ಬೆಂಗಳೂರು:ಪತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಕ್ಕೆ ಯುವಕನೊಬ್ಬನ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಗೆ ಕೊನೆಗೆ ತಮ್ಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಅಂತಾ ಬಾಯ್​ಫ್ರೆಂಡ್​ ಜತೆಗೂಡಿ ಆತನನ್ನು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಕೇಶ್ ತೊಮಂಗ್ ಕೊಲೆಯಾದವ. ಈತ ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿದ್ದ. ಅಲ್ಲದೆ, ವಿಪರೀತ ಮದ್ಯವ್ಯಸನಿಯಾಗಿದ್ದ. ಪತ್ನಿ ದೇವಿ ತೊಮಾಂಗ್​, ಪತಿ ರಾಕೇಶ್​ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆಗಾಗ ಊಟ ತಂದು ಕೊಡುತ್ತಿದ್ದಳು. ಈ ವೇಳೆ ಆಕೆಗೆ ಜೈನುಲ್ ಅಲಿ ಅಲಿಯಾಸ್ ಬಾಬು ಅಲಿ ಎಂಬಾತನ ಪರಿಚಯವಾಗಿತ್ತು.
ಆರಂಭದಲ್ಲಿದ್ದ ಪರಿಚಯ ನಂತರದ ದಿನಗಳಲ್ಲಿ ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಪತಿ ಹೆಚ್ಚು ಮದ್ಯ ಸೇವನೆಯಿಂದ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದ. ಇದರಿಂದಾಗಿ ದೇವಿ ತೊಮಾಂಗ್​ ಬಾಬು ಅಲಿ ಜೊತೆ ಸಂಬಂಧ ಬೆಳೆಸಿದ್ದಳು. ಆಗಾಗ ವಡೇರಹಳ್ಳಿಯ ರಾಕೇಶ್ ನಿವಾಸಕ್ಕೆ ಬಾಬು ಬರುತಿದ್ದ. ಈ ನಡುವೆ ಪತಿಗೆ ಪತ್ನಿಯ ಮೇಲೆ ಅನೈತಿಕ ಸಂಬಂಧದ ಬಗ್ಗೆ ಅನುಮಾನ ಮೂಡಿತ್ತು. ಬಳಿಕ ಆಕೆಗೆ ಎಚ್ಚರಿಕೆ ಸಹ ನೀಡಿದ್ದ.
ಪತಿ ಇದ್ದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಭಾವಿಸಿ, ಬಾಬು ಜೊತೆ ಸೇರಿಕೊಂಡು ನವೆಂಬರ್ 6ರಂದು ನಿದ್ರೆ ಮಂಪರಿನಲ್ಲಿದ್ದ ರಾಕೇಶ್​ನನ್ನು ಕತ್ತು ಇಸುಕಿ ದೇವಿ ತೊಮಂಗ್​ ಕೊಲೆ ಮಾಡಿದ್ದಳು. ಇದಾದ ಬಳಿಕ ಅತಿಯಾಗಿ ಮದ್ಯ ಸೇವಿಸಿ ಎದೆ ಉರಿಯಿಂದ ಮೃತಪಟ್ಟಿದ್ದಾನೆಂದು ನಾಟಕವಾಡಿದ್ದಳು. ಆದರೆ ಕತ್ತಿನ ಮೇಲೆ ಗಾಯದ ಗುರುತು ಕಂಡಿದ್ದ ಪೊಲೀಸರು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಪತ್ನಿಯ ಕಳ್ಳಾಟ ಬಯಲಾಗಿದೆ.
ಪ್ರಕರಣ ಸಂಬಂಧ ಮೃತ ರಾಕೇಶ್ ಪತ್ನಿ ದೇವಿ ತೊಮಾಂಗ್ ಹಾಗೂ ಆಕೆಯ ಬಾಯ್ ಫ್ರೆಂಡ್ ಜೈನುಲ್ ಅಲಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
MRI ಸ್ಕ್ಯಾನಿಂಗ್​ ಮಾಡಿಸಲು ಬರ್ತಿದ್ದ ಮಹಿಳೆಯರಿಗೆ ಈತ ರಹಸ್ಯವಾಗಿ ಎಸಗುತ್ತಿದ್ದ ನೀಚ ಕೃತ್ಯ ಬಯಲು!

ಹಾರಾಟದ ವೇಳೆ ವಿಮಾನಗಳ ನಡುವೆ ಡಿಕ್ಕಿ! ಅಪಘಾತದ ಭಯಾನಕ ವಿಡಿಯೋ ವೈರಲ್​

ಐಪಿಎಲ್​ನಲ್ಲಿ ಆಡುತ್ತೀರಾ? ವರದಿಗಾರನ ಪ್ರಶ್ನೆಗೆ ಬಾಬರ್​ ಅಜಾಮ್​ ಕೊಟ್ಟ ಪ್ರತಿಕ್ರಿಯೆ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
