ಬೆಂಗಳೂರು:ವಯಸ್ಸು ಮೀರಿದೆ ಎಂಬ ಕಾರಣಕ್ಕೆ ಬಿಜೆಪಿ ವರಿಷ್ಟರು ಬಿ.ಎಸ್​. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಿದ್ದಾರೆ. ಬಿಎಸ್‌ವೈ ಸಹ ಪಕ್ಷವನ್ನು ತಾಯಿಗೆ ಹೋಲಿಸಿದ್ದಾರೆ. ಇತರೆ ಸಮುದಾಯದ‌ ಮಠಾಧೀಶರು ಬಿಎಸ್‌ವೈಗೆ ಬೆಂಬಲ ಸೂಚಿಸಿದ್ದಾರೆ. ಬಿಎಸ್‌ವೈ ಕೇವಲ ಲಿಂಗಾಯತ ನಾಯಕರಾಗಲಿಲ್ಲ. ಸರ್ವ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿದ್ರು. ಜನಾನುರಾಗಿ ಸಿಎಂ ಆಗಿದ್ದಾರೆ ಎಂದು‌ ನಿಡುಮಾಮಿಡಿ‌ ಶ್ರೀಗಳು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸರ್ಕಾರದ ರಚನೆಯ ಸಂದರ್ಭದಲ್ಲಿ ಅಪಕೀರ್ತಿಗೂ ಒಳಗಾದ್ರು‌. ಅತ್ಯಂತ ದಕ್ಷತೆ ಹಾಗೂ ಕ್ರೀಯಾಶೀಲರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನೆರೆ ಹಾಗು ಬರ ಸಮಸ್ಯೆ, ಎಸ್‌ಎಂ ಕೃಷ್ಣ ಇದ್ದಾಗ ಎದುರಾಗಿತ್ತು. ಅಂದು‌ ಬಿಟ್ರೆ ಈಗ ಬಿಎಸ್‌ವೈ ಅವಧಿಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಸರಿಯಾಗಿ ನಿಭಾಯಿಸಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.
ಬಿಎಸ್‌ವೈ ಸರ್ವ ಸಮುದಾಯಗಳ ಸದ್ಭಾವನೆ ಪಡೆದು‌ ಸಿಎಂ ಆಗಿದ್ದಾರೆ. ಸಮಸ್ತ‌ ವೀರಶೈವ ಸಮುದಾಯದ ಸದ್ಭಾವನೆ ಪಡೆದಿದ್ದಾರೆ. ಬಿಜೆಪಿ ಸರ್ಕಾರವನ್ನು ಕಷ್ಟಪಟ್ಟು ರಚಿಸಿದ್ದಾರೆ. ಆದ್ರೆ ಅವರನ್ನು ಅವಧಿಪೂರ್ವದಲ್ಲಿಯೇ ಕೆಳಕ್ಕೆ ಇಳಿಸಲಿದ್ದಾರೆ‌ ಎಂಬ ವದಂತಿ ಇದೆ. ಸಿಎಂ ಸ್ಥಾನದಿಂದ ಹೈಕಮಾಂಡ್ ಕೆಳಗಿಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ‌. ಈ ಹಿನ್ನೆಲೆ ಸ್ವಾಮೀಜಿಗಳು ತಮ್ಮ ನಿಲುವನ್ನು ತಿಳಿಸಲು ಸುದ್ದಿಗೋಷ್ಟಿ ನಡೆಸಿದರು.
ಬಿಜೆಪಿ ವರಿಷ್ಠರು ಮಠಾಧೀಶರ ಮಾತಿಗೆ ಗೌರವ ಹಾಗು ಮನ್ನಣೆ ನೀಡಬೇಕು. ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವಯಸ್ಸಿನ ವಿಚಾರ, ಪಕ್ಷದ ವಿಚಾರವನ್ನೂ ನಾನು ಒಪ್ಪುತ್ತೇನೆ. ಬಿಎಸ್‌ವೈ ಸರಿಸಾಟಿಯಾಗಬಲ್ಲ ನಾಯಕ ಸದ್ಯಕ್ಕೆ ಯಾರೂ‌ ಇಲ್ಲ. ಮುಂದಿನ ದಿನಗಳಲ್ಲಿ ಕಾಣಬಹುದು ಎಂಬ ನಿರೀಕ್ಷೆ ಇದೆ ಎಂದರು.
