ಬೆಂಗಳೂರು: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ ) ವಿಶ್ವ ಪರಂಪರೆ ಸಮಿತಿಯ ವಿಸ್ತೃತ 45ನೇ ಸಭೆ ರಿಯಾದ್‌ನಲ್ಲಿ (ಸೌದಿ ಅರೇಬಿಯಾ) ಸೆಪ್ಟೆಂಬರ್ 10 ಆರಂಭವಾಗಿದ್ದು, 25ರವರೆಗೆ ನಡೆಯುತ್ತಿದೆ.ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಹೊಸ ತಾಣಗಳನ್ನು ಪರಿಗಣಿಸುವ ಸಂಬಂಧ ಸೆ.16ರಿಂದ ನಾಮನಿರ್ದೇಶನ, ಚರ್ಚಾ ಪ್ರಕ್ರಿಯೆ ಆರಂಭವಾಗಿದೆ. ಮಾಹಿತಿಗಳ ಪ್ರಕಾರ ಭಾನುವಾರ ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ವಿಶ್ವಪಾರಂಪರಿಕ ತಾಣವೆಂದು ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆದಿವೆ.ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ತಮ್ಮ ಜೀವನದ ಬಹುಭಾಗವನ್ನು ಕಳೆದ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಶಾಂತಿನಿಕೇತನವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.ಅದೇ ರೀತಿ ಸೆ.18ರಂದು ಭಾರತದ ಹೊಯ್ಸಳರ ಪ್ರಮುಖ ಸ್ಥಳಗಳ ಕುರಿತು ಚರ್ಚೆಯಾಗಲಿದೆ. ಯುನೆಸ್ಕೋ ಸಭೆಯ ಅಜೆಂಡಾದಲ್ಲಿ ಹೊಯ್ಸಳರ ಪ್ರಮುಖ ಸ್ಥಳಗಳ ಕುರಿತು ವಿಚಾರ ಮಂಡನೆಯಾಗಲಿದೆ. ಪ್ರಮುಖವಾಗಿ ಹಾಸನ ಜಿಲ್ಲೆ ಬೇಲೂರು ಹಾಗೂ ಹಳೆಬೀಡಿನ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದೆ.ಒಟ್ಟಾರೆ ಈ ಬಾರಿಯ ಸಭೆಗೆ 50 ಸ್ಥಳ ಅಥವಾ ಪ್ರದೇಶ, ಕಟ್ಟಡಗಳು ನಾಮನಿರ್ದೇಶನಗೊಂಡಿವೆ. ಇದರಲ್ಲಿ 34 ಸಾಂಸ್ಕೃತಿಕ ಸ್ಥಳಗಳು, 9 ಪ್ರಾಕೃತಿಕ ಹಾಗೂ 2 ಸಮಗ್ರ ಮತ್ತು 5 ಗಡಿಗಳ ಮಾರ್ಪಾಡು ಸಂಬಂಧ ಪ್ರಸ್ತಾವನೆಗಳಿವೆ.
