ವಿಎಸ್‌ಕೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನಬಳ್ಳಾರಿ:ಮಂತ್ರಾಲಯ ಮಠದಿಂದ ಶ್ರೀ ರಾವೇಂದ್ರ ಸ್ವಾಮಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಪೂರ್ವಾಶ್ರಮದ ತಂದೆ ಹಾಗೂ ವಿದ್ವಾನ್ ರಾಜಾ ಎಸ್.ಗಿರಿ ಆಚಾರ್ಯ ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಎಂಟನೇ ಘಟಿಕೋತ್ಸವದಲ್ಲಿ ಕುಲಪತಿ ಸಿದ್ದು ಪಿ. ಅಲಗೂರು ಅವರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದರು. ಶ್ರೀದಲ್ಲೇ ಅಸ್ತಿತ್ವಕ್ಕೆ ಬರಲಿರುವ ರಾವೇಂದ್ರ ಸ್ವಾಮಿ ವಿಶ್ವವಿದ್ಯಾಲಯಕ್ಕೆ ವಿಎಸ್‌ಕೆ ವಿವಿಯ ಆಡಳಿತ ಮಂಡಳಿಯವರು ಅಗತ್ಯ ಸಲಹೆಗಳನ್ನು ನೀಡಬೇಕೆಂದು ಕೋರಿದರು.
ನನ್ನ ಸಾಧನೆ ಅತ್ಯಲ್ಪವಾದರೂ ವಿಎಸ್‌ಕೆ ವಿವಿಂದ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತಿದೆ. ನನಗೆ ಬೇರೆ ಸನ್ಮಾನಗಳು ದೊರೆತಿದ್ದರೂ ವಿಎಸ್‌ಕೆ ವಿವಿಯ ಗೌರವ ಡಾಕ್ಟರೇಟ್ ವಿಶೇಷವಾಗಿದೆ. ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣ ದೇವರಾಯನ ಹೆಸರು ಇರುವುದು ಅದಕ್ಕೆ ಕಾರಣ. ಶ್ರೀಕೃಷ್ಣದೇವರಾಯ ವಿದ್ವಾಂಸರನ್ನು ಗೌರವದಿಂದ ಕಾಣುತ್ತಿದ್ದರು ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
