ಬಳ್ಳಾರಿ:ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಇದೀಗ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಈ ಹಿಂದೆ ಖೈದಿಯಾಗಿ ನಟಿಸಿದ್ದ ಜೈಲಿಗೆ ಈಗ ನಿಜವಾಗಿಯೂ ಅಪರಾಧಿಯಾಗಿ ಹೋಗಿರುವುದು ಅವರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.
ಇನ್ನೂ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ವೇಳೆ ಅವರು ಕೂಲಿಂಗ್​ ಗ್ಲಾಸ್​ ಧರಿಸಿರುವುದು, ಕೈಗೆ ಬೇಡಿ ಹಾಕದಿರುವುದು ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಆಸ್ಪದ ಮಾಡಿಕೊಟ್ಟಿವೆ. ಈ ಕುರಿತು ಮಾತನಾಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಈ ಕುರಿತು ಮಾತನಾಡಿದ್ದು, ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್​ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ಕೋಳದ ಬದಲು ಬಟ್ಟೆ ಕಟ್ಟಿದ್ದರು. ದರ್ಶನ್​ ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್​ಗಳನ್ನು ಬಿಚ್ಚಿಸಲಾಗಿದೆ. ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅದೆಷ್ಟು ಪವರ್ ಇದೆ ಎಂದು ಡಾಕ್ಟರ್ ಚೆಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್​ ಶಾಸಕನ ಮೇಲೆ ಹಲ್ಲೆ ಮಾಡಿದ ನಿವೃತ್ತ CRPF ಯೋಧ; ವಿಡಿಯೋ ವೈರಲ್​
ದರ್ಶನ್​ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು, ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ. ಎಲ್ಲರಿಗೂ ಕೊಡುವ ಊಟವನ್ನೇ ದರ್ಶನ್​ಗೂ ಕೊಡುತ್ತೇವೆ. ಕೈಯಲ್ಲಿದ್ದ ಖಡಗ ಟೈಟ್ ಆಗಿತ್ತು, ಹಾಗಾಗಿ ತೆಗೆಯಲಾಗಿತ್ತು. ಕೋಳದ ಬದಲಾಗಿ ಬಟ್ಟೆಯಲ್ಲಿ ಕೈ ಕಟ್ಟಲಾಗಿತ್ತು ಎಂದು ಹೇಳಿದ್ದಾರೆ.
ನಾನು ಜೈಲಿಗೆ ಭೇಟಿ ನೀಡಿದಾದಗ ದರ್ಶನ್​ ಅವರನ್ನು ಮಾತನಾಡಿಸಿಲ್ಲ. ನಾನು ಜೈಲಧಿಕಾರಿಯವರ ಜೊತೆ ಕೆಲಸದ ವಿಚಾರವಾಗಿ ಮಾತನಾಡಬೇಕಿತ್ತು. ಹೀಗಾಗಿ ನಾನು ಜೈಲಿಗೆ ಭೇಟಿ ನೀಡಿದೆ. ಉಳಿದಂತೆ ದರ್ಶನ್​ ಅವರನ್ನು ನಾನು ಭೇಟಿ ಮಾಡಿಲ್ಲ. ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿ ವಾತಾವರಣಕ್ಕೆ ದರ್ಶನ್​ ಅವರು ಅಡ್ಜಸ್ಟ್​ ಆಗಲೇಬೇಕಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 4 =
Remember me
