ಬೆಂಗಳೂರು:ಆತಂಕಕಾರಿ ಘಟನೆಯೊಂದರಲ್ಲಿ 17ನೇ ಮಹಡಿಯಿಂದ ಬಿದ್ದು ಸಾಯಲು ಹೊರಟ್ಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ಬಹಳ ನಾಜೂಕಾಗಿ ರಕ್ಷಿಸಿದ್ದಾರೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶುಕ್ರವಾರ ಬೆಳಗ್ಗೆ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಶುಭಾ ರಕ್ಷಣೆಗೊಳಗಾದ ಯುವತಿ. ದೆಹಲಿ ಮೂಲದ ಶುಭಾ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ. ಕೆಲ‌ ವರ್ಷಗಳ‌ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದ ಶುಭಾ, ತಾಯಿಯ ವರ್ಷದ ಕಾರ್ಯಕ್ಕಾಗಿ ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್‌ ಸನ್‌ರೈಸ್ ಅಪಾರ್ಟೆಂಟ್​ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಆದರೆ, ಲಾಕ್​ಡೌನ್ ಇದ್ದಿದ್ದರಿಂದ ದೆಹಲಿಗೆ ಮರಳಲು ಸಾಧ್ಯವಾಗಿರಲಿಲ್ಲ.
ತಾಯಿ ಸಾವಿನಿಂದ ಸಾಕಷ್ಟು ನೊಂದಿದ್ದ ಶುಭಾ, ವರ್ಷದ ಕಾರ್ಯದ ವೇಳೆ ತಾಯಿಯ ನೆನಪಾಗಿ ಇನ್ನಷ್ಟು‌ ನೊಂದಿದ್ದಳು. ಹೀಗಾಗಿ ಸಾಯಲು‌ ನಿರ್ಧಾರ ಮಾಡಿದ್ದಳು ಎನ್ನಲಾಗಿದೆ. ಅಪಾರ್ಟ್ಮೆಂಟ್​ನ 17ನೇ ಮಹಡಿ ಏರಿದ್ದ ಶುಭಾ, ಭಯಗೊಂಡು ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತತಿದ್ದಳು. ಈ ವೇಳೆ ಇದನ್ನು ಗಮನಿಸಿದ ಅಪಾರ್ಟ್ಮೆಂಟ್​ನ ಅಸೋಸಿಯೇಷನ್ ವ್ಯಕ್ತಿ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಾಳ್ಮೆ ಹಾಗು ಬುದ್ಧಿವಂತಿಕೆಯಿಂದ ಶುಭಾಳನ್ನು ಬಚಾವ್ ಮಾಡಿದರು. ಶುಭ ಕೂಡ ಅಗ್ನಿಶಾಮಕ ಸಿಬ್ಬಂದಿಗಳ ಮಾತಿಗೆ ಸ್ಪಂದಿಸಿದಳು.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/1089560808087403/
ವೈದ್ಯರ ಮಹಾ ಎಡವಟ್ಟು; ಯುವತಿಯೋರ್ವಳಿಗೆ ಶಸ್ತ್ರಚಿಕಿತ್ಸೆ ಮಾಡಿದರು..ಹೊಟ್ಟೆಯೊಳಗೆ ಈ ವಸ್ತುವನ್ನೇ ಬಿಟ್ಟರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
