ಬಳ್ಳಾರಿ:ವಿಜಯನಗರ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾಘಟಕದಿಂದ ಮತ್ತೊಂದು ಘಟಕಕ್ಕೆ ರೋಗಿಯನ್ನು ಸಾಗಿಸಲು ವ್ಹೀಲ್ ಚೇರ್ ನೀಡದ ಕಾರಣ ರೋಗಿಯ ತಂದೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಸಿರುಗುಪ್ಪ ತಾಲೂಕಿನ ಶಾನವಾಸಪುರದ ಮಾಬಾಷಾ ಎಂಬುವರು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿದ್ದ ಮಗಳು ಶ್ರೀಂಥಾಜ್​ಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಆಂಬುಲೆನ್ಸ್​ನಲ್ಲಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು‌ ಬಂದಾಗ, ಆ ವಾಹನವು ತುರ್ತು ನಿಗಾಘಟಕಕ್ಕೆ ಇಳಿಸಿ ಮುಂದೆ ಹೋಗಿದೆ.
ತಮ್ಮ ಮಗಳ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆ ನೀಡುವ ಘಟಕ ಇದಲ್ಲ, ನೀನು ಬೇರೊಂದು ಘಟಕಕ್ಕೆ ತೆರಳುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದ್ದಾರೆ.‌
ಮಗಳಿಗೆ ಏನಾದ್ರೂ ಅವಘಡ ಸಂಭವಿಸುತ್ತೆ ಎಂಬ ಭಯಗೊಂಡ ತಂದೆ ವ್ಹೀಲ್ ಚೇರ್ ನೀಡುವಂತೆ ಕೋರಿದ್ದಾರೆ. ‌ಇದು ನಮ್ಮ ಘಟಕದ್ದು. ನೀನು‌ ಹೋಗುವ ಘಟಕಕ್ಕೆ ಮಾಹಿತಿ‌ ತಿಳಿಸಿ ವ್ಹೀಲ್ ಚೇರ್ ತರುವಂತೆ ತಿಳಿಸಿ ಬಾ ಎಂದು ಸಿಬ್ಬಂದಿ ಅಲ್ಲಿದ್ದ ರೋಗಿಯ ತಂದೆಗೆ ತಾಕೀತು‌ ಮಾಡಿದ್ದಾರೆ.
ಆಗ ತಾನೇ ಹೆಗಲ‌ ಮೇಲೆ ಹೊತ್ತು ಕೊಂಡು ಹೋಗುವುದಾಗಿ ತಿಳಿಸಿ, ಮಗಳನ್ನ‌ ತನ್ನ‌ ಹೆಗಲಮೇಲೆ ಹೊತ್ತು ಆಸ್ಪತ್ರೆಯ ಸಾರ್ವಜನಿಕ ಸ್ಥಳದಲ್ಲೇ ಸಾಗಿದ್ದಾರೆ. ಅಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಜನರು ಛೀಮಾರಿ ಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
