ಬೆಂಗಳೂರು:ಕಾಮುಕನೊಬ್ಬ ಲೇಡಿಸ್​ ಟಾಯ್ಲೆಟ್​ ಒಳಗೆ ನುಗ್ಗಿದ ಘಟನೆ ನಿನ್ನೆ (ಜ.10) ಬೆಳಗ್ಗೆ 8 ಗಂಟೆ ಸುಮಾರಿಗೆ ಜಯನಗರದ ವಿಜಯ ಕಾಲೇಜಿನಲ್ಲಿ ನಡೆದಿದೆ.
ನಿನ್ನೆ ವಿದ್ಯಾರ್ಥಿನಿಯೊಬ್ಬರು ಶೌಚಾಗೃಹದ ಒಳಗೆ ಹೋಗಿದ್ದಾರೆ. ಈ ವೇಳೆ ಅದೇ ಶೌಚಗೃಹದ ಒಳಗಡೆ ಯುವಕನೊಬ್ಬ ನುಗ್ಗಿದ್ದಾನೆ. ಬಳಿಕ ವಿದ್ಯಾರ್ಥಿನಿಯ ಜೊತೆ ಆತ ಅಸಭ್ಯ‌ವಾಗಿ ವರ್ತಿಸಿದ್ದಾನೆ. ತಕ್ಷಣ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದಾಗ, ಆತ ಗಾಬರಿಯಿಂದ ಟಾಯ್ಲೆಟ್​ನ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿಯನ್ನು ಟಾಯ್ಲೆಟ್ ರೂಂನಲ್ಲೇ ಲಾಕ್‌ ಮಾಡಿ ಓಡಿ ಹೋಗಿದ್ದ. ಇದೀಗ ಈ ಘಟನೆ ಕಾಲೇಜು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿದ್ದು, ಘಟನೆಯನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ. ಹೊರಗಡೆಯಿಂದ ಕಾಲೇಜಿಗೆ ಯಾರೋ ಬಂದಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿದ ಕಾಲೇಜಿನ ಆಡಳಿತ ಮಂಡಳಿ ಜಯನಗರ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ತುನಿವು ಸಿನಿಮಾ ಬಿಡುಗಡೆ ಸಂಭ್ರಮ: ಟ್ರಕ್​ನಿಂದ ಕೆಳಗೆ ಬಿದ್ದು ಅಜಿತ್​ ಅಭಿಮಾನಿ ದುರಂತ ಸಾವು!

ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

ಬೈಕ್​ ಹಿಂಬದಿ ಸೀಟ್​ನಲ್ಲಿ ಪತ್ನಿ ಕೂರಿಸಿಕೊಂಡು ಅಪಾಯಕಾರಿ ಸಾಹಸ ಮಾಡಿದ ಗಂಡ: ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fifteen =
Remember me
