ಬೆಂಗಳೂರು:ವಿವಾಹೇತರ ಸಂಬಂಧ (Extra marital affairs) ಹೊಂದಿದ್ದ 35 ವರ್ಷದ ಮಹಿಳೆ (Woman)ಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯಾಘಾತದಿಂದ 67 ವರ್ಷದ ವೃದ್ಧ ಮೃತಪಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಪುಟ್ಟೇನಹಳ್ಳಿಯ ನಿವಾಸಿ ಸುಬ್ರಮಣಿಯನ್ (67) ಸಾವಿಗೀಡಾದ ವೃದ್ಧ. ನ. 16ರಂದು ಕಾಣೆಯಾಗಿದ್ದ. ಬಳಿಕ 17 ರಂದು ಶವವಾಗಿ ಪತ್ತೆಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ ನಂತರ ಸಾವಿನ ಸತ್ಯ ಸಂಗತಿ ಬಯಲಾಗಿದೆ.
ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ಸುಬ್ರಮಣಿಯನ್ ಅನೈತಿಕ ಸಂಬಂಧ ಹೊಂದಿದ್ದ. ನ. 16 ರಂದು ಸಂಜೆ ಮೊಮ್ಮಗನನ್ನು ಶಾಲೆಗೆ ಬಿಟ್ಟು ಮಹಿಳೆ ಮನೆಗೆ ಸುಬ್ರಮಣಿಯನ್ ತೆರಳಿದ್ದ. ಅಲ್ಲಿ ಮಹಿಳೆ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಬೆಡ್​ ಮೇಲೆಯೇ ಹೃದಯಾಘಾತದಿಂದ ಸುಬ್ರಮಣಿಯನ್ ಮೃತಪಟ್ಟಿದ್ದ.
ಈ ಘಟನೆಯಿಂದ ಸಮಾಜದಲ್ಲಿ ನನ್ನ ಹೆಸರು ಕೆಡತ್ತದೆ ಎಂದು ಹೆದರಿದ್ದ ಮಹಿಳೆ, ತಕ್ಷಣ ತನ್ನ ಗಂಡ ಮತ್ತು ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು. ಬಳಿಕ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಸುಬ್ರಮಣಿಯನ್ ಮೃತದೇಹವನ್ನು ತುಂಬಿ, ಜೆಪಿ ನಗರದ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದರು.
ಸುಬ್ರಮಣಿಯನ್ ಮರಳಿ ಮನೆಗೆ ಬಾರದಿದ್ದನ್ನು ಮನಗಂಡ ಕುಟುಂಬ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಗುರುತೇ ಇಲ್ಲದ ಶವ ಪತ್ತೆಯಾಗಿತ್ತು. ಶವದ ಬಗ್ಗೆ ಮಾಹಿತಿ ಕಲೆಹಾಕಿದಾಗ ಅದು ಸುಬ್ರಮಣಿಯನ್ ಎಂಬುದು ಗೊತ್ತಾಯಿತು. ಮರೋಣತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿಯಿತು. ಅಲ್ಲದೆ, ಮನೆ ಕೆಲಸದಾಕೆಯ ಮನೆಗೆ ಹೋಗಿದ್ದ ಸಂಗತಿ ಗೊತ್ತಾಗಿ ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದು, ಪ್ರಕರಣ ಬಯಲಿಗೆ ಬಂದಿದೆ.
ಸದ್ಯ ಮಹಿಳೆ ಮತ್ತು ಆಕೆಯ ಪತಿ ಮತ್ತು ಸಹೋದರನ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಸಾಕ್ಷಿನಾಶ ಆರೋಪದಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಆರೋಪಿಗಳು ಬೇಲ್ ಪಡೆದಿದಿದ್ದಾರೆಂದು ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

ಸಂಸದೆ ಸುಮಲತಾ ಆಪ್ತನ BJP ಸೇರ್ಪಡೆಗೆ ಡೇಟ್​ ಫಿಕ್ಸ್​! ಸ್ವಾಭಿಮಾನಿ ಸಂಸದೆಯ ನಿಲುವಿಗೆ ಬಿಜೆಪಿಗರ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
