ಬೆಂಗಳೂರು:ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಆರೋಪಿ ಕಾರು ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಅಚ್ಚರಿಯ ವಿಷಯವೇನೆಂದರೆ ಹಿಟ್​ ಅಂಡ್​ ರನ್​ ಮಾಡಿದ ಕಾರು, ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗು ಉದ್ಯಮಿ ರಾಜ್​ ಕುಂದ್ರಾಗೆ ಸೇರಿದ್ದಾಗಿದೆ.
AUDI R8 ಹೆಸರಿನ ಐಶಾರಾಮಿ ಕಾರು ಫೆ. 7ರ ಮಧ್ಯಾಹ್ನದಂದು ಆಟೋ ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಅಜಾಗರೂಕ ಚಾಲನೆಯಿಂದ ಆರೋಪಿ ಮಹಮ್ಮದ್​ ಸದ್ದಾಂ ಅಪಘಾತ ಎಸಗಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಕಾರಿನ ಬಗ್ಗೆ ಆರ್​ಟಿಒ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಎಂಬುದು ಪತ್ತೆಯಾಗಿದೆ.
ಇದನ್ನೂ ಓದಿರಿ:ಸಚಿವ ಸಿ.ಪಿ. ಯೋಗೇಶ್ವರ್​ಗೆ ತವರಿನಲ್ಲೇ ಮುಖಭಂಗ: ಪ್ರಾಬಲ್ಯ ಮೆರೆದ ಎಚ್​ಡಿಕೆ
ಎರಡು ತಿಂಗಳ ಹಿಂದೆಯೇ ಮುಂಬೈ ಕಾರು ಡೀಲರ್​ ಮೂಲಕ ಬೆಂಗಳೂರು ಮೂಲದ ಕಾರು ಡೀಲರ್​ಗೆ ರಾಜ್​ ಕುಂದ್ರಾ ಕಾರು ಮಾರಾಟ ಮಾಡಿದ್ದರು. ಆದರೆ, ಇನ್ನೂ ಹೊಸ ಖರೀದಿದಾರನ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗಿಲ್ಲ. ಹೀಗಾಗಿ, ಮಾರಾಟವಾಗಿ ಎರಡು ತಿಂಗಳು ಆದರೂ ಕಾರಿನ ದಾಖಲೆಗಳು ಇನ್ನು ರಾಜ್ ಕುಂದ್ರಾ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ.
RTO ಮೂಲಕ ಕಾರು ಮಾಲೀಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಎಂಬುದು ಸಂಚಾರ ತನಿಖೆ ವೇಳೆ ಪತ್ತೆಯಾಗಿದೆ. ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಐಶಾರಾಮಿ ಕಾರು ಮತ್ತು ಚಾಲಕ ಮಹಮ್ಮದ್​ನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ಬಿಟಿಎಂ 2ನೇ ಹಂತದ ನಿವಾಸಿ.
ಇದನ್ನೂ ಓದಿರಿ:ಪತ್ನಿ ಉಡುಗೊರೆಯಾಗಿ ಕೊಟ್ಟ ಬೈಕ್​ ಒರೆಸುವಾಗ ಪತಿಗೆ ಕಾದಿತ್ತು ಬಿಗ್​ ಶಾಕ್..!​
ಬಂಧಿಯಾಗಿರುವ ಮಹ್ಹಮ್ಮದ್​ ವಿರುದ್ಧ ಈ ಮೊದಲೇ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.(ದಿಗ್ವಿಜಯ ನ್ಯೂಸ್​)
100 ವಾಹನಗಳ ನಡುವೆ ಸರಣಿ ಅಪಘಾತ: ಐವರು ಸಾವು, ಅನೇಕರ ಸ್ಥಿತಿ ಗಂಭೀರ

ಪತ್ನಿ ಉಡುಗೊರೆಯಾಗಿ ಕೊಟ್ಟ ಬೈಕ್​ ಒರೆಸುವಾಗ ಪತಿಗೆ ಕಾದಿತ್ತು ಬಿಗ್​ ಶಾಕ್..!​

ಬಟ್ಟೆ ಒಗೆಯೋದಂದ್ರೆ ದೀಪಿಕಾ ಪಡುಕೋಣೆಗೆ ಬಲು ಇಷ್ಟವಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 15 =
Remember me
