ಬೆಂಗಳೂರು:ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ​ ತಹಸೀಲ್ದಾರ್ ಕಚೇರಿಯ ಕುರ್ಚಿಯಲ್ಲಿ ಓರ್ವ ಮಹಿಳೆ ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಚೇರಿ ದುರುಪಯೋಗ ಆರೋಪ ಕೇಳಿಬಂದಿದೆ.
ಕುರ್ಚಿಯಲ್ಲಿ ಕುಳಿತು ಪೋನ್​​ನಲ್ಲಿ ಮಾತನಾಡುತ್ತಿರುವ ಮಹಿಳೆಯ ಫೋಟೋ ವೈರಲ್​ ಆಗಿದೆ. ಆನೇಕಲ್ ತಹಸೀಲ್ದಾರ್ ಶಿವಪ್ಪ ಲಮಾಣಿ ಅವರು ಕಾರ್ಯನಿರ್ವಹಿಸುತ್ತಿರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸ್ವತಃ ತಹಸೀಲ್ದಾರ್ ಅವರೇ ತಮ್ಮ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಪೋಟೋ ಹಾಕಿಕೊಂಡು ಮಹಿಳೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಈ ಘಟನೆಯ ಬೆನ್ನಲ್ಲೇ ಕೆಆರ್​ಎಸ್​ ಪಕ್ಷದಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ತಹಸೀಲ್ದಾರ್ ಕಚೇರಿ ದುರ್ಬಳಕೆ ಮಾಡಿಕೊಂಡಿರುವ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಪೋಟೋವನ್ನು ಸ್ಟೇಟಸ್​ನಲ್ಲಿ ಹಾಕಿಕೊಂಡ ತಹಸೀಲ್ದಾರ್ ವಿರುದ್ಧವು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.(ದಿಗ್ವಿಜಯ ನ್ಯೂಸ್​)
ಮುಜರಾಯಿ ದೇವಸ್ಥಾನಗಳಲ್ಲಿನ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹಾರಕ್ಕೆ “ಸ್ವಚ್ಛ ಮಂದಿರ ಅಭಿಯಾನ”: ಫೆ.10ರಂದು ಉದ್ಘಾಟನೆ

ವಿಶ್ವ ಕ್ಯಾನ್ಸರ್​​ ದಿನ 2023: ಈ 5 ಆಹಾರಗಳನ್ನು ನೀವು ಪ್ರತಿನಿತ್ಯ ಸೇವಿಸುತ್ತಿದ್ರೆ ಇಂದೇ ನಿಲ್ಲಿಸಿ….

ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 2 =
Remember me