ಕೋವಿಡ್ 3ನೇ ಅಲೆ ಬರುತ್ತಿದೆ‌ನೆರೆ ಪರಿಸ್ಥಿತಿ‌ ಎದುರಾಗಿದೆ. ಇಂತಹ‌ ವೇಳೆ ಬದಲಾವಣೆ ಅವಶ್ಯಕತೆ ಏನಿದೆ? 6 ತಿಂಗಳಾದ್ರೂ ಅವರನ್ನು ಮುಂದುವರೆಸಿ. ಮಠಾಧೀಶರ ಮಾತಿಗೆ ಬೆಲೆ ಕೊಡಿ. ನಂತರ ನಿಮ್ಮ ಇಚ್ಛೆಯಂತೆ ನಡೆದುಕೊಳ್ಳಿ. ತಮಿಳುನಾಡಿನಲ್ಲಿ 75 ಮೀರಿದ ವ್ಯಕ್ತಿಯನ್ನು ಸಿಎಂ ಎಂದು ಬಿಂಬಿಸಿ ಚುನಾವಣೆ ಎದುರಿಸಿತ್ತು. ಪಕ್ಷದ ಒಂದೊಂದು ಕಡೆ ಒಂದೊಂದು ನಿಯಮ ಪಾಲಿಸಬಾರದು ಎಂದು ಶ್ರೀಗಳು ತಿಳಿಸಿದರು.
ಸಮರ್ಥರು ಅನೇಕರಿದ್ದಾರೆನಿರಾಣಿ, ಬೊಮ್ಮಾಯಿ, ಸೋಮಣ್ಣ, ಮಾಧುಸ್ವಾಮಿ ಇದ್ದಾರೆ. ವೀರಶೈವ ಲಿಂಗಾಯತ ಅನ್ನೋದು ನೂರಾರು ಸಮುದಾಯ ಹಾಗೂ ಉಪಜಾತಿಗಳ ಧರ್ಮ ಇದು. ಆ ಕಾರಣಕ್ಕೆ ಈ ಧರ್ಮದವರನ್ನೇ ಸಿಎಂ ಮಾಡಿ ಅನ್ನೋದು 2ನೇ ವಿನಂತಿ. ಬಿಎಸ್‌ವೈ ಸ್ವಇಚ್ಚೆಯಿಂದ ಕೆಳಕ್ಕೆ ಇಳಿಯಲು ಸಿದ್ದರಿಲ್ಲ. ಅವರನ್ನು ಒತ್ತಾಯ ಪೂರ್ವಕವಾಗಿ ‌ಇಳಿಸಲಾಗುತ್ತಿದೆ. ಆ‌ ಕಾರಣದಿಂದ ಸ್ವಾಮೀಜಿಗಳು ಅವರೊಟ್ಚಿಗೆ‌ ಇದ್ದಾರೆ. ಹಸ್ತಕ್ಷೇಪ, ಆರೋಪ ರಹಿತ ಉತ್ತಮ ಆಡಳಿತ ನೆರವೇರಿಸಿ‌ ಎಂದು ಸೂಚಿಸಿ. ಮಠಾಧೀಶರ ಮಾತಿಗೆ ಗೌರವ ಕೊಟ್ಟಾಗ ನಿಮಗೂ ಒಳ್ಳೆಯದಾಗುತ್ತೆ ಎಂದರು.
