ಬೆಂಗಳೂರು:ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ತಾನು ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಎಟಿಎಂನಲ್ಲೇ ಹಣ ದೋಚಿರುವ ಘಟನೆ ನಗರದ ವಿಲ್ಸನ್ ಗಾರ್ಡನ್​ನಲ್ಲಿ ನಡೆದಿದ್ದು, ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ದಿಪೋಂಕರ್ ನೋಮೋಸುದರ್ ಬಂಧಿತ ಆರೋಪಿ. ಕದ್ದ ಹಣದಲ್ಲಿ ಮೊದಲು ಒಂದು ಹೋಟೆಲ್ ತೆರೆಯಲು ಪ್ಲಾನ್ ಮಾಡಿದ್ದ. ಬಳಿಕ ಒಂದು ವರ್ಷ ದುಡಿದು ನಂತರ ಪ್ರೇಯಸಿಯನ್ನು ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಆದರೆ, ಖದೀಮನ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಎಟಿಎಂಗೆ ಹಣ ತುಂಬಲು ಬರ್ತಿದ್ದವರು ಜೊತೆ ಸಲುಗೆ ಇಂದ ಇರ್ತಿದ್ದ ಅರೋಪಿ, ಹಣ ಹಾಕುವವರು ಬಳಸುತಿದ್ದ ಐಡಿ ಮತ್ತು ಪಾಸ್ವರ್ಡ್ ಅನ್ನು ನೋಡಿಕೊಂಡಿದ್ದ. ಅದೇ ಐಡಿ ಮತ್ತು ಪಾಸ್ವರ್ಡ್ ಮೂಲಕ ವಿಲ್ಸನ್ ಗಾರ್ಡನ್​ನಲ್ಲಿ ತಾನು ಕೆಲಸ ಮಾಡ್ತಿದ್ದ ಎಟಿಎಂ ದೋಚಿದ್ದ. ಸುಮಾರು ಹತ್ತೊಂಬತ್ತು ಲಕ್ಷಕ್ಕೂ ಹೆಚ್ಚಿನ ಹಣ ದೋಚಿದ್ದ.
ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿ ಹಣವನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಸೂಲಿ ಮಾಡಿದ್ದಾರೆ. ಅರೋಪಿ ಬಳಿ ಹದಿನಾಲ್ಕು ಲಕ್ಷದ ಇಪ್ಪತ್ತು ಸಾವಿರದ ಐದುನೂರು ಹಣ ವಶಪಡಿಸಿಕೊಳ್ಳಲಾಗಿದೆ. ಉಳಿದ ಐದು ಲಕ್ಷ ಹಣವನ್ನು ಖರ್ಚು ಮಾಡಿದ್ದಾನೆ. ಮಾಡಿದ್ದ ಸಾಲ ಹಾಗೂ ಹೋಟೆಲ್ ಮಾಡಲಿಕ್ಕೆ ಅರೋಪಿ ಹಣ ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

PHOTOS| ಸಲಿಂಗಕಾಮ ಅಪರಾಧವಲ್ಲ ಎಂದಿದ್ದ ಸಲಿಂಗ ಜೋಡಿಯ ಎಂಗೇಜ್​ಮೆಂಟ್ ಫೋಟೋಗಳು ವೈರಲ್​!

ಅಂಧರ ಟಿ20 ವಿಶ್ವಕಪ್​; ಕೊಪ್ಪಳದ ಯುವಕನಿಗೆ ತಂಡದಲ್ಲಿ ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + five =
Remember me
