ಮೈಸೂರು:ಬೆಂಗಳೂರು ಮೂಲದ ಟಿಕ್​ಟಾಕ್​ ಸ್ಟಾರ್​ ನವೀನ್​ ಮೈಸೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇದೀಗ ಈ ಪ್ರಕರಣವನ್ನು ಭೇದಿಸಿರುವ ಮೈಸೂರಿನ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ತಿಂಗಳು 27 ರಂದು ನವೀನ್​, ಇಬ್ಬರು ಯುವತಿಯರ ಜತೆ ಮೈಸೂರಿಗೆ ಆಗಮಿಸಿ, ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ಆತನನ್ನು ಅಪಹರಣ ಮಾಡಲಾಗಿತ್ತು. ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ನವೀನ್​ನನ್ನು ರಾತ್ರಿ 9.45ರ ಸುಮಾರಿಗೆ ಕಿಡ್ನಾಪ್​ ಮಾಡಿತ್ತು.
ಇದಾದ ಬಳಿಕ ನವೀನ್​ ಮೃತದೇಹ ನಂಜನಗೂಡಿನ ಗೋಳೂರಿನ‌ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಗುರುತು ಪತ್ತೆಯಾಗಿದ್ದು, ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊದಲ ವಿಮಾನ: ಮಾಜಿ ಸಿಎಂ ಬಿಎಸ್​ವೈ ಜತೆ ಯಾರೆಲ್ಲ ಪ್ರಯಾಣಿಸಿದ್ರು?
ಬೆಂಗಳೂರಿನ ಕಾರ್ಪೋರೆಟರ್ ಅಣ್ಣನ ಮಗನ ಕೊಲೆಗೆ ಪ್ರತೀಕಾರವಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್​ ಆರೋಪಿಯಾಗಿದ್ದ. ಅಲ್ಲದೆ, ಜೈಲು ಸೇರಿದ್ದ ನವೀನ್​ ಕೆಲದಿನಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಇದೀಗ ಕೊಲೆಯಾಗಿದ್ದು, ಇದೇ ಕಾರಣಕ್ಕೆ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಟಿಕ್‌ ಟಾಕ್‌ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ. ಸದ್ಯ ನಂಜನಗೂಡು ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
IRS ಅಧಿಕಾರಿಯಿಂದ ದುಬಾರಿ ಗಿಫ್ಟ್​ ಪಡೆದ ನಟಿ ನವ್ಯಾಗೆ ಇಡಿ ಶಾಕ್​! 10 ಬಾರಿ ಭೇಟಿ, ಇಬ್ಬರ ಸಂಬಂಧದ ಬಗ್ಗೆ ಶಂಕೆ

ವಯಸ್ಸು 48 ಆದ್ರೂ ನೀವಿನ್ನೂ ಮದ್ವೆ ಆಗಿಲ್ಲ ಏಕೆ? ನಟಿ ನಗ್ಮಾ ಕೊಟ್ಟ ಉತ್ತರ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