2020ರಲ್ಲಿ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ವಿಶ್ವಪರಾಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮ ನಿರ್ದೇಶನಕ್ಕೆ ಕೇಂದ್ರ ಸರ್ಕಾರ ಶಿಫಾರಸು ಮಾಡಿತ್ತು. ಈಗಾಗಲೇ ತಾತ್ಕಾಲಿಕ ಪಟ್ಟಿಯಲ್ಲಿ ಇವು ಸೇರಿವೆ.ಬೇಲೂರು, ಹಳೇಬೀಡಿನ ದೇವಾಲಯದ ವಿನ್ಯಾಸ, ವಾಸ್ತುಶಿಲ್ಪಗಳು ಹಾಗೂ ಮಾನವ ಮೌಲ್ಯಗಳನ್ನು ಗಮನಿಸಿ ಇವುಗಳು ಪಟ್ಟಿಗೆ ಸೇರಬೇಕು ಎಂದು ಪ್ರಸ್ತಾವನೆಯಲ್ಲಿ ಬೇಡಿಕೆ ಇಡಲಾಗಿತ್ತು.ನಾಮ ನಿರ್ದೇಶಕ ವಾದ ಸ್ಥಳಗಳಲ್ಲಿ ಸ್ಥಳ ನಿರ್ವಹಣೆ, ಯೋಜನೆಯ ವಿನ್ಯಾಸವನ್ನು ಯುನೆಸ್ಕೋಗೆ ಕಳಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವ್ಯವಸ್ಥಿತವಾದ ಯೋಜನೆಗಳನ್ನು ಸಿದ್ಧಪಡಿಸಿ ಸಲ್ಲಿಸಿದ್ದಾರೆ.ಯುನೆಸ್ಕೋ ಮಾರ್ಗಸೂಚಿಯಂತೆ ದೇವಾಲಯದ ಸುತ್ತಮುತ್ತ ನೂರಾರು ವರ್ಷಗಳಿಂದ ಇರುವ ಮನೆಗಳು, ವಾಸ್ತುಶಿಲ್ಪಗಳು ಮುಂದಿನ ಪೀಳಿಗೆಗೆ ಅಲ್ಲಿನ ಸಂಸ್ಕೃತಿಯನ್ನು ವಿವರಿಸಬೇಕಾಗುತ್ತದೆ. ಬರ್ ವಲಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಈ ಕುರಿತು ಸೋಮವಾರ ಸೌದಿ ಅರೇಬಿಯಾದಲ್ಲಿ ನಡೆಯುವ ಸಭೆಯಲ್ಲಿ ಚರ್ಚೆಯಾಗಲಿದೆ.
2022ರ ಸೆಪ್ಟೆಂಬರ್‌ನಲ್ಲಿ ಯುನೆಸ್ಕೋ ತಜ್ಞರ ಸಮಿತಿ ಇಲ್ಲಿಗಾಗಮಿಸಿ ಪರಿಶೀಲನೆ ನಡೆಸಿತ್ತು. ಮಲೇಷಿಯಾದ ಇತಿಹಾಸಜ್ಞ ಟಿಯಾಂಗ್ ಕಿಯಾನ್ ಬೂನ್ ನೇತೃತ್ವದ ತಂಡ ದೇವಾಲಯ ಆವರಣ ಹಾಗೂ ದೇವಸ್ಥಾನದ ಸುತ್ತಲಿನ 300 ಮೀಟರ್ ವ್ಯಾಪ್ತಿಯ ಪ್ರದೇಶ ವೀಕ್ಷಣೆ ಮಾಡಿತ್ತು. ಬಳಿಕ ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿ ಪರಿಶೀಲನೆ ಮಾಡಿ ವರದಿ ಸಲ್ಲಿಸಿತ್ತು.900 ವರ್ಷಗಳ ಹಿಂದೆ ನಾಡನ್ನು ಆಳಿದ್ದ ಹೊಯ್ಸಳರು ಅನೇಕ ದೇವಾಲಯ ನಿರ್ಮಿಸಿದ್ದರು. ಅದರಲ್ಲಿ ಬೇಲೂರು, ಹಳೆಬೀಡು ಪ್ರಮುಖವಾದದ್ದು. 2015ರಿಂದಲೂ ಈ ಸ್ಥಳಗಳು ತಾತ್ಕಾಲಿಕ ಪಟ್ಟಿಯಲ್ಲೇ ಇದ್ದವು.ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಮುಖ್ಯಸ್ಥರಾಗಿದ್ದ ಇನ್ಫೋಸಿಸ್‌ನ ಸುಧಾಮೂರ್ತಿಯವರ ಪ್ರಯತ್ನ ಈ ಬೆಳವಣಿಗೆಯಲ್ಲಿ ಸಾಕಷ್ಟಿದೆ. ಯುನೆಸ್ಕೋ ತಂಡ ಭೇಟಿ ಕೊಟ್ಟ ಸಂದರ್ಭದಲ್ಲಿ ಸುಧಾಮೂರ್ತಿಯವರೇ ಖುದ್ದು ಹಾಜರಿದ್ದು, ದೇಗುಲದ ವಿಶೇಷತೆ ವಿವರಿಸಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 5 =
Remember me
