ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸುವ ಕುರಿತು ಟ್ವಿಟರ್​ನಲ್ಲಿ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಿಸಿ, ತನಿಖೆ ಆರಂಭಿಸಿರುವ ಬೆಂಗಳೂರು ಪೊಲೀಸರು ಟ್ವಿಟರ್​ ಬಳಕೆದಾರನ ಪತ್ತೆಗೆ ಬಲೆ ಬೀಸಿದ್ದಾರೆ.
ಫ್ಯೂಚರ್​ ಎಫ್​ಟಿಸುಫ್ಜಾನ್​ (@futureftsufjan) ಹೆಸರಿನ ಟ್ವಿಟರ್​ ಖಾತೆಯಲ್ಲಿ ಡಿಸೆಂಬರ್​ 10ರಂದು ರಾತ್ರಿ 10.15ಕ್ಕೆ ಅಪರಿಚಿತ ವ್ಯಕ್ತಿ ಟ್ವೀಟ್​ ಮಾಡಿದ್ದಾನೆ. ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್​ ಇಡುತ್ತೇನೆ. ಹೀಗಾಗಿ ಅವರು ನಗರಕ್ಕೆ ಹತ್ತಿರದಲ್ಲಿ ಮತ್ತೊಂದು ನಿಲ್ದಾಣವನ್ನು ಮರು ನಿರ್ಮಿಸಬೇಕಾಗುತ್ತದೆ ಎಂದು ಟ್ವೀಟ್​ ಮಾಡಿದ್ದಾನೆ.
i will bomb the blr airport j so they can rebuild one closer to the city
— V (@futureftsufjan)December 10, 2022

ಇನ್ನು ಅಪರಿಚಿತ ಮಾಡಿರುವ ಟ್ವೀಟ್​ ಅನ್ನು ಕೇವಲ ಇಬ್ಬರು ರೀಟ್ವೀಟ್ ಮಾಡಿದ್ದು, 6 ಮಂದಿ ಲೈಕ್ಸ್​ ಮಾಡಿದ್ದಾರೆ. 500ಕ್ಕೂ ಹೆಚ್ಚು ಫಾಲೋವರ್ಸ್​​ ಹೊಂದಿರುವ ಟ್ವಿಟರ್​ ಬಳಕೆದಾರ 300ಕ್ಕೂ ಹೆಚ್ಚು ಮಂದಿಯನ್ನು ಫಾಲೋ ಮಾಡುತ್ತಿದ್ದಾನೆ. 10ನೇ ತಾರೀಖಿನಲ್ಲಿ ಟ್ವೀಟ್​ ಮಾಡಿದ್ದು, ಹೆಚ್ಚು ಗಮನ ಸೆಳೆದಿರಲಿಲ್ಲ.
ಇದೀಗ ಟ್ವೀಟ್​ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರು ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಎಫ್​ಐಆರ್​ ಸಹ ದಾಖಲಿಸಲಾಗಿದೆ. ಎಫ್​ಐಆರ್​ ದಾಖಲಿಸುವುದಕ್ಕೂ ಮುನ್ನ ಎನ್​ಸಿಆರ್​ ದಾಖಲಿಸಿದ್ದರು. ಆದರೆ, ದೇವನಹಳ್ಳಿ ಸಿವಿಲ್​ ನ್ಯಾಯಾಧೀಶರು ಆದೇಶಿಸಿದ ಬಳಿಕ ಎಫ್​ಐಆರ್​ ದಾಖಲಾಗಿದ್ದು ತನಿಖೆ ಆರಂಭವಾಗಿದೆ.
ಇದೀಗ ಆರೋಪಿ ವಿರುದ್ಧ ಸಾರ್ವಜನಿಕ ಕಿಡಿಗೇಡಿತನ ಮತ್ತು ಕ್ರಿಮಿನಲ್ ಬೆದರಿಕೆಯೊಡ್ಡಿದ ಹೇಳಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಕುರ್​ಕುರೆ ಪ್ಯಾಕೆಟ್​ನಲ್ಲಿ 500 ರೂ. ಗರಿ ಗರಿ ನೋಟು! ಕುರ್​ಕುರೆ ಖರೀದಿಗೆ ಮುಗಿಬಿದ್ದ ರಾಯಚೂರು ಜನ

ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!

ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು! ಇಲ್ಲಿದೆ 5 ಸರಳ ಟಿಪ್ಸ್​:

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 10 =
Remember me
