ಶ್ರೀಕಾಂತ ಅಕ್ಕಿಬಳ್ಳಾರಿ:ಅಂತರ್ಜಲ ಹೆಚ್ಚಳಕ್ಕೆ ‘ಇಂಜೆಕ್ಷನ್ ವೆಲ್’ ಕಾಮಗಾರಿ ಕೈಗೊಂಡು ಸಕ್ಸಸ್ ಕಂಡಿರುವ ಜಿಪಂ, ಇದೀಗ ಬರ ನಿರ್ಮೂಲನೆಗೆ ಜಿಲ್ಲೆಯಲ್ಲಿ ಜಲಮೂಲಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿದೆ. ಕಳೆದೊಂದು ವಾರದಿಂದ ನಾಲಾ ಪ್ರದೇಶದಲ್ಲಿ ಪುನಶ್ಚೇತನ ಕಾರ್ಯಗಳು ಬರದಿಂದ ಸಾಗಿವೆ.ಪ್ರಾರಂಭಿಕವಾಗಿ ವೇದಾವತಿ(ಹಗರಿ)ನದಿಯ ಜಲಮೂಲಗಳ ಪುನಶ್ಚೇತನ ಪ್ರಾರಂಭಿಸಿದ್ದು, ತಾಲೂಕಿನ ಸಂಜೀವನರಾಯ ಕೋಟೆ ಗ್ರಾಪಂ ವ್ಯಾಪ್ತಿಯ ಮಿಂಚೇರಿ ಗ್ರಾಮದ ರಾಮನಕೊಳ್ಳದ ಹಳ್ಳದಿಂದ ಹಗರಿ ಹತ್ತಿರದ ಅಸುಂಡಿಯವರೆಗೆ 24ಕಿ.ಮೀ.ವರೆಗಿನ ಪುನಶ್ಚೇತನ ಕಾಮಗಾರಿ ಸದ್ದಿಲ್ಲದೇ ಪ್ರಾರಂಭವಾಗಿದೆ. ರಾಮನಹಳ್ಳ ಕೊಳ್ಳದ ಸುತ್ತಲು ಗುಡ್ಡಗಳಿರುವುದರಿಂದ ಮೇಲಿಂದ ನೀರು ನೇರವಾಗಿ ನದಿಗೆ ಹರಿದು ಹೋಗದೇ ನಿಧಾನವಾಗಿ ನಿಂತು, ಭೂಮಿಯಲ್ಲಿ ಹಿಂಗಿ ಹೋಗುವಂತೆ ಮಾಡಲಾಗುತ್ತಿದೆ.
ಇದನ್ನೂ ಓದಿ:VIDEO: ಮನೆಯಲ್ಲಿಯೇ ಇದ್ದರೆ ಸಾಕು, ಅದುವೇ ಸುರಕ್ಷತೆ.: ಶ್ರೀ ಗುರುವಾಣಿಯಲ್ಲಿ ವಿವರಿಸಿದ್ದಾರೆ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ
ನದಿಮೂಲಗಳು ಬತ್ತಿ ಹೋಗಿರುವುದಲ್ಲದೇ ಒತ್ತುವರಿಯಾಗಿರುವುದರಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ.ಜತೆಗೆ ಅಸಮೋತೋಲವಾಗಿ ಮಳೆ ಬಿಳುತ್ತಿರುವುದರಿಂದ ರೈತಾಪಿ ವರ್ಗ ಪಡಬಾರದ ಯಮಯಾತನೆ ಪಡುತ್ತಿರುವುದನ್ನು ಗಮನಿಸಿ ನದಿಗಳ ಪುನಶ್ಚೇತನ ಕಾರ್ಯಕ್ಕೆ ಜಿಪಂ ಮುಂದಡಿ ಹಿಟ್ಟಿದೆ.ಒಟ್ಟು 19.62 ಕೋಟಿ ರೂ.ಮೊತ್ತದ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕೈಗೊಳ್ಳುತ್ತಿರುವ ವಿನೂತನ ಕಾರ್ಯಕ್ರಮವಾಗಿದೆ.ಈ ಯೋಜನೆಯ ಮೂಲಕ 4.66ಲಕ್ಷ ಮಾನದ ದಿನಗಳು ಸೃಜನೆಯಾಗಲಿವೆ. ಕರೊನಾ ಹಿನ್ನಲೆ ಗ್ರಾಮೀಣ ಜನಜೀವನ ಬಹಳ ಸಂಕಷ್ಟದಲ್ಲಿದೆ.ಪ್ರಸ್ತುತ ಕಾಮಗಾರಿಯಿಂದ 9ಗ್ರಾಮಗಳ ಸಾವಿರಾರು ಕಾರ್ಮಿಕರು ಉದ್ಯೋಗ ಪಡೆದಿದ್ದಾರೆ.ಮುಂಬರುವ 4ತಿಂಗಳೊಳಗೆ ಸಂಪುರ್ಣ ಕಾಮಗಾರಿ ಮುಗಿಸುವ ಇರಾದೆ ಹೊಂದಲಾಗಿದೆ.
