ ಅವರು ಫೇಸ್​ಬುಕ್​ನಲ್ಲಿ ಪತ್ರದ ಸಮೇತ ಪೋಸ್ಟ್​ ಮಾಡಿದ್ದಾರೆ.
ಇದನ್ನೂ ಓದಿ:ಈ ಮಾದಕ ಬೆಡಗಿಯಲ್ಲಿ ಅಡಗಿದೆ ಒಂದು ವಿಶೇಷತೆ: ಏನೆಂದು ಪತ್ತೆ ಮಾಡಬಲ್ಲಿರಾ?
ಪತ್ರದಲ್ಲಿ ಇಂಗ್ಲಿಷ್ ಭಾಷೆ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಿಗರು ನಿಮಗೆ ಕನ್ನಡ ಬರುವುದಿಲ್ಲವಾ? ಕನ್ನಡದಲ್ಲಿ ಯಾಕೆ ಮನವಿ ಪತ್ರವಿಲ್ಲ? ಕನ್ನಡ ಭಾಷೆಗೆ ಅವಮಾನ ಮಾಡಬೇಡಿ. ನಿಮ್ಮ ಬಗ್ಗೆ ನಮಗೆ ಅಭಿಮಾನ ಇದೆ ಅದನ್ನು ಕಳೆದುಕೊಳ್ಳ ಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ಜಿಲ್ಲಾ ರಚನೆ ವಿರುದ್ಧವೂ ಅಸಮಾಧಾನ ಹೊರಹಾಕಿರುವ ನೆಟ್ಟಿಗರು ಜಿಲ್ಲಾ ರಚನೆಯಿಂದ ದುಂದುವೆಚ್ಚ ಆಗುತ್ತದೆ. ತೆರಿಗೆಯ ಹಣ ಜನರಿಗೆ ಹೊರೆ ಬೀಳುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಇದ್ಯಾವುದಕ್ಕೂ ಅಜಯ್​ ರಾವ್​ ಅವರು ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಯಾವ ರೀತಿ ಉತ್ತರ ನೀಡಲಿದ್ದಾರೆ ಎಂಬ ಕುತೂಹಲವಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಐಜಿಪಿ ರೂಪಾಗೆ ಶಾಕ್​ ನೀಡಿದ ಅಸ್ಸಾಂ ಕರೆ: ಸೈಬರ್​ ಪೊಲೀಸ್​ ಮೊರೆಹೋದ ಮಹಿಳಾ ಐಪಿಎಸ್ ಅಧಿಕಾರಿ!​
ಕಮಲ್​ ಹಾಸನ್​ ಪ್ರಣಾಳಿಕೆ ನೋಡಿ ಗೃಹಿಣಿಯರಿಗೆ ಖುಷಿಯೋ ಖುಷಿ: ಅಂಥದ್ದೇನಿದೆ ನೋಡಿ…

ಬಿಜೆಪಿ ಶಾಸಕನಿಗೆ ಖಡಕ್​ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!

VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
