ಬೆಂಗಳೂರು:ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರನ್ನು ಬಂಧನ ಮಾಡಿದೆ.
ಬಂಧಿತರನ್ನು ಅಬ್ದುಲ್​ ಮತೀನ್​ ಮತ್ತು ಮುಸ್ಸಾವೀರ್​ ಹುಸೇನ್​ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪ್ರಮುಖ ಸಂಚುಕೋರರು ಎಂದು ಹೇಳಲಾಗಿದೆ. ಆದರೂ ಈ ಬಗ್ಗೆ ಎನ್​ಐಎ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಮಾರ್ಚ್​ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಫೋಟ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶಂಕಿತ ಬಾಂಬರ್​ ರವೆ ಇಡ್ಲಿ ತಿಂದು, ಬಾಂಬ್​ ಇಟ್ಟು ಪರಾರಿಯಾಗಿದ್ದ. ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.
ಈ ಪ್ರಕರಣದ ಶಂಕಿತ ಬಗ್ಗೆ ಮಾಹಿತಿ ನೀಡಿದರೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್​ಐಎ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಕರ್ನಾಟಕದ ವಿವಿಧ ಬಸ್‌ಗಳಲ್ಲಿ ಪ್ರಯಾಣಿಸುವ ಹಲವಾರು ದೃಶ್ಯಗಳನ್ನು ಎನ್​ಐಎ ಬಿಡುಗಡೆ ಮಾಡಿತ್ತು.
ಇಲ್ಲಿಯವರೆಗೆ ನಾಲ್ವರ ಬಂಧನರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಇಲ್ಲಿಯವರೆಗೆ ನಾಲ್ವರನ್ನು ಎನ್​ಐಎ ಬಂಧಿಸಿದೆ. ಈ ಹಿಂದೆ ಮಾಜ್​ ಮುನೀರ್​ ಮತ್ತು ಮುಜಾಮಿಲ್​ ಶರೀಫ್​ ಎಂಬುವರನ್ನು ಎನ್​ಐಎ ಬಂಧಿಸಿತ್ತು. ಶಂಕಿತ ಶರೀಫ್​, ಬಾಂಬರ್​ಗೆ ಲಾಜಿಸ್ಟಿಕ್​ ಬೆಂಬಲ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಶರೀಫ್​ ಹೇಳಿಕೆಯನ್ನು ಆಧರಿಸಿ ಮಾಜ್​ ಮುನೀರ್​ನನ್ನು ಬಂಧಿಸಲಾಗಿದೆ. ಈತ ಶಿವಮೊಗ್ಗ ಸ್ಫೋಟ ಮತ್ತು ಮಂಗಳೂರು ಗಲಭೆ ಪ್ರಕರಣದ ಶಂಕಿತನಾಗಿದ್ದಾನೆ.
ಲೋಕಸಮರ 2024: ಎಲ್ಲಿ ಹೋದರು ಮಾಯಾವತಿ? ಚುನಾವಣಾ ಕಣದಿಂದ ಮಿಸ್ಸಿಂಗ್​!

ಡಿಕೆ ಆರ್ಭಟ ಕಂಡು ಕೀಟಲೆ ಮಾಡಿದ ರೋಹಿತ್! ಸ್ಟಂಪ್​ ಮೈಕ್‌ನಲ್ಲಿ ಸೆರೆಯಾದ ಮಾತುಗಳು ವೈರಲ್​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 + twelve =
Remember me