ಇದನ್ನೂ ಓದಿ:ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಇದರಿಂದ ಶಂಕರಬಂಡೆ, ಅಮರಾಪೂರ, ಸಂಜೀರಾಯನ ಕೋಟೆ ಗ್ರಾಪಂಗಳ 9ಗ್ರಾಮಗಳು ಬರದಿಂದ ಮುಕ್ತಿ ಪಡೆಯಲಿವೆ.ಬಳ್ಳಾರಿ ನಗರ ವ್ಯಾಪ್ತಿಯ ಇಂಡ್ರಷ್ಟಿಯಲ್ ಏರಿಯಾದ ಬೊರವೆಲ್ಗಳು ರಿಚಾರ್ಜ್ ಆಗಲಿವೆ.ಇದುವರೆಗೂ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದ ಗ್ರಾಮಗಳ ನೀರಿನ ಸಮಸ್ಯೆ ನೀಗಲಿದೆ.ಪುನಶ್ಚೇತನ ಕಾಮಗಾರಿಯಲ್ಲಿ 20ಮಲ್ಟಿ ಅರ್ಚ ಚೆಕ್ ಡ್ಯಾಂ, 50 ರಿಚಾರ್ಜ್‌ವೆಲ್, 24 ಕಿ.ಮೀ ವಿಸ್ತಿರ್ಣದಲ್ಲಿ ಹೂಳೆತ್ತುವುದು ಮತ್ತು ಹಳ್ಳದ ಎರಡು ಕಡೆ ಒಡ್ಡು ಬಲಪಡಿಸಲಾಗುತ್ತಿದೆ.ಅಲ್ಲದೆ 25ಬೋಲ್ಡರ್ ಚೆಕ್, 25ಗ್ಯಾಬಿಯನ್ ಚೆಕ್ ಡ್ಯಾಮ್, 3ಸಣ್ಣ ಕೆರೆ, ಗೋ ಕಟ್ಟೆ ನಿರ್ಮಾಣ, 50ಹೆಕ್ಟೇರ್ ಮಿಂಚೆರಿ ಗುಡ್ದಲ್ಲಿ ಕಂಟುರ್ ಟ್ರೆಂಚ್ ನಿರ್ಮಾಣ ಮಾಡಲಾಗುತ್ತಿದೆ.ಈ ಕಾಮಗಾರಿ ಮುಗಿದ ನಂತರ ಉಳಿದ ನದಿಮೂಲಗಳ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಜಿಪಂ ಮುಂದಾಗಲಿದೆ.
ಬರ ಮುಕ್ತ ಜಿಲ್ಲೆಯ ಸಂಕಲ್ಪವನ್ನಿಟ್ಟುಕೊಂಟು ಅಂತರ್ಜಲ ಹೆಚ್ಚಳಕ್ಕೆ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ಅದರಲ್ಲಿ ಮೊದಲನೆಯದಾಗಿ ನದಿಮೂಲಗಳ ಪುನಶ್ಚೇತನ ಕಾರ್ಯಕ್ರಮ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.ಕೆ.ನಿತೀಶಸಿಇಓ, ಜಿಪಂ ಬಳ್ಳಾರಿ
ಬೆಳಗಾವಿ, ಚಿಕ್ಕಮಗಳೂರು ಪ್ರೇರಣೆ:ಬೆಳಗಾವಿಯ ಜಿಪಂ ಕೂಡ ಇದೇ ಮಾದರಿಯಲ್ಲಿ ಅಲ್ಲಿಯ ಮಾರ್ಕಂಡಯ್ಯ ನದಿ ಪುನಶ್ಚೇತನಗೊಳಿಸಿ ಹತ್ತಾರು ಗ್ರಾಮಗಳಿಗೆ ಆಸರೆಯಾಗುವಂತೆ ಮಾಡಿದೆ.ಇದಲ್ಲದೇ ಚಿಕ್ಕಮಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನದಿಮೂಲ ಪುನಶ್ಚೇತನಗೊಳಿಸಿ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ.ಇವೆರಡು ಕಾಮಗಾರಿಗಳಿಂದ ಜನರಿಗಾಗಿರುವ ಅನುಕೂಲದ ಮಾಹಿತಿ ಪಡೆದಿರುವ ಬಳ್ಳಾರಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ನಿತೀಶ ಅವರು, ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿಯೂ ಅದೇ ಮಾದರಿಯಲ್ಲಿ ನದಿಗಳ ಪುನಶ್ಚೇತನ ಕಾರ್ಯಕ್ಕೆ ಮುಂದಾಗಿದ್ದಾರೆ.ಇದರಿಂದ ಬರ ನಿರ್ಮೂಲನೆಯಾಗುವುದು ಒಂದೇಡೆಯಾದರೇ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ಉದ್ಯೋಗ ದೊರೆಯುತ್ತಿದೆ.
ಇದುವರೆಗೂ ಸಂಕಷ್ಟದಲ್ಲಿದ್ದ ನಮ್ಮೂರಿಗೆ ಕೊನೆಗೂ ಜಿಪಂ ಆಸರೆಯಾಗಿದೆ.ವೇದಾವತಿ(ಹಗರಿ)ನದಿಮೂಲಗಳನ್ನು ಪುನಶ್ಚೇತನಗೊಳಿಸುತ್ತಿರುವುದರಿಂದ ಬತ್ತಿರುವ ಬೊರವೆಲ್‌ಗಳು ರಿಚಾರ್ಜ್ ಆಗಲಿವೆ.ಇದಲ್ಲದೆ ನರೇಗಾದಡಿ ಕೂಲಿ ಕೆಲಸವು ಸೀಗುತ್ತಿರುವುದರಿಂದ ಜೀವನ ನಡೆಸಲು ಸಹಕಾರಿಯಾಗಿದೆ.ರಾಮಣ್ಣಮಿಂಚೇರಿ ಗ್ರಾಮಸ್ಥ
20 ಸಾವಿರ ಕೋಟಿ ರೂಪಾಯಿಯ ಮತ್ಸ್ಯ ಸಂಪದ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಅಂಕಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
