ಬೆಂಗಳೂರು:ಪಾದರಾಯನಪುರ ಪುಂಡರಿಂದ ಇದೀಗ ಕರೊನಾ ಭೀತಿಯಿಲ್ಲದೇ ಶಾಂತವಾಗಿರುವ ರಾಮನಗರಕ್ಕೂ ಕೋವಿಡ್​-19 ಭಯ ಕಾಡುತ್ತಿದೆ.
ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ 54 ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಪ್ಲಾನ್​ ಮಾಡಲಾಗಿದೆ.
ರಾಮನಗರ ಜಿಲ್ಲಾ ಕಾರಾಗೃಹದಲ್ಲಿನ 177 ಕೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಪ್ರತ್ಯೇಕವಾಗಿ ರವಾನೆ ಮಾಡಿದ ಬಳಿಕ ಕರೊನಾ ಹಾಟ್​ಸ್ಟಾಪ್​ ಗಲಭೆಕೋರರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುತ್ತಿರುವುದಕ್ಕೆ ಅಲ್ಲಿನ ಕೈದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ನಾವು ತೆರಳುವುದಿಲ್ಲ. ಬೆಂಗಳೂರಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ರಾಮನಗರ ಜೈಲಿನಿಂದ ನಮ್ಮನ್ನು ಶಿಫ್ಟ್ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲೆ ಕರೊನಾ ಪ್ರಕರಣದಲ್ಲಿ ಗ್ರೀನ್ ಜೋನ್​ನಲ್ಲಿದೆ. ಇದುವರೆಗೂ ಯಾವುದೇ ಕರೊನ ಪ್ರಕರಣ ರಾಮನಗರದಲ್ಲಿ ಪತ್ತೆಯಾಗಿಲ್ಲ. ಆದರೆ, ಪಾದರಾಯನಪುರದ ಕರೊನ ಶಂಕಿತ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುತ್ತಿರುವುದರಿಂದ ರಾಮನಗರಕ್ಕೂ ಕರೊನಾ ಭಯ ಕಾಡಲು ಶುರುವಾಗಿದೆ.(ದಿಗ್ವಿಜಯ ನ್ಯೂಸ್​)
ಲಾಕ್​ಡೌನ್​​ ನಡುವೆಯೇ ಬಿಗ್​ಬಾಸ್​ ವಿಜೇತ ಅಕುಲ್ ಬಾಲಾಜಿ ವಿರುದ್ಧ ಎಫ್​ಐಆರ್ ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 7 =
Remember me
