ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.
ಗೌತಮ್ ಮತ್ತು ಶ್ರೀಕಾಂತ ಮೃತ ಯುವಕರು. ಇವರು ಮಂಜುನಾಥ್​ ನಗರದ ನಿವಾಸಿಗಳು. ಸ್ವಿಗ್ಗಿ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುತ್ತಿದ್ದರು. ನಗರದ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ನಿನ್ನೆ (ಮಂಗಳವಾರ) ತಡರಾತ್ರಿ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್​ನಲ್ಲಿ ಊಟ ಡೆಲಿವರಿ ಕೊಡಲು ಹೋಗಿದ್ದರು.
ಇದನ್ನೂ ಓದಿರಿ:ಜಿಂಕೆ ಕಣ್ಣಿನ ಗುಡ್ಡೆಯಲ್ಲಿ ಕೂದಲು: ಜೀವಂತ ಪ್ರಾಣಿಯನ್ನು ಕೊಂದಿದ್ದೇಕೆಂದು ತಿಳಿದ್ರೆ ಕಣ್ಣೀರು ಬರುತ್ತೆ!
ಡೆಲಿವರಿ ಕೊಟ್ಟು ವಾಪಸ್ ಬೈಕ್ ಮೇಲೆ ಬಂದು ಕುಳಿತಿದ್ದರು. ಬಳಿಕ ಅಲ್ಲಿಂದ ಹೊರಟ ಕೆಲವೇ ಸೆಕೆಂಡ್​ಗಳಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಕಾರು ನೋಡು ನೋಡುತ್ತಿದ್ದಂತೆ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿ ಬಿದ್ದ ಯುವಕರಿಬ್ಬರ ಪ್ರಾಣವು ಸಹ ಹಾರಿ ಹೋಗಿದೆ.
ಸಿಲಿಕಾನ್​ ಸಿಟಿಯಲ್ಲಿ ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.#Bengaluru#DeliveryBoy#BikeAccident#RoadAccident#CarAccident#HitAndRunpic.twitter.com/poYoIpEcLk
— Vijayavani (@VVani4U)February 24, 2021

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್​ ಎನಿಸುವಂತಿದೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಕ್ಕಳ ಹಠಕ್ಕೆ ಮಣಿದು ಬೈಕ್, ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡ್ಲೇಬೇಕು..!

ಕಿದ್ವಾಯಿ-ನಿಮ್ಹಾನ್ಸ್ ಮಾದರಿ ಇನ್ನಷ್ಟು ಆಸ್ಪತ್ರೆ; ರಾಜ್ಯದಲ್ಲಿ ವಲಯವಾರು ಕೇಂದ್ರಗಳ ಆರಂಭಕ್ಕೆ ಸಿಎಂ ನಿರ್ಧಾರ

ಬಿಗ್​ಬಾಸ್​ ಆರಂಭಕ್ಕೆ ದಿನಗಣನೆ; ಮನೆಯಲ್ಲಿ ಧೂಳೆಬ್ಬಿಸ್ತಾರಾ ಈ ಸೆಲೆಬ್ರಿಟಿಗಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
