ಬೆಂಗಳೂರು:ರಾಜ್ಯದಲ್ಲಿ ಆಂಬ್ಯಲೆನ್ಸ್​ ಸೇವೆಯಲ್ಲಿ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದೆ. ಈ ಹಿಂದೆ ಸರ್ವರ್​ ಡೌನ್​ ಆಗಿ ಆಂಬ್ಯುಲೆನ್ಸ್​ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ವೇತನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ನೌಕರರು ಆಕ್ರೋಶಗೊಂಡಿದ್ದು, ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣದ ಆತಂಕ ಎದುರಾಗಿದೆ.
ರಾಜ್ಯದಲ್ಲಿ ಆಂಬ್ಯುಲೆನ್ಸ್​ ಸೇವೆ ಒದಗಿಸುವ ಜಿವಿಕೆ ಸಂಸ್ಥೆ ಎರಡು ತಿಂಗಳಿಂದ ವೇತನವನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ನೌಕರರ ಸಂಘದ ಆಕ್ರೋಶದ ಕಟ್ಟೆ ಹೊಡೆದಿದ್ದು, ವೇತನ ಪಾವತಿಸುವಂತೆ ಗಡುವು ನೀಡಿದ್ದಾರೆ. ನಾಳೆ ಸಂಜೆ ಒಳಗೆ ಸಂಬಳ ಆಗಿದ್ದರೆ, ಆಂಬ್ಯುಲೆನ್ಸ್​ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿರುವುದರ ವಿರುದ್ಧ ಮುಷ್ಕರ ಕೈಗೊಳ್ಳುವುದಾಗಿ ಈ ಹಿಂದೆಯೇ ಮಾಧ್ಯಮಗಳಿಗೆ ತಿಳಿಸಿದ್ದೆವು. ಈ ಬಗ್ಗೆ ಆರೋಗ್ಯ ಆಯುಕ್ತರಿಗೆ ದೂರು ನೀಡಿದ್ದೆವು. ಗುರುವಾರದ ಒಳಗೆ ಸಂಬಳ ನೀಡದಿದ್ದರೆ, ಜಿಬಿಕೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಆಯುಕ್ತರು ಸಹ ಭರವಸೆ ನೀಡಿದ್ದರು. ಅಲ್ಲದೆ, ಸರ್ಕಾರವೇ ವೇತನ ಕೊಡುತ್ತದೆ ಎಂಬ ಮಾಹಿತಿ ಸಹ ತಿಳಿಸಿದರು. ಜಿವಿಕೆ ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ಕೂಡ ವೇತನ ಕೊಡುವುದಾಗಿ ಭರವಸೆ ನೀಡಿದರು ಎಂದು 108 ಆಂಬ್ಯುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಹೇಳಿದ್ದಾರೆ.
ಈ ಬಾರಿ ಇನ್ನೊಮ್ಮೆ ಎಚ್ಚರಿಕೆ ಕೊಡುತ್ತಿದ್ದೇವೆ. ಈ ಬಾರಿ ನಾವು ಯಾವುದೇ ಆಮಿಷ, ಆಶ್ವಾಸನೆಗಳಿಗೆ ಒಳಗಾಗುವುದಿಲ್ಲ. ನಮಗೆ ಬೇಕಾಗಿರುವುದು ವೇತನವಷ್ಟೇ. ಗುರವಾರದ ಒಳಗೆ ಹಾಕದಿದ್ದರೆ, ಇಡೀ ರಾಜ್ಯಾದ್ಯಂತ ಆಂಬ್ಯಲೆನ್ಸ್​ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಏನಾದರೂ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾದರೆ, ಅದಕ್ಕೆ ಜಿವಿಕೆ ಸಂಸ್ಥೆಯೇ ನೇರ ಹೊಣೆ. ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸಂಸ್ಥೆಯ ಬಳಿ ಹಣವೂ ಸಹ ಇದೆ. ಸರ್ಕಾರವೂ ಸಹ ಸಂಸ್ಥೆಗೆ ನಿರ್ದೇಶನ ನೀಡಿದೆ. ಇಂದು ಸಂಜೆಯೊಳಗೆ ಜಿವಿಕೆ ಸಂಸ್ತೆ ಸಂಬಳ ಹಾಕುವುದಾಗಿ ಹೇಳಿದೆ. ಹೇಳಿದಂತೆ ಮಾಡಿದರೆ ನಮಗೂ ಸಂತೋಷ. ಒಂದು ವೇಳೆ ಸಂಬಳ ಹಾಕದಿದ್ದರೆ ನಾಳೆ ಸಂಜೆಯವರೆಗೂ ಮಾತ್ರ ಗಡುವು ನೀಡುತ್ತೇವೆ. ಆಗಲೂ ಸಂಬಳ ಹಾಕದಿದ್ದರೆ, ಮುಂದಾಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಪರಮಶಿವಯ್ಯ ಎಚ್ಚರಿಕೆ ನೀಡಿದ್ದಾರೆ.
70 ವರ್ಷದ ವೃದ್ಧನ ಪ್ರೀತಿಯ ಬಲೆಯಲ್ಲಿ ಬಿದ್ದ 19ರ ಯುವತಿ! ಇಬ್ಬರ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ

ಬೆಂಗ್ಳೂರಲ್ಲಿ ವಿಕೃತ ಮನಸ್ಥಿತಿಯ ವೈದ್ಯ ಅರೆಸ್ಟ್​! ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯರ ಖಾಸಗಿ ಅಂಗಗಳ ವಿಡಿಯೋ ಚಿತ್ರೀಕರಿಸುತ್ತಿದ್ದ…

ಮಗಳ ಬೆಡ್​ರೂಮ್​ನಿಂದ ಬರ್ತಿದ್ದ ಹೊಗೆಯನ್ನು ನೋಡಿ ಬಾಗಿಲು ತೆರೆದ ತಂದೆಗೆ ಕಾದಿತ್ತು ಭಾರಿ ಆಘಾತ!​​

Sign in to your account
Please enter an answer in digits:thirteen − 8 =
Remember me
