ಬೆಂಗಳೂರು:ಕರೊನಾ ಲಾಕ್​ಡೌನ್​ನಿಂದಾಗಿ ಲಕ್ಷಾಂತರ ಕೂಲಿ ಕಾರ್ವಿುಕರು ಕೆಲಸವಿಲ್ಲದೆ ಸಮಸ್ಯೆಗೆ ಸಿಲುಕು ವಂತಾಗಿದೆ. 2 ಲಕ್ಷಕ್ಕೂ ಹೆಚ್ಚಿರುವ ಆಟೋ, ಓಲಾ, ಉಬರ್ ಚಾಲಕರು ಕೂಡ ಆದಾಯವಿಲ್ಲದೆ ಸಾಲದ ಸುಳಿಗೆ ಸಿಲುಕುವಂತಾಗಿದೆ.
ಕರೊನಾ ಹರಡುವ ಭೀತಿಯಿಂದಾಗಿ ಮಾ. 22 ರಿಂದಲೇ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆ ಸ್ಥಗಿತಗೊಳಿಸಲಾಗಿದೆ. ನಿತ್ಯ ಬಾಡಿಗೆ ಆಧಾರದಲ್ಲಿ ಮಾಲೀಕ ರಿಂದ ಆಟೋ ತಂದು ದುಡಿಮೆ ಮಾಡುತ್ತಿದ್ದ ಲಕ್ಷಕ್ಕೂ ಹೆಚ್ಚು ಚಾಲಕರು ಕಳೆದ ಒಂದು ತಿಂಗಳಿನಿಂದ ಆದಾಯವಿಲ್ಲದೆ ಪರ ದಾಡುತ್ತಿದ್ದಾರೆ.
ಸಾಲ ತೀರಿಸಲಾಗದೆ ಸಮಸ್ಯೆ:ಬೆಂಗಳೂರಿನಲ್ಲಿ 1.25 ಲಕ್ಷಕ್ಕೂ ಹೆಚ್ಚಿನ ಆಟೋಗಳಿವೆ. ಅದರಲ್ಲಿ ಶೇ. 80 ಆಟೋಗಳ ಚಾಲಕರು ಸಾಲ ಮಾಡಿ ಆಟೋ ಖರೀದಿ ಮಾಡಿದ್ದಾರೆ. ಅವರು ನಿತ್ಯ 2ರಿಂದ 3 ಸಾವಿರ ರೂ.ವರೆಗೆ ದುಡಿಯುತ್ತಾರೆ. ಅದರಲ್ಲಿ ಮಾಸಿಕ 6ರಿಂದ 10 ಸಾವಿರ ರೂ. ಸಾಲಕ್ಕಾಗಿ ಮೀಸಲಿಟ್ಟು, ಉಳಿದ ಹಣದಲ್ಲಿ ಆಟೋಗೆ ಇಂಧನ ತುಂಬಿಸುವುದು ಸೇರಿ ಇನ್ನಿತರ ಖರ್ಚು ನೋಡಿಕೊಳ್ಳಬೇಕಾಗುತ್ತದೆ. ಬಾಡಿಗೆ ಆಧಾರದಲ್ಲಿ ಬೇರೆಯವರಿಂದ ಆಟೋ ತಂದಿದ್ದರೆ ಮಾಲೀಕರಿಗೆ ನಿತ್ಯ 1 ಸಾವಿರ ರೂ. ನೀಡಬೇಕು. ನಿತ್ಯದ ದುಡಿಮೆಯನ್ನೇ ನೆಚ್ಚಿಕೊಂಡವರಿಗೆ ಈಗ ಆಹಾರ, ಮನೆ ಬಾಡಿಗೆ ಪಾವತಿಸಲು ಕಷ್ಟವಾಗಿದೆ.
ಓಲಾ, ಉಬರ್ ಚಾಲಕರೂ ಹೊರತಲ್ಲ: ಓಲಾ ಮತ್ತು ಉಬರ್​ನಂತಹ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಚಾಲಕರ ಸಮಸ್ಯೆ ಆಟೋ ಚಾಲಕರಿಗಿಂತ ಭಿನ್ನವಾಗಿಲ್ಲ. ಬಹುತೇಕ ಓಲಾ ಮತ್ತು ಉಬರ್ ಚಾಲಕರು ತಮ್ಮ ಕಾರುಗಳಿಗೆ ತಾವೇ ಮಾಲೀಕರಾಗಿದ್ದಾರೆ. ಬೆಂಗಳೂರಿನಲ್ಲೇ 1 ಲಕ್ಷಕ್ಕೂ ಹೆಚ್ಚಿನ ಓಲಾ, ಉಬರ್ ಚಾಲಕರಿದ್ದಾರೆ. ಅವರು ಕೂಡ 10ರಿಂದ 15 ಸಾವಿರ ರೂ.ವರೆಗೆ ಬ್ಯಾಂಕ್​ಗಳಿಗೆ ಸಾಲ ಪಾವತಿಸಬೇಕು. ಈಗ ಆದಾಯ ಇಲ್ಲದಿರುವುದರಿಂದ ಸಾಲದ ಕಂತು ಪಾವತಿ ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್ ಮುಗಿದರೂ ತಕ್ಷಣಕ್ಕೆ ಓಲಾ ಮತ್ತು ಉಬರ್ ಸೇವೆ ಆರಂಭವಾಗುವುದು ಅನುಮಾನ ಎಂಬುದು ಚಾಲಕರನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ಮಾಲೀಕರಿಗೂ ನಷ್ಟ
ಚಾಲಕರಿಗೆ ಆಟೋ ನೀಡಿ ದಿನದ ಬಾಡಿಗೆ ಪಡೆಯುತ್ತಿರುವ ಮಾಲೀಕರು ಕೂಡ ಸಂಕಷ್ಟದಲ್ಲಿದ್ದಾರೆ. ಆಟೋ ಮೂಲಕ ಬರುವ ಆದಾಯವನ್ನೇ ನಂಬಿಕೊಂಡಿದ್ದ ಅವರಿಗೂ ಆದಾಯವಿಲ್ಲದಂತಾಗಿದೆ. ಹೀಗಾಗಿ ಆಟೋ ಖರೀದಿಗೆ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆಟೋಗಳು ನಿಂತಲ್ಲೇ ನಿಂತಿರುವುದರಿಂದ ಲಾಕ್​ಡೌನ್ ಮುಗಿದ ನಂತರ ರಿಪೇರಿ ಮಾಡಿಸಿಯೇ ಅವುಗಳನ್ನು ರಸ್ತೆಗಿಳಿಸಬೇಕಿದೆ.
| ಗಿರೀಶ್ ಗರಗ
ಕರೊನಾ ಕಪಿಮುಷ್ಟಿ ಚುನಾವಣಾ ದೃಷ್ಟಿ: ಬಿಬಿಎಂಪಿ ಬಜೆಟ್​ನಲ್ಲಿ ಮಹಾನಗರ ಜನತೆಗೆ ಸಿಕ್ಕ ಬಂಪರ್​ ಕೊಡುಗೆಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
