ಬೆಂಗಳೂರು:ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ನೆರೆ ರಾಜ್ಯಕ್ಕೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಂದ್​​ನಲ್ಲಿ ಕಾರ್ಯನಿರತರಾಗಿರುವ ಪೊಲೀಸರಿಗೆ ಅಸಮರ್ಪಕ ಆಹಾರವನ್ನು ಪೂರೈಕೆ ಮಾಡಿರುವುದು ಬಯಲಾಗಿದೆ.
ಇದನ್ನೂ ಓದಿ:SUCCESS STORIES: ಬೇರೆಯವರನ್ನು ಅನುಕರಿಸುವ ತಪ್ಪು ಮಾಡಬಾರದು; ಡಾ.ನೂರುಲ್ ಹುದಾ
ಬೆಂಗಳೂರು ಬಂದ್‌ ಹಿನ್ನೆಲೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಬೆಳಗಿನ ತಿಂಡಿ ಪ್ಯಾಕೆಟ್‌ನಲ್ಲಿ ಇಲಿಯೊಂದು ಪತ್ತೆಯಾಗಿದೆ.ಯಶವಂತಪುರ ಸಂಚಾರಿ ಪೊಲೀಸರಿಗೆ ನೀಡಿದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಉಪಹಾರವೆಂದು ರೈಸ್ ಬಾತ್ ನೀಡಲಾಗಿದೆ. ಈ ವೇಳೆ ಪೊಲೀಸ್ ಆ ಪೊಟ್ಟಣವನ್ನು ಓಪನ್ ಮಾಡಿದಾಗ ಇಲಿ ಕಂಡು ಗಾಬರಿಯಾಗಿದ್ದಾರೆ. ಪೊಲೀಸರಿಗೆ ‘ಇಲಿ’ ಇರುವ ಉಪಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:ನಿತೀಶ್ ಕುಮಾರ್​​​​ಗೆ ಸ್ವಾಗತ…ಎನ್​​​​ಡಿಎ ಸೇರಲು ಕೇಂದ್ರ ಸಚಿವರ ಮುಕ್ತ ಆಫರ್
ಯಶವಂತಪುರದಲ್ಲಿರುವ ಅಶೋಕ್ ಟಿಫಿನ್ ಸೆಂಟರ್‌ನಲ್ಲಿ ಒಟ್ಟು 180 ಜನಕ್ಕೆ ತಿಂಡಿಯನ್ನು ಸಿದ್ದಪಡಿಸಿಲಾಗಿತ್ತು. ಬೆಳಗ್ಗೆ 7-30ಕ್ಕೆ ತಿಂಡಿಯನ್ನು ವಿತರಿಸಲಾಗಿದೆ. ಈ ವೇಳೆ ಸಿಬ್ಬಂದಿಯೊಬ್ಬರು ಪ್ಯಾಕೆಟ್‌ ತೆರೆದಾಗ ಇಲಿ ಪತ್ತೆಯಾಗಿದೆ. ಕೂಡಲೇ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ತಿಂಡಿ ತಿನ್ನದಂತೆ ಇತರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೀಗಾಗಿ ಯಾವ ಸಿಬ್ಬಂದಿ ತಿಂಡಿ ಸೇವಿಸಿಲ್ಲ. ಇದರಿಂದ ಆಗಬಹುದಾದ ಅನುಹಾತವೊಂದು ತಪ್ಪಿದೆ ಎನ್ನಲಾಗಿದೆ.
ಬೆಳಿಗ್ಗೆ ಮಾಡಿದ ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತೀರಾ? ಈ ಬಗ್ಗೆ ಎಚ್ಚರದಿಂದಿರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
