ಬೆಂಗಳೂರು:ಇತ್ತೀಚಿನ ವರ್ಷಗಳಲ್ಲಿ ಆನ್​ಲೈನ್​ ಶಾಪಿಂಗ್​ ಸಖತ್​ ಟ್ರೆಂಡ್​ ಆಗುತ್ತಿದ್ದು, ಕುಳಿತಲ್ಲಿಯೇ ಏನು ಬೇಕಾದರೂ ಆರ್ಡರ್​ ಮಾಡಿ ತೆಗೆದುಕೊಳ್ಳಬಹುದಾಗಿದೆ. ನಾವು ಆರ್ಡರ್​ ಮಾಡಿದ ವಸ್ತು ನಮ್ಮ ಕೈಸೇರಿದ ನಂತರ ಅದನ್ನು ಒಮ್ಮೆ ತೆಗೆದು ಪರಿಶೀಲಿಸುತ್ತೇವೆ. ಕೆಲವೊಮ್ಮೆ ಬೇರೆ ವಸ್ತು ಬಂದಿರುತ್ತದೆ. ಇನ್ನೂ ಕೆಲವೊಮ್ಮೆ ವಸ್ತುವಿನ ಕ್ವಾಲಿಟಿ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಹಿಂತಿರುಗಿಸುತ್ತೇವೆ. ಆದರೆ, ಆರ್ಡರ್​ ಮಾಡಿದ ವಸ್ತುವಿನ ಬದಲು ಹಾವು ಬಂದರೆ ಆಗೇನು ಮಾಡುವುದು. ಈ ಬಗ್ಗೆ ಬೆಂಗಳೂರು ಮೂಲದ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸರ್ಜಾಪುರ ನಿವಾಸಿಗಳಾದ ದಂಪತಿಗಳು ಆನ್​ಲೈನ್​ ಶಾಪಿಂಗ್​ ದೈತ್ಯ ಅಮೆಜಾನ್​ನಲ್ಲಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಬುಕ್ ಮಾಡಿದ್ದಾರೆ. ಪಾರ್ಸೆಲ್​ ತೆರೆಯುತ್ತಿದ್ದಂತೆ ಹಾವನ್ನು ನೋಡಿ ಬೆಚ್ಚಿಬಿದ್ದ ದಂಪತಿಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಂಪನಿ ಸ್ಪಷ್ಟನೆ ನೀಡಿದೆ.
In a shocking incident, a family on Sarjapur Road received a live Spectacled Cobra with their Amazon order for an Xbox controller.The venomous snake was fortunately stuck to packaging tape, preventing harm.#ITReel#Sarjapur#AmazonOrder#SnakeInAmazonOrderpic.twitter.com/EClaQrt1B6
ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆಗೆ ಡಿಕೆಶಿ ಕ್ಯಾಂಡಿಡೇಟ್​?​; ತಮ್ಮ ಸ್ಪರ್ಧೆ ಕುರಿತು ಪರೋಕ್ಷ ಸುಳಿವು ನೀಡಿದ ಡಿಸಿಎಂ
ಸಾಫ್ಟ್‌ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಆರ್ಡರ್​ ಮಾಡಿದ್ದರು. ಅದರಂತೆ ಪಾರ್ಸೆಲ್​​ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್​​ ಓಪನ್​​ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್‌ಬಾಕ್ಸ್‌ ಕಂಟ್ರೋಲರ್ ಬದಲಾಗಿ ನಾಗರಹಾವು ಎಡೆ ಎತ್ತಿ ನಿಂತಿರುವುದನ್ನು ಕಂಡು ದಂಗಾಗಿದ್ದಾರೆ. ಹಾವನ್ನು ಕಂಡು ಕೂಡಲೇ ಬಾಕ್ಸ್​ ಮುಚ್ಚಿರುವ ದಂಪತಿ ತಮಗಾದ ಅನುಭವವನ್ನು ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ. ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಂಪನಿಯು ದಂಪತಿಗೆ ಎಕ್ಸ್​ ಬಾಕ್ಸ್​ನ ಸಂಪೂರ್ಣ ಹಣವನ್ನು ವಾಪಸ್​ ನೀಡಿದ್ದಾರೆ. ಆದರೆ, ಆ ಪಾರ್ಸೆಲ್​ನೊಳಗೆ ಹಾವು ಹೇಗೆ ಸೇರಿಕೊಂಡಿತ್ತು ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್​​​ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಆದರೆ ಪಾರ್ಸೆಲ್​​ ಒಳಗಡೆ ಜೀವಂತ ಹಾವು ಹೇಗೆ ಬಂತು ಎಂಬುದು ಸದ್ಯ ಪ್ರಶ್ನೆಯಾಗಿ ಉಳಿದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − six =
Remember me