ಧಾರವಾಡದ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿ ಮಾತನಾಡಿ ಬಿಎಸ್‌ವೈ ಸಮರ್ಥರು. ಪಕ್ಷವನ್ನು ಕಟ್ಟೋದಕ್ಕೆ ಹೋರಾಟ ಮಾಡಿದ್ದಾರೆ. ಅವರೇ ಇನ್ನೂ ಕೆಲ‌ಕಾಲ ಅವರೇ ಸಿಎಂ ಆಗಿ‌ ಮುಂದುವರೆಯಬೇಕು. ನಾನು ವೈಯಕ್ತಿಕವಾಗಿ ಸಹಮತ ಸೂಚಿಸಿದ್ದೇನೆ. ಅವಧಿ ಮುಗಿಯುವವರೆಗೂ ಅವರೇ ಇರಬೇಕು. ಆಗದಿದ್ದಲ್ಲಿ ಮಾತ್ರ ಬೇರೆಯವರನ್ನು ಸೂಚಿಸಬೇಕು. ಇವತ್ತಿನ ಪಕ್ಷವನ್ನು ಕಟ್ಟಿದವರಲ್ಲಿ ಅವರೇ ಪ್ರಮುಖರು. ಇದನ್ನೇ‌ ಮೇಲಿನವರಲ್ಲಿ‌ ಕೇಳಿಕೊಳ್ಳುತ್ತೇವೆ ಎಂದರು.
ಅಮಿತ್‌ ಷಾ‌ ವಿರುದ್ದ ಬನವಾಸಿ ಮಠದ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಬಿಎಸ್‌ವೈ ಪೂರ್ಣ ಅವಧಿ ಸಿಎಂ ಆಗ್ತಾರೆ‌ ಅಂತ ಮಾತು ಕೊಟ್ರಿ. ಈಗ್ಯಾಕೆ ಅದನ್ನು ನಿಭಾಯಿಸೋಕೆ ಆಗಲ್ಲ. ಪ್ರಹ್ಲಾದ ಜೋಶಿಯನ್ನು ಸಿಎಂ ಮಾಡಿ, ಬೇಸರ ಇಲ್ಲ. ಯಾರನ್ನು ಸಿಎಂ ಮಾಡಬೇಕೋ,‌ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿ. ನಾವು ಮಠಾಧೀಶರು, ರಾಜಕೀಯದೊಳಗೆ‌ ಪ್ರವೇಶ ಇಲ್ಲ. ನಾವು ನ್ಯಾಯವನ್ನು ಕೇಳ್ತಿರೋದು,. ಬೇರೆ ಏನೂ ಅಲ್ಲ. ಇದು ಧರ್ಮದ ಸಭೆ . ರಾಜಕೀಯ ಸಭೆ ಅಲ್ಲ‌ ಎಂದರು.
50ಕ್ಕೂ ಹೆಚ್ಚು ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ಬಂದಿರುವ ಸ್ವಾಮೀಜಿಗಳು.
ಅತಿಯಾದ ಸ್ಮಾರ್ಟ್​ಫೋನ್​ ಬಳಕೆಯಿಂದ ಕಣ್ಣಿನೊಳಗೆ ಹುಳು ಬೆಳೆಯುತ್ತಾ? ಅಸಲಿ ಸಂಗತಿ ಇಲ್ಲಿದೆ..!
ಸಂಜೆ ಹೈಕಮಾಂಡ್​ನಿಂದ ಸಂದೇಶ ಬರಲಿದ್ದು, ಬಳಿಕ ಏನಾಗಲಿದೆ ಎಂದು ನಿಮಗೇ ಗೊತ್ತಾಗುತ್ತೆ: ಸಿಎಂ ಬಿಎಸ್​ವೈ
ಎದುರುಮನೆ ಯುವಕನ ಪರಿಚಯ: ಹೆಣ್ಣು ಮಕ್ಕಳೊಂದಿಗೆ ಮನೆಬಿಟ್ಟ ಮಹಿಳೆಯಿಂದ ಪತಿಗೆ ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 16 =
Remember me
